ನನ್ನನ್ನ ಹೊರಗೆ ಹಾಕೋಕೆ ಯಾರಿಗೂ ತಾಕತ್ತಿಲ್ಲ – ಬಸನಗೌಡ ಪಾಟೀಲ್​ ಯತ್ನಾಳ್

ಬೆಂಗಳೂರು: ನಾನು ಬಿಜೆಪಿ ಶಾಸಕರ ಹೇಳಿಕೆಗೆ ಪ್ರತಿಕ್ರಿಯೆ ಕೊಡಲ್ಲ, ನನ್ನ ಎಲ್ಲಾ ಪ್ರಶ್ನೆಗಳನ್ನು ಕೇಳಿದ್ದೇನೆ ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರು ಬುಧವಾರ ಹೇಳಿದ್ದಾರೆ. ನಗರದಲ್ಲಿಂದು ಮಾಧ್ಯಮದ ಜೊತೆ ಮಾತನಾಡಿದ ಅವರು, 21 ಜನರ ಕುಟುಂಬ ಮಾರಿಷಸ್​ಗೆ ಹೋಗಿತ್ತು. ವಿಜಯೇಂದ್ರ ಕುಟುಂಬ ಅಲ್ಲಿಗೆ ಹೋಗಿತ್ತು. ಅಲ್ಲಿ ಹೋಗಿದ್ದು ಏತಕ್ಕೆ(?) ಇದು ರಾಜ್ಯದ ಜನರಿಗೆ ಗೊತ್ತಾಗಬೇಕು. ಶಿವಮೊಗ್ಗಕ್ಕೆ ಹೆಲಿಕಾಪ್ಟರ್​ನಲ್ಲೇ ಓಡಾಟ ಮಾಡುತ್ತಿದ್ದಾರೆ ಇದರ ಬಗ್ಗೆ ಸಾಕ್ಷಿ ಏನಿದೆ ಅಂತ ಕೇಳಿದರು. ಸಾಕ್ಷ್ಯ ಇಲ್ಲೇ ಇದೆ ನೋಡಿ ಎಂದು ಯತ್ನಾಳ್ ಅವರು ದಾಖಲೆ ಸಮೇತ ತೋರಿಸಿದ್ದಾರೆ.

ಇನ್ನು ಕೋಟ್ಯಂತರ ರೂ. ಅವ್ಯವಹಾರದ ಬಗ್ಗೆ ಪ್ರಶ್ನೆ ಮಾಡಿ, ಚೀಫ್ ಜಡ್ಜ್ ಅವರೇ ಇದನ್ನ ಎತ್ತಿ ಹಿಡಿದಿದ್ದಾರೆ. ಎರಡು ಪ್ರಕರಣದಲ್ಲಿ ಸಿಎಂಗೆ 25 ಸಾವಿರ ದಂಡ ವಿಧಿಸಿದೆ. ಸುಪ್ರೀಂನಲ್ಲಿ ಬಂಧನ ಮಾಡದಂತೆ ಸ್ಟೇ ತಂದಿದ್ದಾರೆ. ಶಿವರಾಂ ಕಾರಂತ್ ಬಡವಾಣೆ ಕೇಸ್ ಇದೆ. ಗಂಗೇನಹಳ್ಳಿ ಡಿನೋಟಿಫಿಕೇಶನ್ ಕೇಸ್ ಇದೆ. ಈ ಪರಿಸ್ಥಿತಿ ಬಗ್ಗೆ ಇಂದು ಹೈಕೋರ್ಟ್ ಕೂಡ ಎತ್ತಿಹಿಡಿದಿದೆ ಎಂದರು. ಸದ್ಯ ನಾನು ವ್ಯಾಪಕ ಭ್ರಷ್ಟಾಚಾರವನ್ನ ಉಲ್ಲೇಖ ಮಾಡಿದ್ದೇನೆ. ನಿಮ್ಮ ಅಳಿಯ ಕ್ಯಾಬಿನೆಟ್ ದರ್ಜೆಯಲ್ಲಿದ್ದಾರೆ. ನಿಮ್ಮ ಮೊಮ್ಮಗ ಕ್ಯಾಬಿನೆಟ್ ದರ್ಜೆ ಅನುಭವಿಸುತ್ತಿದ್ದಾನೆ. ಹಾಗಾದರೆ ರಾಜ್ಯದಲ್ಲಿನಡೆಯುತ್ತಿರುವುದು ಏನು(?) ಯಡಿಯೂರಪ್ಪನವರೇ ಯಾವಾಗ ಇಳಿಯುತ್ತಾರೆ ಅಂತ ಶಾಸಕರೇ ಹೇಳುತ್ತಿದ್ದಾರೆ. ತಾಕತ್ತಿದ್ದರೆ ಶಾಸಕಾಂಗ ಪಕ್ಷದ ಸಭೆ ಕರೆಯಲಿ. ನಾನು 10 ವರ್ಷ ಸಂಸದನಾಗಿದ್ದೆ. ಸಮಯಕ್ಕೆ ಸರಿಯಾಗಿ ಸಭೆ ನಡೆಸುತ್ತಿದ್ದರು. ಎಷ್ಟು ದಿನಗಳಿಂದ ಶಾಸಕಾಂಗ ಪಕ್ಷದ ಸಭೆ ನಡೆದಿದೆ ಎಂದು ಸಿಎಂ ಬಿಎಸ್​ವೈ ವಿರುದ್ಧ ಹರಿಹಾಯ್ದರು.

ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಅವರು, ಇವತ್ತು ಅವರ ತಂದೆ ತಾಯಿ ಕಂಪ್ಲೈಂಟ್ ಕೊಟ್ಟಿದ್ದಾರೆ. ಯುವತಿಯ ತಂದೆ ತಾಯಿ ದೂರು ಕೊಟ್ಟಿದ್ದಾರೆ. ಇದು ರಮೇಶ್ ಜಾರಕಿಹೊಳಿಯೊಬ್ಬರದ್ದೇ ಅಲ್ಲ ಸಿಡಿ. ಸಿಡಿ ತಯಾರು ಮಾಡುವ ಗುಂಪು ಅವರಲ್ಲಿದೆ. ಬಿಜೆಪಿ-ಕಾಂಗ್ರೆಸ್​ನಲ್ಲಿ ಈ ತಂಡವಿದೆ. ಒಂದು ಕೋಟಿ ಕೊಟ್ಟು ಎರಡು ಕೋಟಿ ಕೊಟ್ಟು ಸಿಡಿ ಖರೀದಿ ಮಾಡ್ತಾರೆ ಇದರಲ್ಲಿ ಜಾಯಿಂಟ್ ವೆಂಚರ್ ಇದೆ. ಕೆಪಿಸಿಸಿ ಅಧ್ಯಕ್ಷರು, ಇವರದ್ದು ಜಾಯಿಂಟ್ ವೆಂಚರ್ ಇದೆ. ಜಾರಕಿಹೊಳಿ ಪರಿಸ್ಥಿತಿ ಅಯೋಮಯವಾಗಿದೆ. ಸಿಸಿಬಿ ಎಲ್ಲಿಹೋಯ್ತು(?) ಯುವರಾಜ್, ವಿಜಯೇಂದ್ರ ಜೊತೆ ಇದ್ದ ಫೋಟೋ ಎಲ್ಲಿದೆ(?) ರಾಧಿಕಾ ಕುಮಾರಸ್ವಾಮಿ ಜೊತೆ ಇದ್ದವರು ಮಂತ್ರಿಯಾಗಿಲ್ವೇ(?) ನನ್ನನ್ನ ಹೊರಗೆ ಹಾಕೋಕೆ ಯಾರಿಗೂ ತಾಕತ್ತಿಲ್ಲ, ಬಿಜೆಪಿ ಪುನರುತ್ಥಾನಕ್ಕಾಗಿ ಹೋರಾಡುತ್ತಿದ್ದೇನೆ ಎಂದು ಬಸನಗೌಡ ಪಾಟೀಲ್ ಯತ್ನಾಳ್ ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

S S Benakanalli

Founder , Director Of KK NEWS KANNADA _ S S BENAKANAHALLI

Leave a Reply

Your email address will not be published. Required fields are marked *