ಔರಾದ : ರಣಗಂಬ ಉತ್ಸವ ಜಾತ್ರೆ

ತಾಲೂಕಿನ ವಡಗಾಂವ (ದೇ) ಗ್ರಾಮದಲ್ಲಿ ಪ್ರತಿ ವರ್ಷ ನಡೆಯುವ ರಣಗಂಬ ಉತ್ಸವ ಸಡಗರ ಸಂಭ್ರಮದಿಂದ ಜರುಗಿತು.

ರಣಗಂಬ ಉತ್ಸವ ಪ್ರಯುಕ್ತ ಗ್ರಾಮದಲ್ಲಿ ಸಡಗರ ಸಂಭ್ರಮ ಹಬ್ಬದ ವಾತಾವರಣ ಮನೆ ಮಾಡಿತ್ತು. ಗ್ರಾಮದ ಪುರಾತನ ಕೋಟೆಯ ಬಳಿ ಸುಮಾರು 30 ಮೀಟರ್ ಉದ್ದದ ರಣಗಂಬಕ್ಕೆ ಸೀರೆಯನ್ನು ಸುತ್ತಿ ಹೂವುಗಳಿಂದ ಅಲಂಕಾರ ಮಾಡಲಾಗುತ್ತದೆ ನಂತರ ಗ್ರಾಮದ ಮಹಿಳೆಯರು ಊಡಿ ತುಂಬಿ, ಕಾಯಿ ಒಡೆದು ಪೂಜೆ ಸಲ್ಲಿಸಿದರು.

ಈ ರಣಗಂಬ ಉತ್ಸವಕ್ಕೆ ನೇರೆಯ ರಾಜ್ಯಗಳಾದ ಮಹಾರಾಷ್ಟ್ರ ತೆಲಂಗಾಣ ಜನ ಉತ್ಸಾಹದಿಂದ ಪಾಲ್ಗೊಳ್ಳುತ್ತಾರೆ. ಈ ಉತ್ಸವದಲ್ಲಿ ಗ್ರಾಮದ ಜನ ಜಾತಿ ಭೇದವಿಲ್ಲದೆ ಎಲ್ಲರೂ ಭಕ್ತಿಭಾವದಿಂದ ರಣಗಂಬ ಉತ್ಸವದ ವಿಶೇಷ.

ಈ ಸಂದರ್ಭದಲ್ಲಿ ಬಸವರಾಜ ದೇಶಮುಖ, ವೀರಪ್ಪ ಖಾನಾಪುರೆ, ಸಿದ್ದಯ್ಯ ಸ್ವಾಮಿ, ಶಂಕರಪ್ಪ ಧರ್ಮಜ, ಶಿವರಾಜ ಬುಣಗೆ, ರತಿಕಾಂತ ನೇಳಗೆ, ನಾಗಪ್ಪ ಕೋಳಿ, ನವೀಲಕುಮಾರ ಉತ್ಕಾರ ಸೇರಿದಂತೆ ಗ್ರಾಮಸ್ಥರು ಪಾಲ್ಗೊಂಡಿದ್ದರು.

S S Benakanalli

Founder , Director Of KK NEWS KANNADA _ S S BENAKANAHALLI

Leave a Reply

Your email address will not be published. Required fields are marked *