ಗ್ರಾಹಕರಿಗೆ ಉತ್ತಮ ಸೇವೆ ನೀಡುವಲ್ಲಿ ಜೆಸ್ಕಾಂ ಶ್ರಮಿಸುತ್ತಿದೆ
ತಾಲೂಕಿನಲ್ಲಿ ಗ್ರಾಹರಿಗೆ ಜೆಸ್ಕಂ ಇಲಾಖೆ ಸಮರ್ಪಕ ಸೇವೆ ನೀಡುವಲ್ಲಿ ಶ್ರಮಿಸುತ್ತಿದೆ ಎಂದು ಕಲಬುರಗಿ ಗ್ರಾಮೀಣ ವಿಭಾಗ-1. ಕಾರ್ಯನಿರ್ವಾಹಕ ಅಭಿಯಂತರರು(ವಿ) ಸಂತೋಷಕುಮಾರ ಚವ್ವಾಣ. ಹೇಳಿದರು. ಆಳಂದ ಉಪವಿಭಾಗದಲ್ಲಿ ಬರುವ ವಿದ್ಯತ್ ಗ್ರಾಹಕರ ಕುಂದು ಕೊರತೆ ನಿವಾರಣೆ ಮತ್ತು ಜನ ಸಂಪರ್ಕ ಸಭೆಯಲ್ಲಿ ಮಾತನಾಡಿದರು. ಗ್ರಾಮೀಣ ಮತ್ತು ಪಟ್ಟಣ ಪ್ರದೇಶದಲ್ಲಿ ವಿದ್ಯುತ್ ಸರಬರಾಜಿನಲ್ಲಿ ಕಡಿಯವಾಗದಂತೆ ಸೇವೆ ನೀಡುವುದು ನಮ್ಮ ಕೆಲಸವಾಗಿದೆ ಸರಿಯಾದ ರೀತಿಯಲ್ಲಿ ಗ್ರಾಹಕರಿಗೆ ವಿದ್ಯುತ್ ನೀಡದರೆ ಅದು ಇಲಾಖೆಗೆ ಹೆಸರು ತರುತ್ತದೆ. ಗ್ರಾಹಕರೊಂದಿಗೆ ಇಲಾಖೆ ಸಿಬ್ಬಂದಿಗಳು ಉತ್ತಮ ಭಾಂದ್ಯವ್ಯ ಇಟ್ಟುಕೊಂಡು ಯಾವುದೆ ಸಮಸ್ಯೆ ಬರದಂತೆ ನೋಡಕೊಳ್ಳಬೇಕು ಎಂದರು, ಆಳಂದ ಉಪ ವಿಭಾಗದ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರು(ವಿ) ಮಾಣಿಕರಾವ ಕುಲಕರ್ಣಿ ಮಾತನಾಡಿ ಗ್ರಾಹಕರಿಗೆ ನಾವು ಉತ್ತಮ ವಿದ್ಯುತ್ ನೀಡುತ್ತವೆ ತುರ್ತು ಸಂಧರ್ಬದಲ್ಲಿ ವಿದ್ಯುತ್ ನಿಲ್ಲುಗಡೆಯಾದರೆ ಸಾರ್ವಜನಿಕರು ಇಲಾಖೆಯೊಂದಿಗೆ ಸಹಕರಿಸಬೇಕು ಅದರೊಂದಿಗೆ ಪ್ರತಿ ತಿಂಗಳು ವಿದ್ಯುತ್ ಬಿಲ್ ಬಾಕಿ ಉಳಿಸಕೊಳ್ಳದೆ ಗ್ರಾಹಕರು ಕಟ್ಟಿ ಜೆಸ್ಕಂ ಇಲಾಖೆ ತಮಗೆ ಇನ್ನಷ್ಟು ಉತ್ತಮ ಸೇವೆ ನೀಡುವಲ್ಲಿ ಸಹರಿಸಬೇಕು ಎಂದರು.ಗ್ರಾಹಕರಿಗೆ ಹೆಚ್ಚು ಬಿಲ್ ಬರುವುದು ಮೀಟರ್ ಸರಿಯಾಗಿ ಕೆಲಸ ಮಾಡದೆ ಇರವುದು ಇತರ ಸಮಸ್ಯೆಗಳ ಕುರಿತು ಗ್ರಾಹಕರೊಂದಿಗೆ ಚರ್ಚೆ ನಡೆಸಲಾಯಿತು.ಸಿಬ್ಬಂದಿಗಳಾದ ನಿಂಬೆಣ್ಣಾ ಪೂಜಾರಿ ಸಹಾಯಕ ಲೆಕ್ಕಧಿಕಾರಿಗಳು ಜೆ.ಇ.ಗಳಾದ ಪರಮೇಶ್ವರ ಬಡಿಗೇರ. ಜ್ಞಾನೇಶ್ವರ ನನ್ನಾಜಿ. ಮೈಸೂರ ಜಾದವ. ಪ್ರಭಾಕರ ದೆನೇಕಿ. ಥಾಮಸ್ ಭಾವಿಕಟ್ಟಿ. ಶಶಿಕಾಂತ ಸರಸಂಭಿಕರ.ಇತರರು ಇದ್ದರು.