ಸಿಎಂ ಬದಲಾಗ್ತಾರೆ ಅಂದ್ರು ಯತ್ನಾಳ್..! ಏಕವಚನದಲ್ಲೇ ಸವಾಲ್ ಹಾಕಿದ್ರು ರೇಣುಕಾಚಾರ್ಯ..!
ಪಂಚ ರಾಜ್ಯಗಳಲ್ಲಿ ಚುನಾವಣಾ ಕಾವು ಜೋರಾಗಿದೆ. ಹೇಗಾದ್ರೂ ಮಾಡಿ ಈ ಬಾರಿ ಅಧಿಕಾರದ ಚುಕ್ಕಾಣಿ ಹಿಡಿಯಲೇಬೇಕು ಎನ್ನುವ ಛಲದಿಂದ ಎಲ್ಲಾ ರಾಜಕೀಯ ಪಕ್ಷದ ನಾಯಕರು ಮತದಾರರ ಓಲೈಕೆಯಲ್ಲಿ ತೊಡಗಿದ್ದಾರೆ. ಇನ್ನು ರಾಜ್ಯದಲ್ಲೂ ಉಪಚುನಾವಣಾ ಕಣ ಜೋರಾಗಿದ್ದು, ರಾಜಕೀಯ ಪಕ್ಷಗಳು ಪರಸ್ಪರ ದೋಷಾರೋಪಣೆಯಲ್ಲಿ ತೊಡಗಿದೆ. ಈ ನಡುವೆ MLA ಬಸನಗೌಡ ಪಾಟೀಲ್ ಯತ್ನಾಳ್ ಸ್ಫೋಟಕ ಹೇಳಿಕೆ ನೀಡಿದ್ದು, ಬಿಜೆಪಿಯಲ್ಲಿ ಮತ್ತೆ ತಳಮಳ ಸೃಷ್ಟಿಸಿದೆ. ಇನ್ನು ಬಸನಗೌಡ ಯತ್ನಾಳ್ ಹೇಳಿಕೆಗೆ ರೇಣುಕಾಚಾರ್ಯ ಖಡಕ್ ಪ್ರತಿಕ್ರಿಯೆ ನೀಡಿದ್ದಾರೆ. ಹಾಗಾದ್ರೆ ಯತ್ನಾಳ್ ಏನಂದ್ರು..? ರೇಣುಕಾಚಾರ್ಯ ಏನಂದ್ರು ಈ ಸ್ಟೋರಿ ನೋಡಿ.
ಪಂಚರಾಜ್ಯಗಳ ಚುನಾವಣೆ ಬಳಿಕ ರಾಜ್ಯದಲ್ಲಿಯೂ ಬದಲಾವಣೆಯ ಪರ್ವ ಪ್ರಾರಂಭವಾಗುತ್ತದೆ. ಸಿಎಂ ಬಿಎಸ್ವೈ ಬದಲಾಗ್ತಾರೆ ಎಂದು ಯತ್ನಾಳ್ ಹೇಳಿಕೆ ನೀಡಿದ್ರು. ಈ ಹೇಳಿಕೆಗೆ ಪ್ರತಿಕ್ರಿಯೆ ನೀಡಿರುವ ರೇಣುಕಾಚಾರ್ಯ, ಏಕವಚನದಲ್ಲೇ ಯತ್ನಾಳ್ ವಿರುದ್ಧ ಹರಿಹಾಯ್ದಿದ್ದಾರೆ. ಕ್ಷವನ್ನು ಕಟ್ಟಿ ಬೆಳೆಸಿದ್ದು ಯಡಿಯೂರಪ್ಪನವರು. ನಿನ್ನನ್ನು ಪಕ್ಷದಿಂದ ಉಚ್ಚಾಟನೆ ಮಾಡಿದಾಗ ಪಕ್ಷಕ್ಕೆ ಕರೆ ತಂದವರು ಯಡಿಯೂರಪ್ಪನವರು. ತಾಕತ್ತಿದ್ದರೇ ನೀವು ನಿಮ್ಮ ಸ್ಥಾನಕ್ಕೆ ರಾಜಿನಾಮೆ ಕೊಟ್ಟು ಪ್ರತ್ಯೇಕವಾಗಿ ಚುನಾವಣೆ ಎದುರಿಸಿ. ಯತ್ನಾಳ್ಗೆ ತಾಕತ್ತಿದ್ರೆ ಮುಖ್ಯಮಂತ್ರಿಗಳನ್ನು ಬದಲಾವಣೆ ಮಾಡಲಿ ಎಂದು ಯತ್ನಾಳ್ಗೆ ಸವಾಲ್ ಎಸೆದಿದ್ದಾರೆ. ಇನ್ನು, ಇದೇ ವೇಳೆ ಇನ್ನೂ ಎರಡು ವರ್ಷ ಯಡಿಯೂರಪ್ಪನವರೇ ನಮ್ಮ ಸಿಎಂ ಎಂದಿದ್ದಾರೆ. ಯತ್ನಾಳ್ ಅವರು ಮಾನಸಿಕ ಸ್ಥಿತಿ ಕಳೆದುಕೊಂಡಿದ್ದಾರೆ.. ಸೋಮವಾರ ಎಲ್ಲಾ ಶಾಸಕರು ಸೇರಿ ಯತ್ನಾಳ್ ಅವರಿಗೆ ಸರಿಯಾದ ಉತ್ತರ ಕೊಡ್ತೀವಿ ಎಂದಿದ್ದಾರೆ.
ಒಟ್ಟಿನಲ್ಲಿ ರಾಜ್ಯ ರಾಜಕೀಯದಲ್ಲಿ ಮತ್ತೆ ಬದಲಾವಣೆಯಾಗುತ್ತಾ..? ಸಿಎಂ ಬಿಎಸ್ವೈ ಬದಲಾಗ್ತಾರಾ..? ಈ ಎಲ್ಲಾ ಪ್ರಶ್ನೆಗಳಿಗೆ ಚುನಾವಣೆ ಬಳಿಕ ಉತ್ತರ ಸಿಗಲಿದೆ. ಸದ್ಯ ಉಪಚುನಾವಣೆ ಬಗ್ಗೆ ತಲೆ ಕೆಡಿಸಿಕೊಂಡಿರುವ ರಾಜ್ಯ ನಾಯಕರು ಉಪಚುನಾವಣೆಯ ಗೆಲುವಿನತ್ತ ಕಣ್ಣಿಟ್ಟಿದ್ದಾರೆ. ಒಟ್ಟಿನಲ್ಲಿ ಏನಾಗುತ್ತೋ ಕಾದು ನೋಡಬೇಕಿದೆ.