ದುಬಾರಿ ಬೆಲೆಯ ಮರ್ಸಿಡೀಸ್ ಬೆಂಜ್ ಕಾರು ಖರೀದಿ ಮಾಡಿದ ಕಿರಣ್ ರಾಜ್

ಹೈಲೈಟ್ಸ್‌:

  • ಹೊಸ ಕಾರು ಖರೀದಿ ಮಾಡಿದ ಕಿರಣ್ ರಾಜ್
  • ದುಬಾರಿ ಬೆಲೆಯ ಮರ್ಸಿಡೀಸ್ ಬೆಂಜ್ ಕಾರಿಗೆ ಒಡೆಯನಾದ ನಟ ಕಿರಣ್ ರಾಜ್
  • ಕಪ್ಪು ಬಣ್ಣದ ಕಾಸ್ಟ್ಲಿ ಮರ್ಸಿಡೀಸ್ ಕಾರು ಕೊಂಡುಕೊಂಡ ನಟ ಕಿರಣ್ ರಾಜ್

ಕನ್ನಡ ಕಿರುತೆರೆಯ ಅತ್ಯಂತ ಜನಪ್ರಿಯ ಧಾರಾವಾಹಿ ‘ಕನ್ನಡತಿ’ ಮೂಲಕ ಕನ್ನಡಿಗರ ಮನೆ ಮನ ಗೆದ್ದಿರುವ ನಟ ಕಿರಣ್ ರಾಜ್. ‘ಕನ್ನಡತಿ’ ಧಾರಾವಾಹಿಯಲ್ಲಿ ಬಿಸಿನೆಸ್‌ಮ್ಯಾನ್ ಹರ್ಷನ ಪಾತ್ರಕ್ಕೆ ಜೀವ ತುಂಬಿ ಅಭಿನಯಿಸುತ್ತಿರುವ

ಕಿರಣ್ ರಾಜ್ ಕೈಯಲ್ಲಿ ಸಾಕಷ್ಟು ಸಿನಿಮಾಗಳಿವೆ.

ಸೀರಿಯಲ್ ಹಾಗೂ ಸಿನಿಮಾಗಳ ಚಿತ್ರೀಕರಣದಲ್ಲಿ ಬಿಜಿಯಾಗಿರುವ ಕಿರಣ್ ರಾಜ್ ಇದೀಗ ತಮ್ಮ ಅಭಿಮಾನಿಗಳಿಗೆಲ್ಲ ಸರ್‌ಪ್ರೈಸ್ ನೀಡಿದ್ದಾರೆ. ನಟ ಕಿರಣ್ ರಾಜ್ ಹೊಸ ಕಾರೊಂದನ್ನು ಖರೀದಿ ಮಾಡಿದ್ದಾರೆ. ದುಬಾರಿ ಬೆಲೆ ಮರ್ಸಿಡೀಸ್ ಬೆಂಜ್ ಕಾರಿಗೆ ಕಿರಣ್ ರಾಜ್ ಒಡೆಯನಾಗಿದ್ದಾರೆ.

ಹೌದು, ನಟ ಕಿರಣ್ ರಾಜ್ ಕಪ್ಪು ಬಣ್ಣದ ಕಾಸ್ಟ್ಲಿ ಮರ್ಸಿಡೀಸ್ ಬೆಂಜ್ ಕಾರನ್ನು ಕೊಂಡುಕೊಂಡಿದ್ದಾರೆ. ಕಾರು ಖರೀದಿ ಮಾಡಿದ್ಮೇಲೆ ದೇವಸ್ಥಾನಕ್ಕೆ ತೆರಳಿ ಪೂಜೆ ಮಾಡಿಸಿದ್ದಾರೆ.

kiran raj 2

ಕಪ್ಪು ಬಣ್ಣದ ಮರ್ಸಿಡೀಸ್ ಬೆಂಜ್ ಕಾರಿನ ಪಕ್ಕ ನಿಂತಿರುವ ಫೋಟೋ ಹಾಗೂ ಅದಕ್ಕೆ ಪೂಜೆ ಸಲ್ಲಿಸುತ್ತಿರುವ ಫೋಟೋಗಳನ್ನು ನಟ ಕಿರಣ್ ರಾಜ್ ತಮ್ಮ ಸೋಷಿಯಲ್ ಮೀಡಿಯಾ ಅಕೌಂಟ್‌ಗಳ ಮೂಲಕ ಅಭಿಮಾನಿಗಳ ಜೊತೆಗೆ ಹಂಚಿಕೊಂಡಿದ್ದಾರೆ. ಇದರಿಂದ ನಟ ಕಿರಣ್ ರಾಜ್‌ಗೆ ಶುಭಾಶಯಗಳ ಮಹಾಪೂರವೇ ಹರಿದುಬರುತ್ತಿದೆ.

kiran raj 1

ಕಿರಣ್ ರಾಜ್‌ ಕುರಿತು..
ಮೂಲತಃ ಮೈಸೂರಿನವರಾದ ಕಿರಣ್ ರಾಜ್ ಹುಟ್ಟಿಬೆಳೆದಿದ್ದೆಲ್ಲಾ ಉತ್ತರ ಭಾರತದಲ್ಲಿ. ಕಿರಣ್ ರಾಜ್ ತಂದೆ ಸುರೇಶ್ ಭಾರತೀಯ ಸೇನೆಯಲ್ಲಿ ಕಾರ್ಯನಿರ್ವಹಿಸಿದ್ದಾರೆ. ಆಳ್ವಾಸ್ ಕಾಲೇಜ್‌ನಲ್ಲಿ ಕಿರಣ್ ರಾಜ್ ಬಿಸಿಎ ಮುಗಿಸಿದ್ದಾರೆ. ಇವರ ನಟನಾ ಜೀವನ ಶುರುವಾಗಿದ್ದು ಹಿಂದಿಯ ಧಾರಾವಾಹಿಯಿಂದ. ಹಿಂದಿಯಲ್ಲಿ ‘ಹೀರೋಸ್’, ‘ಲವ್ ಬೈ ಚಾನ್ಸ್’, ‘ಕನೆಕ್ಷನ್ ಆಫ್ ಟೀನೇಜರ್ಸ್’ ಮುಂತಾದ ಸೀರಿಯಲ್‌ಗಳಲ್ಲಿ ಕಿರಣ್ ರಾಜ್ ಕಾಣಿಸಿಕೊಂಡಿದ್ದಾರೆ.

ಕನ್ನಡದ ‘ದೇವತೆ’, ‘ಗುಂಡ್ಯಾನ್ ಹೆಂಡ್ತಿ’, ‘ಚಂದ್ರಮುಖಿ’, ‘ಕಿನ್ನರಿ’ ಧಾರಾವಾಹಿಗಳಲ್ಲಿ ಕಿರಣ್ ರಾಜ್ ಅಭಿನಯಿಸಿದ್ದಾರೆ. ‘ಡ್ಯಾನ್ಸ್ ಡ್ಯಾನ್ಸ್’ ಹಾಗೂ ‘ಲೈಫ್ ಸೂಪರ್ ಗುರು’ ರಿಯಾಲಿಟಿ ಶೋಗಳಲ್ಲಿ ಕಿರಣ್ ರಾಜ್ ಭಾಗವಹಿಸಿದ್ದರು.

ಸದ್ಯ ‘ಬಹದ್ದೂರ್ ಗಂಡು’, ‘ಬಡ್ಡೀಸ್’, ‘ವಿಕ್ರಮ್ ಗೌಡ’ ಮುಂತಾದ ಸಿನಿಮಾಗಳಲ್ಲಿ ಕಿರಣ್ ರಾಜ್ ನಟಿಸುತ್ತಿದ್ದಾರೆ. (ಫೋಟೋ ಕೃಪೆ: ಕಿರಣ್ ರಾಜ್ ಫೇಸ್‌ಬುಕ್ ಪ್ರೊಫೈಲ್)

S S Benakanalli

Founder , Director Of KK NEWS KANNADA _ S S BENAKANAHALLI

Leave a Reply

Your email address will not be published. Required fields are marked *