ಯಾದಗಿರಿ ಜಿಲ್ಲೆಯಲ್ಲಿ ಸಂಚಾರಿ ನಿಯಮ ಪಾಲನೆ ಮಾಡದ ಜನ; 5 ಕೋಟಿ ರೂ. ದಂಡ ಹಾಕಿದ ಪೊಲೀಸರು
ಯಾದಗಿರಿ: ಜನರ ಜೀವ ಉಳಿಸಲು ಸರಕಾರ ಅನೇಕ ನಿಯಮ ಜಾರಿಗೆ ತಂದರೂ ಜನರು ಮಾತ್ರ ನಿಯಮ ಉಲ್ಲಂಘಿಸಿ ವಾಹನ ಚಲಾವಣೆ ಮಾಡಿ ಈಗ ಬಲಿಯಾಗುತ್ತಿದ್ದಾರೆ. ಸಂಚಾರಿ ನಿಯಮ ಪಾಲನೆ ಮಾಡದೇ , ಜನರು ಡೋಂಟ್ ಕೇರ್ ಎನ್ನುತ್ತಿದ್ದಾರೆ. ಪೊಲೀಸರು ಎಷ್ಟೇ ದಂಡಾಸ್ತ್ರ ಪ್ರಯೋಗಿಸಿದರೂ ಜನರು ಮಾತ್ರ ಸಂಚಾರಿ ನಿಯಮ ಪಾಲನೆ ಮಾಡುತ್ತಿಲ್ಲ.ಇದರಿಂದ ಅಪಘಾತಗಳು ಹೆಚ್ಚಾಗುತ್ತಿವೆ. ಕೋಟ್ಯಾಂತರ ರೂ. ದಂಡ ಕಟ್ಟಿದರೂ ನಿಯಮ ಮಾತ್ರ ಪಾಲಿಸುತ್ತಿಲ್ಲ. ಪೊಲೀಸರು ಮಾತ್ರ ದಂಡ ಹಾಕಿ ತಕ್ಕ ಪಾಠ ಕಲಿಸುತ್ತಿದ್ದಾರೆ.
ಯಾದಗಿರಿ ಜಿಲ್ಲೆಯಲ್ಲಿ ಬೈಕ್,ಇನ್ನಿತರ ವಾಹನಗಳ ಸಂಖ್ಯೆ ಹೆಚ್ಚಾಗಿವೆ. ನಿತ್ಯವೂ ಸಾವಿರಾರು ವಾಹನಗಳು ಸಂಚಾರ ಮಾಡುತ್ತವೆ. ಆದರೆ,ವಾಹನ ಸವಾರರು ಮಾತ್ರ ಸಂಚಾರ ನಿಯಮ ಪಾಲಿಸದೇ ಡೋಂಟ್ ಕೇರ್ ಎನ್ನುತ್ತಿದ್ದಾರೆ. ಜನರ ನಿಷ್ಕಾಳಜಿಯ ವಾಹನ ಚಾಲನೆಯಿಂದ ಈಗ ರಸ್ತೆ ಅಪಘಾತ ಪ್ರಕರಣಗಳು ಹೆಚ್ಚಾಗುತ್ತಿವೆ. ಅದೆ ರೀತಿ ಯಾದಗಿರಿ ಪೊಲೀಸರು ಹಗಲು ರಾತ್ರಿ ಎನ್ನದೇ ಸಂಚಾರಿ ನಿಯಮ ಉಲ್ಲಂಘನೆ ಮಾಡಿ ವಾಹನ ಚಲಾಯಿಸುವವರ ಮೇಲೆ ಹದ್ದಿನ ಕಣ್ಣಿಟ್ಟು ದಂಡ ಹಾಕುವ ಕೆಲಸ ಮಾಡುತ್ತಿದ್ದಾರೆ. ಯಾದಗಿರಿ ಜಿಲ್ಲೆಯಲ್ಲಿ ಟ್ರಾಫಿಕ್ ರೂಲ್ಸ್ ಅನ್ನೇ ಜನ ಮರೆತು ಬಿಟ್ಟಿದ್ದಾರೆ. ಪೊಲೀಸ್ ಇಲಾಖೆಯು ಕೂಡ ಸಂಚಾರಿ ನಿಯಮ ಪಾಲನೆ ಬಗ್ಗೆ ಜಾಗೃತಿ ಮೂಡಿಸಿದ್ರು ಜನರು ಮಾತ್ರ ಡೋಂಟ್ ಕೇರ್ ಎನ್ನುತ್ತಿದ್ದಾರೆ.
ಈ ಬಗ್ಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಋಷಿಕೇಶ್ ಭಗವಾನ್ ಸೋನವಣೆ ಮಾತನಾಡಿ, 2019 ರಿಂದ ಇಲ್ಲಿವರಗೆ ರಸ್ತೆ ಅಪಘಾತದಲ್ಲಿ 319 ಜನ ಮೃತಪಟ್ಟಿದ್ದು, 2019 ರಿಂದ ಇಲ್ಲಿವರಗೆ 2 ಲಕ್ಷ ಸಂಚಾರಿ ನಿಯಮ ಉಲ್ಲಂಘನೆ ಪ್ರಕರಣಗಳು ದಾಖಲಾಗಿವೆ. 2019 ರಿಂದ ಇಲ್ಲಿವರೆಗೆ 5 ಕೋಟಿ 6 ಲಕ್ಷ ರೂ ದಂಡ ಹಾಕಲಾಗಿದೆ. ಜನರು ಸಂಚಾರಿ ನಿಯಮ ಪಾಲನೆ ಮಾಡುವ ಜೊತೆ ರಸ್ತೆ ಮೇಲೆ ಚಲಾಯಿಸುಕೊಂಡು ಹೋಗಬೇಕಾದರೆ ಎಚ್ಚರಿಕೆ ಅಗತ್ಯವಾಗಿದೆ ಎಂದರು. ಅದೆ ರೀತಿ ಅಪಘಾತ ವಲಯಗಳೆಂದು ಗುರುತಿಸಲಾಗಿದೆ ಎಂದರು.
ಯಾದಗಿರಿ ಜಿಲ್ಲೆಯಲ್ಲಿ ಇಲ್ಲಿವರಗೆ ಸಂಚಾರಿ ನಿಯಮ ಉಲ್ಲಂಘನೆ ಮಾಡಿದ ಹಿನ್ನೆಲೆ 5 ಕೋಟಿ 6 ಲಕ್ಷ ರೂ ದಂಡಹಾಕಲಾಗಿದೆ. ಅದೆ ರೀತಿ 2019 ರಿಂದ ಇಲ್ಲಿವರಗೆ ಬೈಕ್ ಸ್ಕಿಡ್ ಆಗಿ, ಟಂಟಂ ಪಲ್ಟಿ ಹಾಗೂ ವಿವಿಧ ರಸ್ತೆ ಅಪಘಾತ ಪ್ರಕರಣಗಳಿಂದ 319 ಜನ ಬಲಿಯಾಗಿದ್ದಾರೆ. ಹೆಲ್ಮೆಟ್ ಧರಿಸುವುದು ಹಾಗೂ ಹತ್ತು ಹಲವಾರು ನಿಯಮ ಪಾಲಿಸಬೇಕಾದ ಜನರು ಮಾತ್ರ ನಿಯಮ ಪಾಲನೆ ಮಾಡದೆ ಡೋಂಟ್ ಕೇರ್ ಎನ್ನುತ್ತಿದ್ದಾರೆ.
ಆದರೆ, ಜನರ ನಿಷ್ಕಾಳಜಿಯಿಂದ ಸಾಯುವವರ ಸಂಖ್ಯೆ ಹೆಚ್ಚಾಗುತ್ತಿದೆ. ಕುಡಿದು ವಾಹನ ಚಾಲನೆ, ವಾಹನ ಚಾಲನೆ ಮಾಡುವಾಗ ಮೊಬೈಲ್ ಬಳಸಿ ವಾಹನ ಚಾಲನೆ ಹೀಗೆ ನಿಯಮ ಉಲ್ಲಂಘನೆ ಮಾಡಿ ಬೈಕ್ ನಡೆಸಲಾಗುತ್ತಿದೆ.ಇದರಿಂದ ಅಪಘಾತ ಪ್ರಕರಣಗಳು ಹೆಚ್ಚಾಗುತ್ತಿವೆ. ಈ ಬಗ್ಗೆ ಪೊಲೀಸರು ಬಿಸಿಲಿನ ನಡುವೆ ದಂಡ ಹಾಕುವ ಕೆಲಸ ಮಾಡುತ್ತಿದ್ದಾರೆ. ಸಂಚಾರಿ ಪೊಲೀಸರು ಕಟ್ಟುನಿಟ್ಟಿನ ಕ್ರಮ ಕೈಗೊಂಡರೂ ಜನರು ನಿಯಮ ಪಾಲನೆ ಮಾಡುತ್ತಿಲ್ಲ. ಉಲ್ಲಂಘನೆ ಮಾಡದೆ ಸಂಚಾರಿ ನಿಯಮ ಪಾಲನೆ ಮಾಡಿ ತಮ್ಮ ಅಮೂಲ್ಯ ಜೀವ ಉಳಿಸುವ ಕೆಲಸ ಮಾಡಬೇಕಿದೆ.