ಆಳಂದ : ವರ್ಷದಲ್ಲಿ ಆಳಂದ ತಾಲೂಕನಲ್ಲಿ 1712 ಕೊರೊನಾ ಕೇಸ್
ಆಳಂದ : ಪಟ್ಟಣ ಸೇರಿ ಗ್ರಾಮೀಣ ಭಾಗದಲ್ಲಿ ಒಂದು ವರ್ಷದಿಂದ ನಿನ್ನೆಯವರೆಗೆ 1712 ಜನರಿಗೆ ಕೊರೊನಾ ಸೋಂಕು ತಗಲಿದೆ. ಪೈಕಿ 1651 ಗುಣಮುಖರಾಗಿ ಬಿಡುಗಡೆ ಹೊಂದಿದ್ದಾರೆ. ಒಟ್ಟು 21 ಜನ ಮೃತಪಟ್ಟಿದ್ದಾರೆ. ಇನ್ನೂ 57 ಮಂದಿಗೆ ಸೋಂಕು ತಗಲಿದ್ದು, ಹೋಕ್ವಾರಂಟೈನ್ಗೆ ಒಳಪಡಿಸಲಾಗಿದೆ.
ಈ ಪೈಕಿ ಮೂವರಿಗೆ ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಅಲ್ಲದೆ, ಆಳಂದ ಪಟ್ಟಣದ ಭೀಮನಗರದ ಓರ್ವ ವ್ಯಕ್ತಿಗೆ ಸೋಂಕು ತಗಲಿದ್ದು, ಸಂಪರ್ಕಕ್ಕೆ ಬಾರದೆ ಇರುವುದು ಸೋಂಕಿತ ನೀಡಿದ ಮೊಬೈಲ್ ಸಂಖ್ಯೆ ಸಂಪರ್ಕಕ್ಕೆ ಬಾರದ ಹಿನ್ನೆಲೆಯಲ್ಲಿ ಆರೋಗ್ಯ ಇಲಾಖೆಯಿಂದ ಠಾಣೆಗೆ ದೂರು ನೀಡಲಾಗಿದೆ ಎಂದು ಇಲಾಖೆ ಮೂಲಗಳು ತಿಳಿಸಿವೆ.
ಮಾ. 29ರಂದು ತಡಕಲ್ ಗ್ರಾಮದ ವಿದ್ಯಾರ್ಥಿ (11), ಪುರುಷ (36), ಪಡಸಾವಳಿ ಸರ್ಕಾರಿ ಶಾಲೆಯ (14) ವರ್ಷದ ಇಬ್ಬರು ವಿದ್ಯಾರ್ಥಿಗಳು, ಲೆಂಗಟಿ ಶಾಲೆಯ (13) ವರ್ಷದ ವಿದ್ಯಾರ್ಥಿನಿ, ಖೇಡ ಉಮ್ಮರಗಾದಲ್ಲಿ (13) ವರ್ಷದ ವಿದ್ಯಾರ್ಥಿ, ಸಾಲೇಗಾಂವ ಗ್ರಾಮದ (53) ವರ್ಷದ ಶಿಕ್ಷಕರೊಬ್ಬರಿಗೆ ಕೋವಿಡ್ ಸೋಂಕು ದೃಡಪಟ್ಟಿದೆ. ಒಟ್ಟಾರೆ ಸೋಂಕಿನ ಅಟ್ಟಹಾಸಕ್ಕೆ ನೆರವಾಗಿ ಸಾವಿನ ಸಂಖ್ಯೆ ಹೇಳಿಕೊಳ್ಳುವಂತ್ತಿಲ್ಲ, ಒಟ್ಟಾರೆಯಾಗಿ ಸೋಂಕು ತಗಲಿದರು ಸೋಂಕಿತ ರೋಗಿಗಳು ಸಹಜ ಸ್ಥಿತಿಗೆ ತಲುಪಿ ಗುಣಮುಖರಾಗುತ್ತಿರುವುದು ಆಶಾದಾಯಕವಾಗಿ ಕಂಡಿದೆ.
ನೆಗೆಟಿವ್ ರಿಪೋರ್ಟ್ ಇಲ್ಲದೇ ಪ್ರವೇಶವಿಲ್ಲ:
ಮಹಾರಾಷ್ಟ್ರದಿಂದ ರಾಜ್ಯ ಬರುವರರು ಕಡ್ಡಾಯವಾಗಿ ಕೋವಿಡ್ ಪರೀಕ್ಷೆಗೊಳಪಟ್ಟ ನೆಗೆಟಿವ್ ರಿಪೋರ್ಟ್ ಹೊಂದಿದ್ದರೆ ಮಾತ್ರ ಪ್ರವೇಶಕ್ಕೆ ಅವಕಾಶ ಕಲ್ಪಿಸಲಾಗುವುದು ಎಂದು ತಹಸಿಲ್ದಾರ್ ಯಲ್ಲಪ್ಪ ಸುಬೇದಾರ ಅವರು ಸ್ಪಷ್ಟಪಡಿಸಿದ್ದಾರೆ.
ಈ ಕುರಿತು ಪ್ರತಿಕ್ರಿಯೆ ನೀಡಿದ ಅವರು, ತಹಸಿಲ್ದಾರ್ ಅವರ ಅನುಮತಿ ಇಲ್ಲದೇ ಯಾವುದೇ ರೀತಿಯ ಮದುವೆ, ಜಾನುವಾರು ಸಂತೆ, ಮೆರವಣಿಗೆ, ವಾರದ ಸಂತೆ ನಡೆಸುವಂತಿಲ್ಲ.
ಖಾಸಗಿ ಆಸ್ಪತ್ರೆಗಳಲ್ಲಿ ಕೊರೋನಾ ಲಕ್ಷಣಗಳಿರುವ ರೋಗಿಗಳನ್ನು ಕಡ್ಡಾಯವಾಗಿ ಸ್ಥಳೀಯ ಆಸ್ಪತ್ರೆಗೆ ಕಳುಹಿಸುವಂತಾಗಬೇಕು.
ವಿವಿಧ ರಾಜ್ಯಗಳ ಜನರ ಮಾಹಿತಿಯನ್ನು ತಹಸಿಲ್ದಾರ್ ಕಚೇರಿಗೆ ನೀಡಬೇಕು. ನಗರ ಪ್ರದೇಶಗಳಲ್ಲಿ ಜಾತ್ರೆ, ಸಂತೆ, ಮದುವೆ ಹಾಗೂ ಉರುಸ್ಗಳನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ ಎಂದು ಅವರು ಹೇಳಿದರು.
ಬಸ್ ಸಂಚಾರ ಸ್ಥಗಿತ: ಕರ್ನಾಟಕ ಹಾಗೂ ಮಹಾರಾಷ್ಟ್ರಕ್ಕೆ ಹೋಗಿ ಬರುವ ಸಾರಿಗೆ ಸಂಸ್ಥೆಯ ಬಸಗಳ ಸಂಚಾರ ಗಡಿ ಪ್ರವೇಶದಲ್ಲೇ ಸ್ಥಗಿತಗೊಳಿಸಲಾಗಿದೆ. ಗಡಿಭಾಗದಲ್ಲಿ ಸ್ಥಾಪಿಸಿದ ಕೋವಿಡ್ ತಪಾಸಣೆ ಚೆಕ್ಪೋಸ್ಟ್ಗಳಲ್ಲಿ ಬರುವ ಹೊರರಾಜ್ಯದವರು ಕೋವಿಡ್ ನೆಗೆಟ್ಟಿವು ವರದಿ ಇದ್ದರೆ ಮಾತ್ರ ಒಳಗೆ ಪ್ರವೇಶ ನೀಡಲಾಗುತ್ತಿದೆ.
ಸದ್ಯ ಗಡಿ ಭಾಗದವರೆಗೆ ಎರಡು ರಾಜ್ಯದ ಬಸ್ಗಳು ಬಂದು ಹಿಂದುರುಗುತ್ತಿವೆ. ಸಾರ್ವಜನಿಕರಿಗೆ ನೆಗೆಟ್ಟಿವು ವರದಿ ಇದ್ದವರಿಗೆ ಪ್ರವೇಶ ನೀಡಲಾಗುತ್ತಿದೆ.