ಪಂಚಮಸಾಲಿ ಹೋರಾಟಕ್ಕೆ ತಾತ್ಕಾಲಿಕ ವಿರಾಮ..! CM ಭರವಸೆಯೊಂದಿಗೆ ಹೋರಾಟ ಅಂತ್ಯಗೊಳಿಸಿದ ಜಯಮೃತ್ಯುಂಜಯ ಶ್ರೀ..!
2ಎ ಮೀಸಲಾತಿಗಾಗಿ ಕಳೆದ 64 ದಿನಗಳಿಂದ ಪಂಚಮಸಾಲಿ ಸಮುದಾಯ ಹೋರಾಟ ನಡೆಸುತ್ತಲೇ ಇದೆ. ಪಂಚಮಸಾಲಿ ಸಮುದಾಯದ ಸ್ವಾಮೀಜಿ ಜಯಮೃತ್ಯುಂಜಯ ಸ್ವಾಮೀಜಿ ತಮ್ಮ ಸಮುದಾಯಕ್ಕೆ 2ಎ ಮೀಸಲಾತಿ ನೀಡಬೇಕು ಎಂದು ಕಳೆದ ಕೆಲವು ದಿನಗಳಿಂದ ಫ್ರೀಡಂ ಪಾರ್ಕ್ನಲ್ಲಿ ಸತ್ಯಾಗ್ರಹ ನಡೆಸುತ್ತಿದ್ದಾರೆ. ಆದರೆ ಈಗ ಪಂಚಮಸಾಲಿ ಸಮುದಾಯದ ಹೋರಾಟಕ್ಕೆ ತೆರೆ ಬಿದ್ದಿದೆ. ಸ್ವಾಮೀಜಿ ಕೂಡಾ ಹೋರಾಟಕ್ಕೆ ತೆರೆ ಎಳೆದಿದ್ದಾರೆ
ಪಂಚಮಸಾಲಿ ಸಮುದಾಯಕ್ಕೆ 2-ಎ ಮೀಸಲಿಗೆ ಕಳೆದ 64 ದಿನಗಳಿಂದ ನಡೆಯುತ್ತಿದ್ದ ಹೋರಾಟಕ್ಕೆ ತಾತ್ಕಾಲಿಕ ತೆರೆ ಬಿದ್ದಿದೆ. ಸರ್ಕಾರ 6 ತಿಂಗಳ ಸಮಯಾವಕಾಶ ಪಡೆದ ಹಿನ್ನೆಲೆಯಲ್ಲಿ ಹೋರಾಟ ಅಂತ್ಯಗೊಳಿಸಿರೋದಾಗಿ ಶ್ರೀ ಬಸವ ಜಯ ಮೃತ್ಯುಂಜಯ ಸ್ವಾಮೀಜಿ ಹೇಳಿದ್ದಾರೆ. ಸದನದಲ್ಲಿ ಮೀಸಲು ವಿಚಾರ ಕುರಿತಂತೆ ಉತ್ತರ ನೀಡಿದ್ದ ಸಿಎಂ ಬಿಎಸ್ವೈ ಆರು ತಿಂಗಳಲ್ಲಿ ಈ ಕುರಿತು ಸರ್ಕಾರ ಹಿಂದುಳಿದ ವರ್ಗಗಳ ಆಯೋಗದಿಂದ ವರದಿ ಪಡೆದು ಕ್ರಮ ಕೈಗೊಳ್ಳೋದಾಗಿ ತಿಳಿಸಿದ್ದರು. ಹೀಗಾಗಿ ಸದನದ ಒಳಗೆ ಧರಣಿ ಕೈಬಿಟ್ಟಿದ್ದ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್, ಫ್ರೀಡಂ ಪಾರ್ಕ್ಗೆ ಸಚಿವ ಸಿಸಿಪಾಟೀಲ್ ಸಮೇತ ಬಂದು ಶ್ರೀಗಳನ್ನು ಮನವೊಲಿಸಿದ್ದರು. ಹೀಗಾಗಿ ಶೇಂಗಾ ಹೋಳಿಗೆ ಸೇವಿಸಿ ಪಂಚಮಸಾಲಿ ಪೀಠದ ಶ್ರೀಗಳು ಅಹೋರಾತ್ರಿ ಧರಣಿಯನ್ನು ಕೈಬಿಟ್ಟರು.