ನನಗೆ ಒಬ್ಬಳೆ ಹೆಂಡತಿ, ಒಂದೆ ಸಂಸಾರ: ಸುಧಾಕರ್‌ ಹೇಳಿಕೆಗೆ ಡಿಕೆ ಶಿವಕುಮಾರ್‌ ಟಾಂಗ್‌

ಹೈಲೈಟ್ಸ್‌:

  • ಸಚಿವ ಸುಧಾಕರ್‌ ಹೇಳಿಕೆಗೆ ಕಾಂಗ್ರೆಸ್‌ ನಾಯಕರು ಆಕ್ರೋಶ
  • ತನಿಖೆಯಾಗಲಿ ಎನ್ನುತ್ತಿರುವ ಕಾಂಗ್ರೆಸ್‌ ನಾಯಕರು
  • ನನಗೆ ಒಂದೇ ಹೆಂಡತಿ, ಸಂಸಾರ ಎಂದು ಡಿಕೆಶಿ ಟಾಂಗ್‌

ಬೆಂಗಳೂರು: ಎಲ್ಲ ಸಚಿವರು, ಶಾಸಕರ ತನಿಖೆಯಾಗಲಿ, ಯಾರಲ್ಲ ಅನೈತಿಕ ಸಂಬಂಧ ಹೊಂದಿದ್ದಾರೆ ಎಂದು ಬಯಲಾಗಿದೆ ಎಂದು ಸಚಿವ ಸುಧಾಕರ್‌ ಹೇಳಿಕೆಗೆ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್‌ ಪ್ರತಿಕ್ರಿಯಿಸಿದ್ದಾರೆ. ವಿಧಾನಸೌಧದಲ್ಲಿ ಮಾತನಾಡಿದ ಅವರು, ಸುಧಾಕರ್ ಹೇಳಿಕೆ ಬಹಳ ಸಂತೋಷ. ಇಂತಹ ನುಡಿಮುತ್ತುಗಳನ್ನ ರಾಜ್ಯಕ್ಕೆ ಕೊಟ್ಟಿದ್ದಾರೆ. ಅವನು ಏನೇ ಹೇಳಲಿ ನನಗೆ ಒಬ್ಬಳೆ ಹೆಂಡತಿ ಒಂದೆ ಸಂಸಾರ ಎಂದು ಟಾಂಗ್‌ ಕೊಟ್ಟಿದ್ದಾರೆ.

ಅಲ್ಲದೇ ಈ ಬಗ್ಗೆ ಉಳಿದಿದ್ದು ಸದನದ ಒಳಗೆ ಚರ್ಚೆ ಮಾಡುತ್ತೇನೆ ನಮ್ಮ ಪಕ್ಷದ ನಾಯಕರ ಜೊತೆ ಮಾತನಾಡಿ ಇದನ್ನ ಸದನದಲ್ಲಿ ಚರ್ಚೆ ಮಾಡುತ್ತೇವೆ. ಎಲ್ಲಾ ಸದಸ್ಯರ ಮೇಲೆ ಅಲಿಗೇಶನ್ ಮಾಡಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಈ ಬಗ್ಗೆ ಈಗಾಗಲೇ ಸತೀಶ್‌ ಜಾರಕಿಹೊಳಿ, ಮಾಜಿ ಸಚಿವ ರೇವಣ್ಣ ಕೂಡ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಎಲ್ಲ ಸಚಿವರು, ಶಾಸಕರ ತನಿಖೆ ನಡೆಯಲಿ, ಅನೈತಿಕ ಸಂಬಂಧ ಹಾಗೂ ವಿವಾಹ ಬಾಹಿರ ಸಂಬಂಧವೂ ಹೊರಬರಲಿ ಎಂದು ಸಚಿವ ಸುಧಾಕರ್ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. 225 ಜನರು ಶಾಸಕರು ತನಿಖೆಗೆ ಸಿದ್ದರಾಗಿ, ನಿಮ್ಮ ಜೀವನದಲ್ಲಿ ಯಾರು ಅನೈತಿಕ ಸಂಬಂಧ ಇಟ್ಟುಕೊಂಡಿಲ್ವಾ? ಎಲ್ಲವೂ ಸಾಬೀತು ಆಗಲಿ. ತನಿಖೆ ನಡೆದರೆ ಯಾರ ಚರಿತ್ರೆ ಏನು ಎಂದು ಗೊತ್ತಾಗುತ್ತೆ ಎಂದಿದ್ದರು.

 

S S Benakanalli

Founder , Director Of KK NEWS KANNADA _ S S BENAKANAHALLI

Leave a Reply

Your email address will not be published. Required fields are marked *