ನೂರು ಕೋಟಿ ಕ್ಲಬ್​ ನತ್ತ ರಾಬರ್ಟ್​, ದಾಖಲೆಯತ್ತ ದಾಪುಗಾಲು

ರಾಬರ್ಟ್​. ಸಿನಿಮಾ ರಿಲೀಸ್​ಗೂ ಮುನ್ನ ಯಾವ ಮಟ್ಟದ ಕ್ರೇಜ್, ಸೌಂಡ್ ಇತ್ತೋ ಸಿನಿಮಾ ರಿಲೀಸ್​ ಆಗಿ ಒಂದು ವಾರ ಆದ್ಮೇಲೂ ಅದೇ ಕ್ರೇಜ್..ಅದೇ ಸೌಂಡ್..ಅದರಲ್ಲೂ ಬಾಕ್ಸಾಫೀಸ್​ನಲ್ಲಂತೂ ಬಾಕ್ಸಾಫೀಸ್​ ಸುಲ್ತಾನನ ಹವಾ ಜೋರಾಗೇ ಇದೆ. ಒಂದೇ ವಾರಕ್ಕೆ ರಾಬರ್ಟ್​ ಮಾಡಿರೋ ಕಲೆಕ್ಷನ್​ ನೋಡ್ತಿದ್ರೆ, ಮುಂದಿನ ಕೆಲವೇ ದಿನಗಳಲ್ಲಿ ದಾಖಲೆ ಬರೆಯೋ ಮುನ್ಸೂಚನೆ ಸಿಕ್ತಿದೆ. ರಾಬರ್ಟ್. ಸಿನಿಮಾ ಶುರುವಿನದಂಲೇ ಚಿತ್ರದ ಹೈಪ್​​ ಹೇಗಿತ್ತು ಅನ್ನೋದು ನಿಮಗೆಲ್ಲಾ ಗೊತ್ತೇಯಿದೆ..ರಿಲೀಸ್​​ಗೂ ಮುನ್ನ ಚಿತ್ರದ ಮೇಲಿದ್ದ ಕ್ರೇಜ್ , ಸಿನಿಮಾ ರಿಲೀಸ್​ ಆದ ಒಂದು ವಾರದ ನಂತ್ರವೂ ಹಾಗೇ ಇದೆ ..ಸಿನಿಮಾ ರಿಲೀಸ್​ ಆದ ಮೊದಲ ದಿನವೇ ಕನ್ನಡದಲ್ಲಿ 17.23 ಕೋಟಿ ಮತ್ತು ತೆಲುಗಿನಲ್ಲಿಯೂ ಕೂಡ ಭರ್ಜರಿ ಕಲೆಕ್ಷನ್​ ಮಾಡಿತ್ತುರಾಬರ್ಟ್​ ಸಿನಿಮಾ..ಇದೀಗ ಒಂದು ವಾರಕ್ಕೆ ರಾಬರ್ಟ್​ ಕಲೆಕ್ಷನ್​ ಕೇಳಿದ್ರೆ ಅಚ್ಚರಿಯಾಗೋದಂತೂ ಗ್ಯಾರೆಂಟಿ.

ಮಾರ್ಚ್​ 11ರಂದು ಶಿವರಾತ್ರಿ ಹಬ್ಬದ ದಿನ ಅದ್ದೂರಿಯಾಗಿ ತೆರೆಕಂಡ ರಾಬರ್ಟ್ ಸಿನಿಮಾ, ಒಂದು ವಾರಕ್ಕೆ ಬರೋಬ್ಬರಿ 78.59 ಕೋಟಿ ಕಲೆಕ್ಷನ್ ಮಾಡಿದೆ. 656 ಸಿಂಗಲ್​ ಸ್ಕ್ರೀನ್ ಥಿಯೇಟರ್ 100 ಮಲ್ಟಿಪ್ಲೆಕ್ಸ್​ಗಳಲ್ಲಿ ಸಿನಿಮಾ ಅದ್ದೂರಿಯಾಗಿ ತೆರೆಕಂಡಿತ್ತು. ಕರ್ನಾಟಕದಲ್ಲಿ ಒಂದು ವಾರಕ್ಕೆ ಈ ಮಟ್ಟದ ಕಲೆಕ್ಷನ್​ ಮಾಡಿರುವ ಮೊದಲ ಸಿನಿಮಾ ಅನ್ನೋ ಹೆಗ್ಗಳಿಕೆ ರಾಬರ್ಟ್​ ಸಿನಿಮಾದ್ದಾಗಿದೆ. ಅಂದ್ಹಾಗೇ ರಾಬರ್ಟ್​ ಒಂದು ವಾರಕ್ಕೆ 78 ಕೋಟಿ ಗಳಿಸಿದ್ರೆ, ಗಾಂಧಿನಗರದ ಲೆಕ್ಕಾಚಾರದ ಪ್ರಕಾರ ಮುಂದಿನ ಒಂದು ವಾರದಲ್ಲಿ ರಾಬರ್ಟ್​ 100 ಕೋಟಿ ಕಲೆಕ್ಷನ್​ನ ದಾಖಲೆ ಬರೆಯೋದು ಪಕ್ಕಾ ಅನ್ನಲಾಗ್ತಿದೆ. ಈಗಾಗಲೇ ಸಿನಿಮಾ ರಿಲೀಸ್​ ಆಗಿ 10 ದಿನಗಳು ಕಳೆದಿವೆ..ಇನ್ನೇನು ಸಿನಿಮಾ 25 ದಿನಗಳ ಸಂಭ್ರಮಾಚರಣೆ ಆಚರಿಸೋ ಸಮಯಕ್ಕೆ ರಾಬರ್ಟ್​ 100 ಕೋಟಿ ಕ್ಲಬ್​ ಸೇರೋದು ಕನ್ಫರ್ಮ್​ ಅನ್ನಲಾಗ್ತಿದೆ..ಈ ಮೂಲಕ ಸ್ಯಾಂಡಲ್​ವುಡ್​ನಲ್ಲಿ ದಾಖಲೆ ಬರೆಯಲಿದೆ ರಾಬರ್ಟ್​. ಸದ್ಯ ರಾಬರ್ಟ್​ 100 ಮಲ್ಟಿಪ್ಲೆಕ್ಸ್​ ಮತ್ತು 534 ಸಿಂಗಲ್​ ಸ್ಕ್ರೀನ್​ ಥಿಯೇಟರ್​​ಗಳಲ್ಲಿ ಪ್ರದರ್ಶನ ಕಾಣ್ತಿದೆ. ಒಟ್ನಲ್ಲಿ ರಾಬರ್ಟ್​ ಹುಟ್ಟುಹಾಕಿದ್ದ ನಿರೀಕ್ಷೆಯನ್ನ ಹುಸಿಗೊಳಿಸದೇ, ಕೊರೊನ ಮತ್ತು ಲಾಕ್​ಡೌನ್​ ಹೊಡೆತಕ್ಕೆ ಜಗ್ಗದೇ ಮುನ್ನುಗ್ತಿದೆ.

S S Benakanalli

Founder , Director Of KK NEWS KANNADA _ S S BENAKANAHALLI

Leave a Reply

Your email address will not be published. Required fields are marked *