ಕಲಬುರಗಿ : ಗ್ರಾಪಂಗಳಿಂದ ಜೆಸ್ಕಾಂಗೆ 171 ಕೋಟಿ ರೂ ಬಾಕಿ
ಕಲಬುರಗಿ : ಕಲಬುರಗಿ ,ಯಾದಗಿರಿ ಜಿಲ್ಲೆಗಳ ಗ್ರಾಪಂ ಗಳಿಂದ ಜೆಸ್ಕಾಂ ಗೆ ಬರಬೇಕಾದ ವಿದ್ಯುತ್ ಬಿಲ್ಲು 170.92 ಕೋಟಿ ರೂ. ಬಾಕಿ ಇದೆ ಎಂದು ಇಂಧನ ಖಾತೆ ಹೊಂದಿರುವ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರು ವಿಧಾನ ಪರಿಷತ್ತು ಸದಸ್ಯ ಬಿ ಜಿ ಪಾಟೀಲ ಅವರ ಪ್ರಶ್ನೆಗೆ ಉತ್ತರ ನೀಡಿದ್ದಾರೆ.
ಈ ವರ್ಷದ ಫೆಬ್ರವರಿ ಅಂತ್ಯದ ವರೆಗೆ ಕಲಬುರಗಿ ಜಿಲ್ಲೆ ಗ್ರಾಪಂಗಳಿಂದ 147.45 ಕೋಟಿ ರೂ. ಮತ್ತು ಯಾದಗಿರಿ ಜಿಲ್ಲೆ ಗ್ರಾಪಂಗಳಿಂದ 23.46 ಕೋಟಿ ರೂ ಬಾಕಿ ಬರಬೇಕಿದೆ.
2016-17 ನೆಯ ಸಾಲಿನಿಂದ 2021 ರ ಫೆ 22 ರವರೆಗೆ ಕಲಬುರಗಿ ಜಿಲ್ಲೆ ಗ್ರಾಪಂಗಳು 164.07 ಕೋಟಿ ರೂ ,ಯಾದಗಿರಿ ಜಿಲ್ಲೆಯ ಗ್ರಾಪಂಗಳು 75.26 ಕೋಟಿ ರೂ ವಿದ್ಯುತ್ ಬಿಲ್ಲನ್ನು ಜೆಸ್ಕಾಂಗೆ ನೀಡಿವೆ.
ಗ್ರಾಪಂಗಳಿಗೆ ಕಡಿಮೆ ದರದಲ್ಲಿ ವಿದ್ಯುತ್ ಸರಬರಾಜು ಮಾಡುವ ಅಥವಾ ಒಂದು ಬಾರಿ ವಿದ್ಯುತ್ ಬಾಕಿ ಮನ್ನಾ ಮಾಡುವ ಯಾವುದೇ ಪ್ರಸ್ತಾಪ ಇಲ್ಲ ಎಂದು ಮುಖ್ಯಮಂತ್ರಿ ಅವರು ಹೇಳಿದ್ದಾರೆ