Yuvarathnaa :ರಾಜ್ಯದೆಲ್ಲೆಡೆ ಇಂದು ಯುವರತ್ನನ ಅಬ್ಬರ; ಪುನೀತ್​ ಅಭಿಮಾನಿಗಳ ಸಂಭ್ರಮ

ಪವರ್​ ಸ್ಟಾರ್​ ಪುನೀತ್​ ರಾಜ್​ಕುಮಾರ್​ ಅಭಿನಯದ ಬಹುನಿರೀಕ್ಷಿತ ಚಿತ್ರ ‘ಯುವರತ್ನ’ ಇಂದು ಬಿಡುಗಡೆಯಾಗಿದೆ. ರಾಜ್ಯದಲ್ಲಿ 400 ಚಿತ್ರಮಂದಿರದಲ್ಲಿ ಚಿತ್ರ ಬಿಡುಗಡೆಯಾಗಿದ್ದು, ಇಂದು ಮುಂಜಾನೆ ಆರು ಗಂಟೆಯಿಂದಲೇ ಶೋ ಪ್ರಾರಂಭವಾಗಿದ್ದು, ಹೌಸ್​ಫುಲ್​ ಪ್ರದರ್ಶನ ಕಾಣುತ್ತಿದೆ. ಅಪ್ಪು ಅಭಿಮಾನಿಗಳು ಈಗಾಗಲೇ ಟಿಕೆಟ್​ ಬುಕ್ಕಿಂಗ್​ ಮಾಡಿದ್ದಾರೆ. ಕನ್ನಡ ಮತ್ತು ತೆಲಗಿನಲ್ಲಿ ಚಿತ್ರ ಏಕಕಾಲಕ್ಕೆ ಬಿಡುಗಡೆಯಾಗಿದೆ. ತೆಲಂಗಾಲ- ಆಂಧ್ರದ 300ಕ್ಕೂ ಹೆಚ್ಚು ಚಿತ್ರಮಂದಿರದಲ್ಲಿ ಯುವರತ್ನ ಸಿನಿಮಾ ತೆರೆಕಂಡಿದೆ. ಸಿಲಿಕಾನ್​ಸಿಟಿಯ ನವರಂಗ್, ಸಿದ್ದಲಿಂಗೇಶ್ವರ, ಅಂಜನ್, ಸೇರಿದಂತೆ ಬೆಂಗಳೂರಿನ ಹಲವೆಡೆ ಮುಂಜಾನೆ 6 ಗಂಟೆಯಿಂದ ಶೋ ಆರಂಭವಾಗಿದ್ದು, ಅಭಿಮಾನಿಗಳು ಅಪ್ಪು ನಟನೆಗೆ ಬಹುಪರಾಕ್​ ಹಾಡಿದ್ದಾರೆ. ಈ ಹಿಂದೆ ‘ರಾಜಕುಮಾರ’ ನಂತಹ ಬಿಗ್​ ಹಿಟ್​ ಸಿನಿಮಾ ನೀಡಿದ್ದ ಸಂತೋಷ್​ ಆನಂದ್​ರಾಮ್​ ಮತ್ತು ಪುನೀತ್​ ಜೋಡಿ ಈಗ ‘ಯುವರತ್ನ’ದಲ್ಲಿಯೂ ಜೊತೆಯಾಗಿದೆ. ಈ ಹಿನ್ನಲೆ ಈ ಚಿತ್ರ ಕೂಡ ನಿರೀಕ್ಷೆಗೂ ಮೀರಿ ಹಿಟ್ ಆಗುವ ಸಾಧ್ಯತೆ ಇದೆ ಎನ್ನಲಾಗಿದೆ.

ಇನ್ನು ಹೊಂಬಾಳೆ ಬ್ಯಾನರ್​ನಲ್ಲಿ ಈ ಚಿತ್ರ ಮೂಡಿ ಬಂದಿದ್ದು, ವಿಜಯ ಕಿರಗಂದೂರು ಈ ಅದ್ದೂರಿ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಪುನೀತ್​ಗೆ ಇದೇ ಮೊದಲ ಬಾರೊ ಸಯೇಶಾ ಸೆಹಗಲ್ ಜೋಡಿಯಾಗಿದ್ದು, ಪ್ರಕಾಶ್ ರಾಜ್, ಶರತ್ ಕುಮಾರ್, ರಂಗಾಯಣ ರಘು, ಅವಿನಾಶ್, ದಿಗಂತ್, ಧನಂಜಯ್ ಸೇರಿದಂತೆ ಬಹುತಾರಾಗಣ ಚಿತ್ರದಲ್ಲಿದೆ.

ಟ್ವಿಟರ್​ನಲ್ಲಿ ಟ್ರೆಂಡ್​ ಆದ ಯುವರತ್ನ:

ಬಿಡುಗಡೆಯಾದ ಕೆಲವೇ ನಿಮಿಷಗಳಲ್ಲಿ ‘ಯುವರತ್ನ’ ಸಿನಿಮಾದ ಹೆಸರು ಟ್ವಿಟರ್​ನಲ್ಲಿ ಟ್ರೆಂಡ್​ ಆಗಿದೆ. ಪುನೀತ್​ ಅಭಿಮಾನಿಗಳು ಚಿತ್ರದ ಹೆಸರನ್ನು ಟ್ರೆಂಡ್​ ಮಾಡಿದ್ದು, ಅಪ್ಪುಗೆ ಬಹುಪರಾಕ್​ ಹೇಳಿದ್ದಾರೆ.

ಅಭಿಮಾನಿಗಳಿಗೆ ಹಬ್ಬ

ಕಳೆದೆರಡು ವರ್ಷಗಳಿಂದ ಪುನೀತ್​ ರಾಜ್​ಕುಮಾರ್​ ಅಭಿಮಾನಿಗಳು ಈ ಚಿತ್ರಕ್ಕೆ ಕಾತುರರಾಗಿದ್ದರು. ಚಿತ್ರದ ಟೀಸರ್​ ಮೂಲಕ ಮತ್ತು ಹಾಡುಗಳ ಮೂಲಕ ಚಿತ್ರದ ನಿರೀಕ್ಷೆ ಇನ್ನಷ್ಟು ಹೆಚ್ಚಿತ್ತು. ಕೋವಿಡ್​ ನಂತರದಲ್ಲಿ ಬಿಡುಗಡೆಯಾಗುತ್ತಿರುವ ಅದ್ಧೂರಿ ಚಿತ್ರ ಇದಾಗಿದ್ದು, ಅಭಿಮಾನಿಗಳು ಸಂತಸ ವ್ಯಕ್ತಪಡಿಸಿದ್ದಾರೆ

S S Benakanalli

Founder , Director Of KK NEWS KANNADA _ S S BENAKANAHALLI

Leave a Reply

Your email address will not be published. Required fields are marked *