ಜನರೇ ಎಚ್ಚರ…! ದೇಶದಲ್ಲಿ ಒಂದೇ ದಿನ ಕೊರೋನಾ ಸೋಂಕಿಗೆ ಒಳಗಾದವರ ಸಂಖ್ಯೆ 43 ಸಾವಿರ ದಾಟಿದೆ ..
ದೇಶದಲ್ಲಿ ದಿನದಿಂದ ದಿನಕ್ಕೆ 2ನೇ ಅಲೆಯ ಅಬ್ಬರ ಜೋರಾಗಿದೆ. ಕಳೆದ 24 ಗಂಟೆಯಲ್ಲಿ 43,846 ಜನರಲ್ಲಿ ಸೋಂಕು ಪತ್ತೆಯಾಗಿದೆ. ಈ ಮೂಲಕ ದೇಶದಲ್ಲಿ ಸೋಂಕಿತರ ಸಂಖ್ಯೆ 1,15,99,130ಕ್ಕೆ ಏರಿಕೆಯಾಗಿದೆ. ನಿನ್ನೆ ಒಂದೇ ದಿನ 197 ಜನರು ಮಹಾಮಾರಿಗೆ ಬಲಿಯಾಗಿದ್ದು, ಈವರೆಗೂ ಕೊರೋನಾಗೆಗೆ ಬಲಿಯಾದವರ ಸಂಖ್ಯೆ 1,59,755 ಕ್ಕೆ ಏರಿಕೆಯಾಗಿದೆ. ಕೋವಿಡ್-19 ಹಾಟ್ ಸ್ಪಾಟ್ ಆಗಿ ಮಾರ್ಪಟ್ಟಿರುವ ಮಹಾರಾಷ್ಟ್ರದಲ್ಲಿ ನಿನ್ನೆ ಒಂದೇ 24,645 ಸೋಂಕಿತರು ಪತ್ತೆಯಾಗಿದ್ದು, 58 ಜನರು ಸಾವನ್ನಪ್ಪಿದ್ದಾರೆ. ಕೇರಳದಲ್ಲಿ 1239, ಪಂಜಾಬ್ನಲ್ಲಿ 2299, ತಮಿಳುನಾಡಿನಲ್ಲಿ 1385, ಛತ್ತೀಸ್ಗಡ 1525, ಗುಜರಾತ್ನಲ್ಲಿ 1640 ಮಂದಿಗೆ ಕೊರೋನಾ ಸೋಂಕು ದೃಢಪಟ್ಟಿದೆ.
ಇತ್ತ ರಾಜ್ಯದಲ್ಲೂ ಡೆಡ್ಲಿ ಕೊರೋನಾ ವೈರಸ್ ಆರ್ಭಟಿಸುತ್ತಿದೆ. ನಿನ್ನೆ ಒಂದೇ ದಿನ 1,445 ಮಂದಿಯ ದೇಹವನ್ನು ಕೊರೋನಾ ವೈರಸ್ ಹೊಕ್ಕಿದ್ದು, ಈ ಮೂಲಕ ರಾಜ್ಯದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 9,71,647ಕ್ಕೆ ಏರಿಕೆಯಾಗಿದೆ. ಕಳೆದ 24 ಗಂಟೆಯಲ್ಲಿ ಡೆಡ್ಲಿಗೆ 10 ಮಂದಿ ಬಲಿಯಾಗಿದ್ದು, ಈವರೆಗೂ 13,444 ಮಂದಿ ಮೃತಪಟ್ಟಿದ್ದಾರೆ. ಇನ್ನೂ ಕಳೆದ ನಾಲ್ಕು ದಿನಗಳಿಂದ ಬೆಂಗಳೂರಲ್ಲಿ ಸಾವಿರ ಗಡಿ ದಾಟಿದ ಕೊರೋನಾ ಪ್ರಕರಣಗಳ ಸಂಖ್ಯೆ ನಿನ್ನೆ ಕೊಂಚ ಇಳಿಮುಖವಾಗಿದೆ. ಬೆಂಗಳೂರಿನಲ್ಲಿ 886 ಕೇಸ್ ಬಂದಿದ್ದು, ನಾಲ್ವರು ಮೃತಪಟ್ಟಿದ್ದಾರೆ. ಇನ್ನೂ ಉಡುಪಿಯಲ್ಲಿ 113, ಮೈಸೂರು 61, ತುಮಕೂರು 51, ಬೀದರ್ 51, ಕಲಬುರಗಿ 43 ಮಂದಿಗೆ ಸೋಂಕು ತಗುಲಿದೆ.