ಬಜೆಟ್ ಅಧಿವೇಶನ: ಶ್ರೀರಾಮುಲುಗೆ ‘ಮಾಹಿತಿ ಪಾಠ’ ಮಾಡಿದ ಸಿದ್ದರಾಮಯ್ಯ!

ಹೈಲೈಟ್ಸ್‌:

  • ಸದನದಲ್ಲಿ ಸಮಾಜ ಕಲ್ಯಾಣ ಸಚಿವರಿಗೆ ವಿಪಕ್ಷ ನಾಯಕರಿಂದ ಮಾಹಿತಿ ಪಾಠ.
  • ಬಿ. ಶ್ರೀರಾಮುಲು ಹಾಗೂ ಸಿದ್ದರಾಮಯ್ಯ ನಡುವೆ ಮಾತಿನ ಚಕಮಕಿ.
  • ಅಂಬೇಡ್ಕರ್ ಭವನಗಳಿಗೆ ಅನುದಾನ ಮಂಜೂರು ಕುರಿತಂತೆ ನಡೆಯಿತು ಜಟಾಪಟಿ.
  • ಕಾಂಗ್ರೆಸ್ ಶಾಸಕ ಈಶ್ವರ್ ಖಂಡ್ರೆ ಕೇಳಿದ ಪ್ರಶ್ನೆಗೆ ಸೂಕ್ತ ಮಾಹಿತಿ ನೀಡದ ಶ್ರೀರಾಮುಲು?
  • ಅಧಿಕಾರಿಗಳಿಂದ ಸೂಕ್ತ ಮಾಹಿತಿ ಪಡೆಯುವಂತೆ ಸಲಹೆ ನೀಡಿದ ಸಿದ್ದರಾಮಯ್ಯ.

ಬೆಂಗಳೂರು: ಅಂಬೇಡ್ಕರ್ ಭವನಗಳಿಗೆ ಅನುದಾನ ಮಂಜೂರು ವಿಳಂಬದ ಬಗ್ಗೆ ವಿಧಾನಸಭೆಯಲ್ಲಿ ಚರ್ಚೆ ನಡೆಯುತ್ತಿದ್ದ ಸಂದರ್ಭದಲ್ಲಿ, ಸಮಾಜ ಕಲ್ಯಾಣ ಸಚಿವ ಬಿ. ಶ್ರೀರಾಮುಲು ಅವರಿಗೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ‘ಮಾಹಿತಿ’ ಪಾಠ ಮಾಡಿದ ಪ್ರಸಂಗ ನಡೆದಿದೆ.

ಬೀದರ್ ಜಿಲ್ಲೆಯಲ್ಲಿ ಕಳೆದ ಮೂರು ವರ್ಷಗಳಿಂದ ಈವರೆಗೆ ಸರ್ಕಾರದಿಂದ ಅಂಬೇಡ್ಕರ್ ಭವನ, ಬಾಬು ಜಗಜೀವನ್ ರಾಮ್ ಭವನ, ಸೇವಾಲಾಲ್ ಭವನಕ್ಕೆ ಅನುದಾನ ಮಂಜೂರಾತಿ ವಿಳಂಬದ ಬಗ್ಗೆ ಗಮನ ಸೆಳೆದ ಕಾಂಗ್ರೆಸ್ ಶಾಸಕ ಈಶ್ವರ್ ಖಂಡ್ರೆ ಗಮನ ಸೆಳೆದರು.

32 ಲಕ್ಷ ರೂ. ಅನುದಾನ ವೆಚ್ಚ ಆಗಿದೆ ಎಂದು ಉತ್ತರ ನೀಡಲಾಗಿದೆ ಎಂಬುದು ಸುಳ್ಳು, ಭವನಗಳ ಕಾಮಗಾರಿ ಪೂರ್ಣಗೊಳಿಸಲು ಅನುದಾನ ಬಿಡುಗಡೆ ಯಾವಾಗ ಮಾಡುತ್ತೀರಿ ಎಂದು ಖಂಡ್ರೆ ಪ್ರಶ್ನಿಸಿದರು.

ಇದಕ್ಕೆ ಉತ್ತರ ನೀಡಿದ ಸಚಿವ ಬಿ. ಶ್ರೀರಾಮುಲು, ಒಂದು ತಿಂಗಳ ಕಾಲಾವಕಾಶ ನೀಡಿ, 70 ಭವನಗಳ ಪೈಕಿ 30 ಪೂರ್ಣ ಆಗಿದೆ. ಉಳಿದ ಭವನಗಳ ಹಣ ಬಿಡುಗಡೆಗೆ ಕ್ರಮ, ನಿವೇಶನ ನೀಡಲೂ ಕ್ರಮ ಕೈಗೊಳ್ಳುಲು ಕ್ರಮ ಕೈಗೊಳ್ಳಲಾಗುವುದು ಎಂದು ಸಚಿವ ಶ್ರೀರಾಮುಲು ಭರವಸೆ ನೀಡಿದರು.

ಅಲ್ಲದೆ 30 ಲಕ್ಷ ಅನುದಾನ ವೆಚ್ಚವಾಗಿದೆ ಎಂಬುದು ತಪ್ಪು ಮಾಹಿತಿ ಎಂಬ ಬಗ್ಗೆ ಪರಿಶೀಲನೆ ನಡೆಸುವುದಾಗಿ ತಿಳಿಸಿದ ಶ್ರೀರಾಮುಲು ಭರವಸೆ ನೀಡಿದರು.

ಈ ವೇಳೆ ಮಧ್ಯ ಪ್ರವೇಶ ಮಾಡಿದ ಸಿದ್ದರಾಮಯ್ಯ, ಸಚಿವ ಶ್ರೀರಾಮುಲು ಅವರನ್ನು ತರಾಟೆಗೆ ತೆಗೆದುಕೊಂಡರು. ಅಧಿಕಾರಿಗಳು ಸರಿಯಾದ ಮಾಹಿತಿ ನೀಡಿದ್ದಾರಾ ಇಲ್ಲವೋ ಎಂಬುದನ್ನು ಸ್ಪಷ್ಟಪಡಿಸಿ. ಸುಳ್ಳು ಮಾಹಿತಿ ನೀಡುವ ಮೂಲಕ ಸದನದ ದಾರಿ ತಪ್ಪಿಸಬಾರದು ಎಂದು ಸಿದ್ದರಾಮಯ್ಯ ಅಸಮಾಧಾನ ಹೊರಹಾಕಿದರು.

ಸಚಿವರು ಪರಿಶೀಲನೆ ಮಾಡುವುದಾಗಿ ತಿಳಿಸಿದ್ದಾರೆ. ಹಾಗಾದರೆ ತಪ್ಪು ಮಾಹಿತಿ ನೀಡಲಾಗಿದೆ ಎಂದು ಒಪ್ಪಿಕೊಂಡ ಹಾಗಾಯಿತಲ್ಲವೇ ಎಂದು ಸಿದ್ದರಾಮಯ್ಯ ಶ್ರೀರಾಮುಲು ಅವರನ್ನುತರಾಟೆಗೆ ತೆಗೆದುಕೊಂಡರು.

ಈ ವೇಳೆ ಸಚಿವ ಶ್ರೀರಾಮುಲು ಅವರ ಸಹಾಯಕ್ಕೆ ಧಾವಿಸಿದ ಡಿಸಿಎಂ ಗೋವಿಂದ ಕಾರಜೋಳ, ಆರೋಪದ ಬಗ್ಗೆ ಪರಿಶೀಲನೆ ನಡೆಸುತ್ತೇವೆ ಎಂದರೆ ತಪ್ಪೇನಿದೆ ಎಂದು ಸಮರ್ಥನೆ ಮಾಡಿಕೊಂಡರು.

ಇದಕ್ಕೆ ಸ್ಪಷ್ಟನೆ ನೀಡಿದ ಶ್ರೀರಾಮುಲು, ಅಧಿಕಾರಿಗಳು ತಪ್ಪು ಮಾಡಿದ್ದಾರೆ ಎಂದು ನಾನು ಹೇಳಿಲ್ಲ.‌ಈ ಬಗ್ಗೆ ಪರಿಶೀಲನೆ ಮಾಡುತ್ತೇನೆ ಎಂದಷ್ಟೇ ಹೇಳಿದ್ದು. ಹಿರಿಯ ಸದಸ್ಯರಿಗೆ ಗೌರವ ಕೊಡುವ ಉದ್ದೇಶದಿಂದ ಹೀಗೆ ಹೇಳಿದೆ ಎಂದು ಸ್ಪಷ್ಟಪಡಿಸಿದರು.

S S Benakanalli

Founder , Director Of KK NEWS KANNADA _ S S BENAKANAHALLI

Leave a Reply

Your email address will not be published. Required fields are marked *