Daily Horoscope: ದಿನಭವಿಷ್ಯ 16-03-2021 Today astrology

ಮೇಷ ರಾಶಿ :
ಈ ರಾಶಿಯವರಿಗೆ ಆಸ್ತಿಪಾಸ್ತಿ ವಿಚಾರದಲ್ಲಿ ಸಕಾರಾತ್ಮಕ ಬೆಳವಣಿಗೆ ಸಾಧ್ಯತೆ ಇದೆ. ಸ್ವಂತ ಮನೆಯ ಕನಸು ಸಾಕಾರಗೊಳ್ಳುವ ಅವಕಾಶ ಇದೆ. ದೇಹ ತೂಕ ಇಳಿಸಿಕೊಳ್ಳುವ ರೆಸಲ್ಯೂಷನ್ ಮಾಡಿದವರಿಗೆ ಯಶಸ್ಸು ಸಿಗುತ್ತದೆ. ಸ್ನೇಹಿತರ ಬಳಗದ ಜೊತೆ ಪ್ರವಾಸ ಹೋಗುವ ಭಾಗ್ಯವೂ ಇದೆ. ಸಾಮಾಜಿಕವಾಗಿ ಛಾಪು ಮೂಡಿಸುವ ನಿಮ್ಮ ಪ್ರಯತ್ನಕ್ಕೆ ನಿರೀಕ್ಷಿತ ಫಲ ಸಿಗುವ ಸಾಧ್ಯತೆ ತುಸು ಕಡಿಮೆ ಇದೆ. ನಿಮಗೆ ಸಿಗುವ ಅವಕಾಶವನ್ನು ಸರಿಯಾಗಿ ಬಳಕೆ ಮಾಡಿಕೊಳ್ಳಲು ವಿಫಲವಾಗಬಹುದಾದರೂ ಬದ್ಧತೆಯಿಂದ ಪ್ರಯತ್ನಿಸಿದರೆ ಫಲ ಸಾಧ್ಯ. ಕೆಲಸದ ಸ್ಥಳದಲ್ಲಿ ನಿಮ್ಮ ಹೊಸ ಪ್ರಯತ್ನಕ್ಕೆ ಯಶಸ್ಸು ಸಿಗಬಹುದು. ನೀವು ಅಸಮಾಧಾನಗೊಂಡಿರುವ ವ್ಯಕ್ತಿಯ ಜೊತೆ ಒಳ್ಳೆಯ ಸಂಬಂಧ ಕುದುರಿಸಿದರೆ ಮಾನಸಿಕವಾಗಿ ನಿಮಗೆ ನಿರಾಳತೆ ತರಬಹುದು. ಪ್ರೇಮ ಸಂಬಂಧದಲ್ಲಿರುವವರಿಗೂ ಸಕಾರಾತ್ಮಕ ದಿನ ಇದಾಗಬಹುದು.

ವೃಷಭ ರಾಶಿ :
ಇವತ್ತು ನಿಮ್ಮ ಸಂಗಾತಿ ಅಥವಾ ಕುಟುಂಬ ಸದಸ್ಯರೊಬ್ಬರ ಜೊತೆ ಮನಸ್ತಾಪ ಆಗಬಹುದು. ನಿಮಗೆ ಆಪ್ತವೆನಿಸುವ ವ್ಯಕ್ತಿಯನ್ನ ನೀವು ಭೇಟಿಯಾಗುವ ಯೋಗ ಇದೆ. ನಿಮ್ಮ ಪೂರ್ವಜರ ಆಸ್ತಿಯನ್ನು ಒಳ್ಳೆಯ ಬೆಲೆಗೆ ಮಾರಾಟ ಮಾಡಬಹುದು. ಪ್ರಮುಖ ಕಾರ್ಯಗಳನ್ನ ಕೈಗೊಳ್ಳುವಾಗ ಎಚ್ಚರ ತಪ್ಪದಿರಿ ಜೋಕೆ. ಹಣಕಾಸು ವಿಚಾರದಲ್ಲಿ ತಜ್ಞರ ಸಲಹೆ ಅಗತ್ಯ ಇರುತ್ತದೆ. ಪ್ರೇಮ ಸಂಬಂಧದಲ್ಲಿರುವವರಿಗೆ ಖುಷಿಯಾಗುವ ಬೆಳವಣಿಗೆ ಆಗಬಹುದು.

ಮಿಥುನ ರಾಶಿ :
ಕುಟುಂಬದ ಜೊತೆ ಹೊರಗೆ ಹೋಗುವ ಅವಕಾಶ ಇದೆ. ಪ್ರಮುಖ ಆಸ್ತಿ ಗಳಿಸುವ ನಿಮ್ಮ ಕನಸು ನನಸಾಗಬಹುದು. ಶೈಕ್ಷಣಿಕ ರಂಗದಲ್ಲಿ ನಿಮಗೆ ಸಿಕ್ಕ ಅವಕಾಶ ಸದ್ಬಳಕೆ ಮಾಡಿಕೊಳ್ಳಿ. ಅನವಶ್ಯಕ ವೆಚ್ಚದ ಬಗ್ಗೆ ಎಚ್ಚರವಿರಲಿ. ಅನಾರೋಗ್ಯ ಹೊಂದಿರುವವರಿಗೆ ಚೇತರಿಕೆ ಆಗಲಿದೆ. ಬಹುರಾಷ್ಟ್ರೀಯ ಕಂಪನಿಗಳಲ್ಲಿ ಕೆಲಸ ಮಾಡುತ್ತಿರುವವರಿಗೆ ಕೆಲಸದ ಅಭದ್ರತೆ ಮುಂದುವರಿಯುತ್ತದೆ.

ಕಟಕ ರಾಶಿ :
ಪ್ರೇಮ ಸಂಬಂಧದಲ್ಲಿರುವವರು ಒಂದು ಹೆಜ್ಜೆ ಮುಂದೆ ಹೋಗುವ ಯೋಗ ಇದೆ. ನಿಮ್ಮ ಮನೆಯೇ ಹಲವು ಕೆಲಸ ಕಾರ್ಯಗಳಿಗೆ ಕೇಂದ್ರಬಿಂದುವಾಗಲಿದೆ. ಆಸ್ತಿ ವ್ಯಾಜ್ಯ ಹೊಂದಿರುವವರು ಸಮಸ್ಯೆ ನಿವಾರಣೆಗೆ ಒಂದು ಹೆಜ್ಜೆ ಮುಂದಿಡಬಹುದು. ಹಣಕಾಸು ವಿಚಾರದಲ್ಲಿ ಒಳ್ಳೆಯ ಬೆಳವಣಿಗೆ ಆಗಲಿದೆ. ಕೆಲಸದ ಸ್ಥಳದಲ್ಲಿ ನಿಮ್ಮ ಬಾಕಿ ಕೆಲಸಗಳನ್ನ ಮುಗಿಸುವ ಸಾಧ್ಯತೆ ಇದೆ.

 

ಸಿಂಹ ರಾಶಿ :
ಕುಟುಂಬದೊಳಗಿನ ವ್ಯಾಜ್ಯವನ್ನೋ ಅಥವಾ ಭಿನ್ನಾಭಿಪ್ರಾಯವನ್ನೋ ಶಮನಗೊಳಿಸುವ ನಿಮ್ಮ ಪ್ರಯತ್ನ ಫಲಗೂಡಬಹುದು. ಆಸ್ತಿ ವ್ಯಾಜ್ಯವನ್ನ ಬಗೆಹರಿಸಲು ಹೊರಗಿನವರ ಸಹಾಯಹಸ್ತ ಸಿಗಬಹುದು. ಶೈಕ್ಷಣಿಕ ವಿಚಾರದಲ್ಲಿ ನೀವು ಹರಸಾಹಸ ಪಡಬೇಕಾಗುತ್ತದೆ. ಅನಿರೀಕ್ಷಿತ ಮೂಲಗಳಿಂದ ನಿಮಗೆ ಹೆಚ್ಚುವರಿ ಹಣ ಬರಬಹುದು. ಆರೋಗ್ಯ ಕಾಳಜಿ ಇರುವ ಸ್ನೇಹಿತರ ಬಳಗದ ಸಂಪರ್ಕಕ್ಕೆ ನೀವು ಬರಬಹುದು.

ಕನ್ಯಾ ರಾಶಿ :
ನಿಮ್ಮ ಲವಲವಿಕೆ ಸ್ವಭಾವವು ಮನೆಯಲ್ಲಿ ಒಳ್ಳೆಯ ವಾತಾವರಣಕ್ಕೆ ಕಾರಣವಾಗುತ್ತದೆ. ರಸ್ತೆಯಲ್ಲಿ ಸಂಚರಿಸುವಾಗ ಅಪಾಯ ಬರಬಹುದಾದ್ದರಿಂದ ತರಾತುರಿ ಬದಲು ನಿಧಾನವಾಗಿ ಚಲಿಸುವುದು ಒಳಿತು. ಹಾಳಾದ ಸಂಬಂಧವೊಂದನ್ನ ಸುಧಾರಿಸಲು ನಿಮಗೆ ಮನಸಾಗಬಹುದು. ಬೋನಸ್ ಅಥವಾ ಇಂಕ್ರಿಮೆಂಟ್ ಭಾಗ್ಯ ನಿಮ್ಮದಾಗಬಹುದು. ನಿಮ್ಮ ದೈಹಿಕ ಕಸರತ್ತನ್ನು ಮುಂದುವರಿಸಬೇಕು. ಪ್ರೇಮ ಸಂಬಂಧದಲ್ಲಿರುವವರ ಎದೆಯಲ್ಲಿ ಇವತ್ತು ರೋಮಾಂಚನದ ರಸಧಾರ ಉಕ್ಕೇರಬಹುದು.

ತುಲಾ ರಾಶಿ :
ಅಭಿಪ್ರಾಯಭೇದ ಇರುವ ವ್ಯಕ್ತಿಯೊಂದಿಗೆ ನಿಮ್ಮ ಸಂಬಂಧ ಸುಧಾರಿಸಲು ಇದು ಸಕಾಲ. ಸ್ನೇಹಿತರೊಂದಿಗೆ ಮೋಜು ಮಸ್ತಿಗೆ ಹೊರಹೋಗುವ ಯೋಗ ಕೆಲವರಲ್ಲಿದೆ. ಶಿಕ್ಷಣ ರಂಗದಲ್ಲಿ ಬೇರೊಬ್ಬ ವ್ಯಕ್ತಿಗೆ ನೀವು ಮಾಡುವ ಸಹಾಯ ಬಹಳ ಸಮಾಧಾನ ತರುತ್ತದೆ. ಹಣಕಾಸು ಯೋಗ ಚೆನ್ನಾಗಿದೆ. ನಿಮ್ಮ ಇಚ್ಛೆಯ ವೃತ್ತಿಗೆ ಅಡಿ ಇಡಲು ಇವತ್ತು ಸುಲಭ ಆಗಬಹುದು. ಪ್ರೇಮಿಗಳಿಗೆ ತುಸು ನಿರಾಶೆಯ ದಿನ.

ವೃಶ್ಚಿಕ ರಾಶಿ :
ನೀವು ಮನೆಯಲ್ಲಿ ಮಾಡುವ ಕೆಲ ಬದಲಾವಣೆಗಳು ಎಲ್ಲರಿಗೂ ಖುಷಿ ತರುತ್ತದೆ. ಯಾರನ್ನಾದರೂ ಭೇಟಿ ಮಾಡಲು ನೀವು ಊರ ಹೊರಗೆ ಹೋಗಬೇಕಾಗಬಹುದು. ನಿಮ್ಮ ಹಿಂದಿನ ಹೂಡಿಕೆಗಳಿಗೆ ಇವತ್ತು ಒಳ್ಳೆಯ ಫಲ ಸಿಗುವ ನಿರೀಕ್ಷೆ ಇದೆ. ವೃತ್ತಿರಂಗದಲ್ಲಿ ಒಳ್ಳೆಯ ಪ್ರಗತಿ ಇರುತ್ತದೆ. ಆಸ್ತಿಯಲ್ಲಿ ಹೂಡಿಕೆ ಮಾಡುವುದು ಒಳ್ಳೆಯದು. ಆರೋಗ್ಯಪೂರಕ ಜೀವನ ಶೈಲಿಯನ್ನು ನೀವು ಅಳವಡಿಕೆ ಮಾಡಿಕೊಳ್ಳಬಹುದು. ಪ್ರೇಮಿಗಳಿಗೆ ಆತಂಕ ಎದುರಾಗಬಹುದು.

 

ಧನಸ್ಸು ರಾಶಿ :
ಹಣಕಾಸು ಸ್ಥಿತಿ ಉತ್ತಮಗೊಳ್ಳುತ್ತದೆ. ಪ್ರವಾಸಕ್ಕೆ ಹೋದರೆ ನಿಮಗೆ ಹೊಸ ಅನುಭವ ಸಿಗಬಹುದು. ರಿಯಲ್ ಎಸ್ಟೇಟ್ ವ್ಯವಹಾರಸ್ಥರಿಗೆ ಒಳ್ಳೆಯ ದಿನ ಇದು. ಶಿಕ್ಷಣ ವಿಚಾರದಲ್ಲಿ ನಿಮಗೆ ಈ ಮೊದಲು ಕಿರಿಕಿರಿ ಎನಿಸಿದ ವಿಷಯದಲ್ಲಿ ಆಸಕ್ತಿ ಮೂಡಬಹುದು. ನೀವು ಮಾಡುವ ವೆಚ್ಚ ಸಮಾಧಾನ ತರಬಲ್ಲುದು. ವೃತ್ತಿಪರರಿಗೆ ಒಳ್ಳೆಯ ದಿನವೂ ಹೌದು. ಪ್ರೇಮಿಗಳಿಗೂ ಒಳ್ಳೆಯ ದಿನ.

ಮಕರ ರಾಶಿ :
ನಿಮ್ಮ ಪೂರ್ವಿಕರ ಆಸ್ತಿಯಲ್ಲಿ ನಡೆಯುವ ಪಾಲು ಎಲ್ಲರಿಗೂ ಸಮಾಧಾನ ತರುತ್ತದೆ. ನಿಮ್ಮ ವೈಯಕ್ತಿಕ ಕೆಲಸವೊಂದಕ್ಕೆ ಆಪ್ತರೊಬ್ಬರ ಸಹಾಯ ಸಿಗುತ್ತದೆ. ನಿಮ್ಮ ಜೀವನಶೈಲಿಯಲ್ಲಿ ಬದಲಾವಣೆ ಮಾಡಿಕೊಂಡರೆ ಆರೋಗ್ಯಕ್ಕೆ ಒಳಿತು. ರಾತ್ರಿ ಹೊತ್ತು ಪ್ರಯಾಣಿಸುವಾಗ ಎಚ್ಚರ. ನವ ವಿವಾಹಿತರಿಗೆ ಖುಷಿ ತರುವ ದಿನ ಇದು.

ಕುಂಭ ರಾಶಿ :
ಆಸ್ತಿ ಗಳಿಕೆ ಸಾಧ್ಯತೆ ಇದೆ. ಸೂಕ್ಷ್ಮವಾಗಿ ಗಮನ ಹರಿಸಲು ಸಾಧ್ಯವಾಗದ ನಿಮ್ಮ ಮನಃಸ್ಥಿತಿಯಿಂದ ಮುಜುಗರದ ಸ್ಥಿತಿ ಏರ್ಪಡಬಹುದು. ಆರೋಗ್ಯ ವಿಚಾರದಲ್ಲಿ ಬೇರೊಬ್ಬರ ಸಲಹೆ ನಿಮ್ಮಲ್ಲಿ ಅದ್ಭುತ ಮನಃಪರಿವರ್ತನೆ ತರಬಹುದು. ಮೆಡಿಕಲ್ ಅಥವಾ ಎಂಜಿನಿಯರಿಂಗ್ ವೃತ್ತಿಪರರಿಗೆ ಕಷ್ಟದ ದಿನ ಇದು. ನಿಮ್ಮ ಸಹೋದರ ಅಥವಾ ಮಗುವಿನ ಭೇಟಿ ಆಗಲಿದೆ. ನವವಿವಾಹಿತರಿಗೆ ಸಂಗಾತಿ ಜೊತೆ ಸಂಭ್ರಮಿಸುವ ದಿನ ಇದು. ಪಿಕ್​ನಿಕ್​ಗೆ ಹೋದವರಿಗೆ ಅದ್ಭುತ ಅನುಭವ ಆಗಬಹುದು.

ಮೀನ ರಾಶಿ :
ರಿಯಲ್ ಎಸ್ಟೇಟ್ ವ್ಯವಹಾರಿಗಳಿಗೆ ಒಳ್ಳೆಯ ಕಮಿಷನ್ ಸಿಗಬಹುದು. ಪ್ರಭಾವಿ ವ್ಯಕ್ತಿಗಳ ಸಂಪರ್ಕ ಸಿಗಬಹುದು. ಫಿಟ್ನೆಸ್​ಗೆ ಹೊಸ ಡಯಟ್​ಗೆ ನೀವು ಕೈ ಹಾಕಬಹುದು. ನೀವು ಚೆನ್ನಾಗಿ ಗಳಿಸುತ್ತೀರಿ ಹಾಗೂ ಜೀವನತೃಪ್ತಿಗೆ ವೆಚ್ಚವನ್ನೂ ಮಾಡುತ್ತೀರಿ. ವೃತ್ತಿಪರ ರಂಗದಲ್ಲಿ ಹೆಚ್ಚಿನ ಕೆಲಸದ ಒತ್ತಡ ನಿಮಗೆ ಬಾಧೆಯಾಗಬಹುದು. ಮನೆಯಲ್ಲಿ ನಿಮಗೆ ಒಳ್ಳೆಯ ಬೆಳವಣಿಗೆಯಾಗುವ ದಿನ ಇದು.

S S Benakanalli

Founder , Director Of KK NEWS KANNADA _ S S BENAKANAHALLI

Leave a Reply

Your email address will not be published. Required fields are marked *