ಕಲಬುರಗಿ :  70 ವರ್ಷದ ವೃದ್ಧೆ ಕೊರೋನಾ ಸೋಂಕಿನಿಂದ ನಿಧನ:118 ಪಾಸಿಟಿವ್

ಕಲಬುರಗಿ :  ಕಲಬುರಗಿ ನಗರದ ಜಗತ್ ಸರ್ಕಲ್ ಪ್ರದೇಶದ 70 ವರ್ಷದ ವೃದ್ಧೆ ಕೊರೋನಾ ಸೋಂಕಿನಿಂದ ನಿಧನರಾಗಿದ್ದಾರೆ ಎಂದು ಬುಧವಾರದ ಅರೋಗ್ಯ ಬುಲೆಟಿನ್ ಖಚಿತಪಡಿಸಿದೆ.
ಸಾರಿ ಹಿನ್ನೆಲೆ ಜೊತೆಗೆ ಅಧಿಕ ರಕ್ತದೊತ್ತಡ ಮತ್ತು ಹೃದ್ರೋಗ ಸಮಸ್ಯೆಯಿಂದ‌ ಬಳಲುತ್ತಿದ್ದ ಇವರು ಮಾ.22 ರಂದು ಕೋವಿಡ್ ಅಸ್ಪತ್ರೆಗೆ ದಾಖಲಾಗಿದ್ದು, ಮಾ.24 ರಂದು ನಿಧನ ಹೊಂದಿರುತ್ತಾರೆ.
ಇದರಿಂದ ಜಿಲ್ಲೆಯಲ್ಲಿ ಇದುವರೆಗೆ ಕೊರೋನಾ ಸೋಂಕಿನಿಂದ 335 ಜನ ನಿಧನರಾಗಿದ್ದಾರೆ.
ಇಂದು ಪ್ರಕಟವಾದ ಆರೋಗ್ಯ ಬುಲೆಟಿನ್ ನಲ್ಲಿ 118 ಪಾಸಿಟಿವ್ ಪ್ರಕರಣ ವರದಿಯಾಗಿದ್ದು , ಒಟ್ಟು ಕಲಬುರಗಿಯಲ್ಲಿ ಇದರೊಂದಿಗೆ 23043 ಪಾಸಿಟಿವ್ ಕೇಸ್ ಗ ಲಾದಂತಾಗಿದೆ. 32 ಜನ ಆಸ್ಪತ್ರೆ ಯಿಂದ ಇಂದು ಬಿಡುಗಡೆಯಾಗಿದ್ದಾರೆ. ಈ ವರೆಗೆ 22078 ಜನ ಆಸ್ಪತ್ರೆ ಯಿಂದ ಬಿಡುಗಡೆಯಾಗಿದ್ದಾರೆ.630 ಜನ ಸಕ್ರಿಯ ರೋ ಗಿಗಳು ಆಸ್ಪತ್ರೆ ಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

S S Benakanalli

Founder , Director Of KK NEWS KANNADA _ S S BENAKANAHALLI

Leave a Reply

Your email address will not be published. Required fields are marked *