ಜ್ಞಾನದ ಪ್ರತಿರೂಪವೇ ಈ ಸ್ಕೌಟ್ – ಗೈಡ್ಸ್ | Article By Kashibai Guttedar | SB University JMC Department

ಯುವಜನತೆಯಲ್ಲಿ ಶಿಸ್ತು ಮತ್ತು ಜ್ಞಾನವನ್ನು ಹೆಚ್ಚಿಸಲು ಮುಖ್ಯಪಾತ್ರ ವಹಿಸುವುದೇ ಸ್ಕೌಟ್ಸ್ ಗೈಡ್ಸ್ ಎಂದೇ ಹೇಳಬಹುದು ವಿಜ್ಞಾನವನ್ನು ಪಡೆದ ಪ್ರತಿಯೊಬ್ಬ ವ್ಯಕ್ತಿಯೂ ಅಪರಿಮಿತ ಜ್ಞಾನವನ್ನು ಹೊಂದುವುದರಲ್ಲಿ ಯಶಸ್ಸನ್ನು ಕಾಣುತ್ತಾನೆ ಜ್ಞಾನದ ಪ್ರತಿರೂಪವೇ ಈ ಸ್ಕೌಟ್ಸ್-ಗೈಡ್ಸ್

ಸುಂದರ ಬದುಕು ಹಾಗೂ ಅರೋಗ್ಯಕರ ಸಮಾಜ ಕಟ್ಟುವಲ್ಲಿ ಸ್ಕೌಟ್ ಗೈಡನ್ ಶಿಸ್ತು ಮತ್ತು ಕೌಶಲ್ಯಗಳ ಪಾತ್ರ ಮಹತ್ವದ್ದಾಗಿದೆ.

ವಿದ್ಯಾರ್ಥಿಗಳು ಯುವಕರು ಯುವತಿಯರು ದೇಶದ ಪ್ರತಿಯೊಬ್ಬರಿಗೂ ದೇಶದ ಬಗ್ಗೆ ಜ್ಞಾನವನ್ನು ಮೂಡಿಸುವ ಸೇವಾ ಮನೋಭಾವ ಬೆಳೆಸುವಲ್ಲಿ ಮುಖ್ಯಪಾತ್ರವಹಿಸುತ್ತದೆ. ಪ್ರತಿಯೊಬ್ಬರಿಗೂ ದೇಶದ ರಕ್ಷಣೆಯ ಮನೋಭಾವ ಹುಟ್ಟಿಸುತ್ತದೆ

ಮಕ್ಕಳು 4 ಗೋಡೆಗಳ ನಡುವೆ ಓದು ಬರಹ ಕಲಿಯುವುದರಲ್ಲಿ ಜತೆಗೆ ನಿಸರ್ಗದ ಮಡಿಲಲ್ಲಿ ಒಂದಾಗಿ ಬೆರೆತು ಸಮನ್ವಯದಿಂದ ಬಾಳಲು ಕಲಿಯುವಂತೆ ಪ್ರೇರೆಪಿಸುವ ಕಾರ್ಯಕ್ರಮ ಇದಾಗಿದೆ.
ಇದರಲ್ಲಿ ಭಾಗಿಯಾದ ವಿದ್ಯಾರ್ಥಿಗಳು ವ್ಯಕ್ತಿತ್ವ ವಿಕಾಸನದ ಜೊತೆಗೆ ಕಲಿಕೆಯಲ್ಲೂ ಪ್ರಗತಿ ಸಾದಿಸಲು ಸಾಧ್ಯವಾಗುತ್ತದೆ, ಹಾಗೆ ಮಕ್ಕಳಲ್ಲಿ ಪರಿಸರ ಪ್ರಜ್ಞಾ, ಸಂಸ್ಕೃತಿಯ ಅರಿವನ್ನು ಮೂಡಿಸವ ಕೆಲಸ ಇದರದಾಗಿದೆ.

 

ನಾಲ್ಕು ಗೋಡೆಗಳ ಮದ್ಯೆ ಬಂದಿಯಾಗಿ ಕೇವಲ ಶಾಲಾ ಪಠ್ಯ ಪುಸ್ತಕ ಓದುವುದರಿಂದ ಮಕ್ಕಳು ಪ್ರಗತಿಯಾಗುವುದಿಲ್ಲ. ಪ್ರಕೃತಿ ಮಡಿಲಲ್ಲಿ ಅಳೆಯಬೇಕು. ಬೆಟ್ಟ ಹತ್ತಬೇಕು, ನದಿಯಲ್ಲಿ ಈಜಬೇಕು. ಎಲ್ಲಾ ಭಾಷೆ ಸಂಸ್ಕೃತಿ ಮಕ್ಕಳೊಂದಿಗೆ ಬೇರೆಯಬೇಕು. ಇದರ ಜೊತೆಯಲ್ಲಿ ಸನ್ನಡತೆ, ಸದ್ಭಾವನೇ, ಶಿಸ್ತು ಮತ್ತು ಸೇವಾ ಮನೋಭಾವದಂತ ಶಿಕ್ಷಣ ಪಡೆಯುವುದೇ ಸ್ಕೌಟ್ ಮತ್ತು ಗೈಡ್ ಸಂಸ್ಥೆಯ ಮುಖ್ಯ ಉದ್ದೇಶ.

ಪರಿಸರ ಜಾಗೃತಿ, ಸ್ವಚ್ಛತೇ ಅತ್ಯಂತ ಮಹತ್ವದ್ದಾಗಿದೆ, ಪರಿಸರ ಉಳಿಸಿ ಬೆಳೆಸುವ ಕಾರ್ಯಕ್ರಮವನ್ನು ಮಕ್ಕಳಲ್ಲಿ ತುಂಬುವುದರಿಂದ ಅವರ ಅರೋಗ್ಯಕ್ಕೆ ಯೋಗ ಅತ್ಯವಶ್ಯಕವಾಗಿದ್ದು, ಯೋಗದ ಪರಿಕಲ್ಪನೆಯನ್ನು ಮಕ್ಕಳಲ್ಲಿ ಮೂಡಿಸಬೇಕು.

ಇದರ ಹಿನ್ನೆಲೆಯು ಬೇಡನ ಪಾವೆಲರವರು ಯುವ ಚಳುವಳಿಯನ್ನು ಸಂಶೋದಿಸಿ ಬಿತ್ತಿ ಬೆಳೆಸಿದವರು.1876ರಲ್ಲಿ ವಿದ್ಯಾಭ್ಯಾಸ ಮುಗಿಸಿ ಸೈನ್ಯಕ್ಕೆ ಸೇರಿದರು. ಅವರು ಬಾಲ್ಯದಿಂದಲೇ ಬೆಳೆಸಿಕೊಂಡ ಪ್ರಕೃತಿಯ ಒಡನಾಟ, ಧೈರ್ಯ ಸಾಹಸ, ಪ್ರತಿಭೆ ಸೈನ್ಯದ ಪರೀಕ್ಷೆಯಲ್ಲಿ ಮತ್ತು ವೃತ್ತಿಯಲ್ಲಿ ಉನ್ನತ ಸ್ಥಾನ ದೊರಕಿಸಿಕೊಟ್ಟಿತು.

 

ಬೇಡನ ಪಾವೆಲರಿಗೆ ಈ ಸ್ಕೌಟ್ ಗೈಡನ್ ಪರಿಕಲ್ಪನೆ ಬರಲು ಪ್ರಮುಖ ಕಾರಣವೇ ಭಾರತದಲ್ಲಿ ಸೇವೆ ಸಲ್ಲಿಸಿ ನಂತರ ದಕ್ಷಿಣ ಆಫ್ರಿಕಾಕ್ಕೆ ವರ್ಗಾವಣೆ ಆದರೂ ಅಲ್ಲಿ ಬೊಯಾರ್ಸ್ ಗಳೋಡನೆ ಮೆಫಕಿಂಗ್ ನಗರದ ಯುದ್ಧ ಮಾಡಿದರು. ಆ ಸಂದರ್ಭದಲ್ಲಿ ಸೈನಿಕರ ಸಂಖ್ಯೆ ಕಡಿಮೆ ಇತ್ತು ಅದೇ ನಗರದ ಬ್ರಿಟಿಷ್ ಗಂಡು ಮಕ್ಕಳ ಒಂದು ಪಡೆಯನ್ನು ರಚಿಸಿ, ತರಬೇತಿ ನೀಡಿ ಯುದ್ಧ ಭೂಮಿಯಲ್ಲಿ ದೂತ ಸೇವೆಯನ್ನು ಮಾಡಲು ನೇಮಕ ಮಾಡಿದರು.

ಈ ಪಡೆ ಉಸ್ತಾಹದಿಂದ ಅತ್ಯುತ್ತಮವಾಗಿ ಕಾರ್ಯ ನಿರ್ವಹಿಸಿತು. ಬೇಡನ ಪಾವೆಲರವರು ಈ ಪಡೆಯ ಸೇವೆಯನ್ನು ಮೆಚ್ಚುವರು. ಬಾಲಕರಿಗೆಕೆ ಸ್ಕೌಟಿಂಗ್ ತರಬೇತಿ ನೀಡಬಾರದು ಎಂಬ ವಿಚಾರ ಅವರ ಮನಸ್ಸಿನಲ್ಲಿ ಹುಟ್ಟಿತು. ಈ ವಿಚಾರವನ್ನು ಕಾರ್ಯರೂಪಕ್ಕೆ ತಂದು ಲಂಡನಿನ್
ದ್ವಿಪದಲ್ಲಿ 1907 ರಲ್ಲಿ ಕೇವಲ 20 ಗಂಡು ಮಕ್ಕಳಿಗೆ ಪ್ರಾಯೋಗಿಕವಾಗಿ ತರಬೇತಿ ನೀಡಿದರು. ಪ್ರಾಯೋಗ ಯಶಸ್ವಿಯಾಯಿತು. ಸ್ಕೌಟಿಂಗ್ ಆರಂಭವಾಯಿತು. ಇದನ್ನು ಅನುಸರಿಸಿ ಗೈಡಿಂಗ್ ಆರಂಭವಾಯಿತು. ಇಂದು ಈ ಸಂಸ್ಥೆ ವಿಶ್ವ ದೆ ಲೇ ಡೆ ಬೆಳೆದು 110 ವರ್ಷಕ್ಕೆ ಕಾಲಿಟ್ಟಿದೆ.

ಯುವತಿಯರು ಕೂಡ ಇತೀಚಿನ ದಿನಗಳಲ್ಲಿ ಸ್ಕೌಟ್ ಗೈಡ್ನಲ್ಲಿ ಹಲವಾರು ಕಾರ್ಯಗಳನ್ನು ನಿರ್ವಹಿಸುತ್ತಿರುವುದು ಈ ಕಾರ್ಯಗಳನ್ನು ಗುರುತಿಸಿ 1919 ರಲ್ಲಿ ಯುವತಿಯರನ್ನು ರೇಂಜರ ಎಂಬ ಹೆಸರಿನಿಂದ ಗುರುತಿಸಲಾಯಿತು. ನಾವು ಕೂಡ ಯಾವುದರಲ್ಲೂ ಕಡಿಮೆ ಇಲ್ಲ ಎಂತಹ ಪರಿಸ್ಥಿತಿ ಇದ್ದರು ಅದನ್ನ ಎದುರಿಸುವ ಶಕ್ತಿ ನಮ್ಮಲಿದೆ ಎಂಬ ಧೈರ್ಯ ಈ ಸಂಸ್ಥೆ ಹುಟ್ಟಿಸುತ್ತದೆ.

ಈ ಭಾರತ ಸ್ಕೌಟ್ ಗೈಡ್ ಸಂಸ್ಥೆಯು ಒಂದು ಸ್ವಯಂ ಸೇವಾ ಸಂಸ್ಥೆಯಾಗಿದ್ದು ರಾಜಕೀಯವಲ್ಲದ ಮಕ್ಕಳಿಗೆ ಯುವಕರಿಗೆ ಮೀಸಲಾಗಿರುವ ಜಾತಿ ಹುಟ್ಟು ಮತ ಭೇದವಿಲ್ಲದ ಎಲ್ಲಾ ಮಕ್ಕಳು ಯುವಕರಿಗೂ ಅವಕಾಶವಿರುವ ಈ ಸಂಸ್ಥೆಯ ಮೂಲ ಸ್ಥಾಪಕರಾದ 1907 ರಲ್ಲಿ ರಾಬರ್ಟ್ ಬೇಡನ ಪಾವೆಲ್ ರೂಪಿಸಿದ ನೀತಿ ನಿಯಮ ಉದ್ದೇಶಗಳನ್ನು ಹೊಂದಿದೆ.
ಇದರ ಮುಖ್ಯ ಉದ್ದೇಶ ಯುವ ಪೀಳಿಗೆಯ ದೈಹಿಕ, ಮಾನಸಿಕ ಹಾಗೂ ಆದ್ಯಾತ್ಮಿಕ ಬೆಳವಣಿಗೆ ಆಗಿದೆ.
ಸದಾ ದೇಶದ ಸೇವೆಗೆಂದು ಸಿದ್ದನಾಗಿರುವ ಧ್ಯೆಯವಾಕ್ಯವನ್ನು ಹೊಂದಿದೆ.

ಸ್ಕೌಟ್ ಗೈಡ್ ಹುಟ್ಟಿಕೊಳ್ಳಲು ಮೂಲ ಕಾರಣಿಭೂತರೆ ಮಹಾತ್ಮ ಗಾಂಧೀಜಿ ಅವರು. ಇವರು ಭಾರತದ ಪ್ರತಿಯೊಂದು ಮನೆಯಲ್ಲೂ ಸ್ಕೌಟ್ ಗೈಡ್ ಮಕ್ಕಳಿರಬೇಕು ಎಂದು ಅಪೇಕ್ಷೆ ಪಟ್ಟವರು.

ಮಕ್ಕಳು 4 ಗೋಡೆಗಳ ನಡುವೆ ಓದು ಬರಹ ಕಲಿಯುವುದರಲ್ಲಿ ಜತೆಗೆ ನಿಸರ್ಗದ ಮಡಿಲಲ್ಲಿ ಒಂದಾಗಿ ಬೆರೆತು ಸಮನ್ವಯದಿಂದ ಬಾಳಲು ಕಲಿಯುವಂತೆ ಪ್ರೇರೆಪಿಸುವ ಕಾರ್ಯಕ್ರಮ ಇದಾಗಿದೆ.
ಇದರಲ್ಲಿ ಭಾಗಿಯಾದ ವಿದ್ಯಾರ್ಥಿಗಳು ವ್ಯಕ್ತಿತ್ವ ವಿಕಾಸನದ ಜೊತೆಗೆ ಕಲಿಕೆಯಲ್ಲೂ ಪ್ರಗತಿ ಸಾದಿಸಲು ಸಾಧ್ಯವಾಗುತ್ತದೆ, ಹಾಗೆ ಮಕ್ಕಳಲ್ಲಿ ಪರಿಸರ ಪ್ರಜ್ಞಾ, ಸಂಸ್ಕೃತಿಯ ಅರಿವನ್ನು ಮೂಡಿಸವ ಕೆಲಸ ಇದರದಾಗಿದೆ.

ಶಿಕ್ಷಣದಿಂದ ಸ್ವತಂತ್ರರಾಗಿ
ಸಂಘಟನೆಯಿಂದ ಬಲವಂತರಾಗಿ
ಗುಲಾಮಗಿರಿಯಿಂದ ಮುಕ್ತಾರಾಗಿ
ಸದಾ ಸೇವೆಗೆಂದು ಸಿದ್ದರಾಗಿರಿ🙏
ಎಂಬುದೇ ನನ್ನ ಆಶಯ.

ಕಾಶಿಬಾಯಿ. ಸಿ. ಗುತ್ತೇದಾರ ಪಾಳಾ
ಪತ್ರಿಕೋದ್ಯಮ ವಿದ್ಯಾರ್ಥಿನಿ
ಶರಣಬಸವ ವಿಶ್ವ ವಿದ್ಯಾಲಯ ಕಲಬುರಗಿ

S S Benakanalli

Founder , Director Of KK NEWS KANNADA _ S S BENAKANAHALLI

Leave a Reply

Your email address will not be published. Required fields are marked *