‘ಎಲ್ಲರ ಮನೆ ದೋಸೆನೂ ತೂತೇ, ನಾನು ಒಂದು ಬಾರಿ ತಪ್ಪು ಮಾಡಿ ಒಪ್ಪಿಕೊಂಡಿದ್ದೇನೆ’; ಎಚ್‌ಡಿಕೆ

ಹೈಲೈಟ್ಸ್‌:

  • ಇಲ್ಲಿ ಯಾರು ಸತ್ಯಹರಿಶ್ಚಂದ್ರರು ಅಲ್ಲ, ನನ್ನ ಹೆಸರನ್ನು ಅವರು ಯಾಕೆ ತಂದ್ರು?
  • ಜೀವನದಲ್ಲಿ ನಾನು ಒಮ್ಮೆ ತಪ್ಪು ಮಾಡಿದ್ದೇನೆ. ಅದನ್ನು ನಾನು ಧೈರ್ಯವಾಗಿ ಹೇಳಿದ್ದೇನೆ
  • ಇಲ್ಲಿ ಇರೋ ಎಲ್ಲರ ಮನೆಯ ದೋಸೆಯೂ ತೂತೇ ಆಗಿದೆ
  • ಏಕಪತ್ನಿ ವೃತಸ್ಥ ಕುರಿತ ಸಚಿವ ಸುಧಾಕರ್ ಹೇಳಿಕೆಗೆ ಎಚ್‌ಡಿ ಕುಮಾರಸ್ವಾಮಿ ಪ್ರತಿಕ್ರಿಯೆ

ಬೆಂಗಳೂರು: ಬಜೆಟ್‌ ಮೇಲಿನ ಅಧಿವೇಶನದಲ್ಲಿ ರಮೇಶ್‌ ಜಾರಕಿಹೊಳಿ ಅಶ್ಲೀಲ ಸಿ.ಡಿ ಬಹಿರಂಗ ಪ್ರಕರಣದ ಚರ್ಚೆ ಈಗ ಏಕಪತ್ನಿ ವೃತಸ್ಥ ಕಡೆ ತಿರುಗಿದೆ.

ಸದನದಲ್ಲಿ ಮಾತನಾಡುವ ವೇಳೆ ಸಚಿವ ಸುಧಾಕರ್‌ ಇಲ್ಲಿ ಯಾರೂ ಸತ್ಯಹರಿಶ್ಚಂದ್ರರಲ್ಲ ಅಂದಿರೋದು ಅನೇಕ ಶಾಸಕರ ಕಣ್ಣು ಕೆಂಪಗಾಗುವಂತೆ ಮಾಡಿದೆ. ಸುಧಾಕರ್ ಹೇಳಿಕೆಗೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿರುವ ಮಾಜಿ ಸಿಎಂ ಎಚ್‌ಡಿ ಕುಮಾರಸ್ವಾಮಿ ‘ಇಲ್ಲಿ ಯಾರು ಸತ್ಯಹರಿಶ್ಚಂದ್ರರು ಅಲ್ಲ, ನನ್ನ ಹೆಸರನ್ನು ಅವರು ಯಾಕೆ ತಂದ್ರು? ಜೀವನದಲ್ಲಿ ನಾನು ಒಂದು ಬಾರಿ ತಪ್ಪು ಮಾಡಿದ್ದೇನೆ. ಅದನ್ನು ನಾನು ಧೈರ್ಯವಾಗಿ ಹೇಳಿದ್ದೇನೆ, ಭೂಮಿ ಮೇಲೆ ಇರುವ ಪ್ರತಿಯೊಂದು ಜೀವಿಗಳಿಗೆ ಸಹಜವಾದ ಪ್ರಕ್ರಿಯೆ ಇರುತ್ತದೆ ಎಂದು ಅಭಿಪ್ರಾಯಪಟ್ಟಿದ್ದಾರೆ.

ಇದರಲ್ಲಿ ಹರಿಶ್ಚಂದ್ರ ಯಾರು ಅನ್ನೋದು ಚರ್ಚೆ ಮಾಡಿದ್ರೆ, ಇಲ್ಲಿ ಇರೋ ಎಲ್ಲರ ಮನೆಯ ದೋಸೆಯೂ ತೂತೇ ಎಂದಿರುವ ಎಚ್‌ಡಿಕೆ, ಜನರ ಮೇಲೆ ಒಂದು ದೃಷ್ಟಿ ಇರಲಿ, ಸದನದ ಕಲಾಪದಲ್ಲಿ ಭಾಗವಹಿಸದೆ ಕಲಾಪವನ್ನು ವ್ಯರ್ಥ ಮಾಡಲಾಗ್ತಿದೆ. ರಾಜ್ಯದಲ್ಲಿ ಇರುವ ಸಮಸ್ಯೆ ಬಗ್ಗೆ ಚರ್ಚೆ ಮಾಡುತ್ತಿಲ್ಲ, ಅದನ್ನು ಹೊರತುಪಡಿಸಿ ಬೇರೆ ಎಲ್ಲಾ ಚರ್ಚೆ ನಡೆಯುತ್ತಿದೆ. ವಿರೋಧ ಪಕ್ಷದ ನಾಯಕರ ಭಾಷಣದಲ್ಲಿ ನಡೆದ ಹೆಚ್ಚು ವಿಚಾರ ಚುನಾವಣೆಗೆ ನೀವೆಲ್ಲಿ ನಿಲ್ತೀರಿ, ನಾವೆಲ್ಲಿ ನಿಲ್ಲೋದು ಆಗಿತ್ತು. ಅಲ್ಲದೇ 90 ಜೊತೆ ಬಟ್ಟೆ ತೆಗೆದುಕೊಂಡ್ರಿ ಅನ್ನೋದೆ ಚರ್ಚೆ ಆಗಿದೆ ಎಂದರು.

ನಿಮ್ಮದು ಏನೇ ಇದ್ರೂ, ಸದನದ ಹೊರಗೆ ಇಟ್ಕೊಳ್ಳಿ; ಇಲ್ಲಿ ಕಲಾಪ ನಡೀಬೇಕು: ಸ್ಪೀಕರ್

ಅಲ್ಲದೇ ನಾನು ಎಟಿ ರಾಮಸ್ವಾಮಿಯವರಿಗೆ ಅಭಿನಂದನೆ ಸಲ್ಲಿಸ್ತೇನೆ ಎಂದ ಕುಮಾರಸ್ವಾಮಿ, ಅವ್ರು ಸರ್ಕಾರದ ಯೋಜನೆ ಕುರಿತು ಚರ್ಚೆ ಮಾಡಿದ್ರು. ಗುತ್ತಿಗೆದಾರರಿಗೆ ಬೇಕಾದ ಹಣದಲ್ಲಿ ಕಮಿಷನ್ ಎಸ್‌ಆರ್‌ಎಟ್ ಬಗ್ಗೆ, ಬೆಂಗಳೂರಿ‌ಲ್ಲಿ ಲಕ್ಷಾಂತರ ಭೂಮಿಯನ್ನು ಯಾರು ನುಂಗಿ ಹಾಕಿದಾರೆ ಅನ್ನೋದ್ರ ಬಗ್ಗೆ ಚರ್ಚೆ ಮಾಡಿದ್ದಾರೆ, ಆರ್ಥಿಕ ಸ್ಥಿತಿ ಬಗ್ಗೆ ಚರ್ಚೆ ಮಾಡಿದ್ದಾರೆ ಎಂದು ಭೇಷ್‌ಗಿರಿ ಕೊಟ್ಟರು.

S S Benakanalli

Founder , Director Of KK NEWS KANNADA _ S S BENAKANAHALLI

Leave a Reply

Your email address will not be published. Required fields are marked *