ಸಂಸದರ ರಾಜೀನಾಮೆಗೆ ಯಾಕಾಪೂರ ಆಗ್ರಹ
ಚಿಂಚೋಳಿ,ಮಾ.19-ಕಲ್ಯಾಣ ಕರ್ನಾಟಕ ಯೋಜನೆಗಳು ಉಳಿಸಿಕೊಳ್ಳಲು ವಿಫಲರಾಗಿರುವ ಸಂಸದರಾದ ಡಾ.ಉಮೇಶ ಜಾಧವ, ಭಗವಂತ ಖೂಬಾ ಮತ್ತು ಅಮರೇಶ್ವರ ನಾಯಕ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಲಿ ಎಂದು ಜೆಡಿಎಸ್ ಮುಖಂಡ ಸಂಜೀವನ್ ಯಾಕಾಪೂರ ಆಗ್ರಹಿಸಿದ್ದಾರೆ.
ಹಿಂದುಳಿದ ಕಲ್ಯಾಣ ಕರ್ನಾಟಕ ಪ್ರದೇಶದ ಅಭಿವೃದ್ಧಿಗಾಗಿ ಮಾಜಿ ಪ್ರಧಾನ ಮಂತ್ರಿ ಹೆಚ್.ಡಿ.ದೇವೆಗೌಡ ಅವರು ಮುಖ್ಯಮಂತ್ರಿಗಳಾಗಿದ್ದಾಗ ಮತ್ತು ಪ್ರಧಾನ ಮಂತ್ರಿಗಳಾಗಿದ್ದಾಗ ಹಾಗೂ ಹೆಚ್.ಡಿ.ಕುಮಾರಸ್ವಾಮಿ ಎರಡು ಬಾರಿ ಮುಖ್ಯಮಂತ್ರಿಗಳಾಗಿದ್ದಾಗ, ಕಲ್ಯಾಣ ಕರ್ನಾಟಕದ ಪ್ರದೇಶ ಹಿರಿಯ ರಾಜಕಾರಣಿ ರಾಜ್ಯಸಭೆಯ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರು ಕೇಂದ್ರ ಸಚಿವರಾಗಿದ್ದಾಗ ಹಲವಾರು ಯೋಜನೆಗಳನ್ನು ಕಲ್ಯಾಣ ಕರ್ನಾಟಕಕ್ಕೆ ತಂದ್ದಿದ್ದಾರೆ. ಜಿಮ್ಸ್, ಏಮ್ಸ್, ಐಐಐಟಿ, ಪ್ರತೇಕ ರೈಲ್ವೆ ವಿಭಾಗೀಯ ಕಛೇರಿ, ನೀರಾವರಿ ಯೋಜನೆಗಳು,ಇಸ್ರೇಲ್ ಮಾಧರಿಯ ಕೃಷಿ ಚಟುವಟಿಕೆ, ಕಲಬುರ್ಗಿಯಲ್ಲಿ ಕಾರ್ಖಾನೆ, ಜವಳಿ ಪಾರ್ಕ್, ಕೇಂದ್ರೀಯ ವಿಶ್ವವಿದ್ಯಾಲಯ ಈ ಯೋಜನೆಗಳು ಉಳಿಸಿಕೊಳ್ಳಲು ಈ ಭಾಗದ ಸಂಸದರಾದ ಡಾ.ಉಮೇಶ ಜಾಧವ, ಭಗವಂತ ಖೂಬಾ, ಅಮರೇಶ್ವರ ನಾಯಕ ಅವರಿಗೆ ಆಗುತ್ತಿಲ್ಲ ಅದಕಾರಣ ಈ ಸಂಸದರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದ್ದಾರೆ.