ಅವನು ಗಂಡಸಲ್ಲ ಗಾಂ….! ನನ್ನ ಬಳಿ 11 ಸಾಕ್ಷಗಳಿವೆ- ಸಾಹುಕಾರ್ ರಮೇಶ್ ಜಾರಕಿಹೊಳಿ ಗುಡುಗು..!
ಮಾಜಿ ಸಚಿವ ರಮೇಶ್ ಜಾರಕಿಹೊಳಿಯದ್ದು ಎನ್ನಲಾದ ಸಿ.ಡಿ ಬಿಡುಗಡೆಯಾದ ಮೇಲೆ ರಾಜ್ಯದಲ್ಲಿ ರಾಜಕೀಯ ಚಟುವಟಿಗೆ ಜೋರಾಗಿದೆ. ಸಿ.ಡಿ ಪ್ರಕರಣವನ್ನು ಸರ್ಕಾರ SIT ತನಿಖೆಗೆ ವಹಿಸಿದ ಬೆನ್ನಲ್ಲೇ ,ಸಿ.ಡಿ ಲೇಡಿ ವಕೀಲ ಜಗದೀಶ್ ಅವರ ಮೂಲಕ ಕಂಪ್ಲೆಂಟ್ ದಾಖಲಿಸಿದ್ದಾರೆ. ಈ ಎಲ್ಲಾ ಬೆಳವಣಿಗೆಗೆಗಳ ನಡುವೆ ಇಂದು ಸಿ.ಡಿ ಲೇಡಿ ಕುಟುಂಬದವರು SIT ಮುಂದೆ ಹಾಜರಾಗಿ ತಮ್ಮ ಹೇಳಿಕೆ ನೀಡಿದ್ದಾರೆ. ಈ ಘಟನೆಗಳ ಹಿಂದೆ ಯಾರಿದ್ದಾರೆ ಎಂದು ಹೇಳಿದ್ದಾರೆ.
ಯುವತಿ ಪೋಷಕರ ಪ್ರೆಸ್ಮೀಟ್ ಬಳಿಕ ಮಾತನಾಡಿದ ರಮೇಶ್ ಜಾರಕಿಹೊಳಿ , ಡಿ.ಕೆ ಶಿವಕುಮಾರ್ಗೆ ನೇರ ಸವಾಲ್ ಹಾಕಿದ್ದಾರೆ. ಮಹಾನಾಯಕನ ಹೆಸ್ರು ಯುವತಿ ಪೋಷಕರೇ ಹೇಳಿದ್ದಾರೆ. ಅವ ಎಂತ ದೊಡ್ಡ ಗಂಡಸು.. ಆತ ಗಾಂ…. ಎಂದು ಡಿ.ಕೆ ಶಿವಕುಮಾರ್ ವಿರುದ್ಧ ತಮ್ಮ ಅಸಮಾಧಾನ ಹೊರ ಹಾಕಿದ್ದಾರೆ.
ಆ ಗಾಂ.. ಜೊತೆ ಹೋರಾಟ ಮಾಡೋದಕ್ಕಿಂತ. ಯುವತಿ ಜೊತೆ ಹೋರಾಟ ಮಾಡ್ಬೋದು. ಬೆಳಗಾವಿಗೆ ಬಂದಾಗ ಏನ್ ತೊಂದರೆ ಮಾಡಲ್ಲ. ನಾನು ಕನಕಪುರಕ್ಕೆ ಹೋಗಿ ತೋರಿಸ್ತೀನಿ. ಡಿಕೆಶಿ ಅವ್ರನ್ನ ನಾನು ಸೋಲಿಸ್ತೀನಿ. ಎಲ್ಲೂ ಅವನಿಗೆ ಮಾಫಿ ಇಲ್ಲ. ಡಿಕೆಶಿ ವಿರುದ್ಧ ಅಟ್ರಾಸಿಟಿ ಕೇಸ್ ದಾಖಲಿಸ್ತೇನೆ. ಯುವತಿ ಸಾವಿಗೆ ಡಿಕೆಶಿಯೇ ಕಾರಣ ಆಗ್ತಾರೆ. ಎಂದು ಹೇಳಿದ್ದಾರೆ.
ಇನ್ನು ನನ್ನ ಬಳಿ 11 ದಾಖಲೆಗಳಿದ್ದಾವೆ. ಅವುಗಳನ್ನು ಬಿಡುಗಡೆ ಮಾಡಲ್ಲ. ಆ ದಾಖಲೆಗಳನ್ನು SITಗೆ ನೀಡುತ್ತೇನೆ. ನಿನ್ನೆ ದಾಖಲೆ ಬಿಡುಗಡೆಯಾದ ಕೂಡಲೇ ಡಿ.ಕೆ.ಶಿವಕುಮಾರ್ ಉಲ್ಟಾ ಹೊಡೆದಿದ್ರು. ಆ ಕಾರಣದಿಂದಾಗಿ ನನ್ನ ದಾಖಲೆಗಳನ್ನು SITಗೆ ನೀಡುತ್ತೇನೆ ಎಂದು ಹೇಳಿದ್ರು.
ಒಟ್ಟಿನಲ್ಲಿ ಈ ಸಿ.ಡಿ ಲೇಡಿ ಪ್ರಕರಣ ದಿನದಿಂದ ದಿನಕ್ಕೆ ಟ್ವಿಸ್ಟ್ ಪಡೆದಿದೆ. ಇನ್ನು ಈ ಪ್ರಕರಣ ಯಾವ ಆಯಾಮ ಪಡೆಯಲಿದೆಯೋ ಕಾದು ನೋಡಬೇಕಿದೆ.