ಪೊಲೀಸ್ ಧ್ವಜ ದಿನ ಆಚರಣೆ ಜನರಿಗೆ ಕಷ್ಟಗಳಿಗೆ ಪೊಲೀಸ್ ಇಲಾಖೆಯಿಂದ ಸದಾ ಸ್ಪಂದನೆ

ಬಳ್ಳಾರಿ,ಏ.02: ಪೊಲೀಸ್ ಇಲಾಖೆ ಸಮಾಜವನ್ನು ತಿದ್ದುವ ಕೆಲಸ ಮಾಡುತ್ತಿದ್ದು, ಅತ್ಯಂತ ಕ್ಲಿಷ್ಟಕರ ಪರಿಸ್ಥಿತಿಯಲ್ಲಿ ಜನರ ಕಷ್ಟಗಳಿಗೆ ಸ್ಪಂದಿಸುವ ಕಾರ್ಯ ಪೊಲೀಸ್ ಇಲಾಖೆಯಿಂದ ಆಗುತ್ತಿದೆ ಎಂದು ಬಳ್ಳಾರಿ ವಲಯದ ಪೊಲೀಸ್ ಮಹಾನಿರೀಕ್ಷಕ ಎಂ.ನಂಜುಂಡಸ್ವಾಮಿ ಹೇಳಿದರು.
ಜಿಲ್ಲಾ ಪೊಲೀಸ್ ಇಲಾಖೆಯಿಂದ ಇಂದು ಜಿಲ್ಲಾ ಸಶಸ್ತ್ರ ಪೊಲೀಸ್ ಕವಾಯುತು ಮೈದಾನದಲ್ಲಿ ನಡೆದ ಪೊಲೀಸ್ ದ್ವಜಾ ದಿನಾಚರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಪೊಲೀಸರಿಗೆ ಸಮಾಜದಲ್ಲಿ ಒಳ್ಳೆಯ ಗೌರವವಿದೆ. ಜನರ ಕಷ್ಟಗಳಿಗೆ ಸ್ಪಂದಿಸುವ ಕೆಲಸ ಮಾಡಿ. ಪೊಲೀಸ್ ಇಲಾಖೆಗೆ ಎರಡೇ ಎರಡು ಹಬ್ಬಗಳು ಒಂದು ಬಾವುಟದ ಹಬ್ಬ, ಮತ್ತೊಂದು ಬಾವುಟ ಎತ್ತರಕ್ಕೆ ಹಾರಲಿ ಎಂದು ಹೋರಾಟ ಮಾಡಿ ಪ್ರಾಣಗಳನ್ನು ಬಲಿ ಕೊಟ್ಟ ಹುತಾತ್ಮರ ದಿನಾಚರಣೆಯ ಹಬ್ಬ ಇವೆರಡು ಹಬ್ಬಗಳಿಗೆ ಪೊಲೀಸ್ ಇಲಾಖೆಯವರು ತಪ್ಪದೇ ಭಾಗವಹಿಸಬೇಕು. ಮಾನಸಿಕ ಮತ್ತು ದೈಹಿಕ ತೊಂದರೆಗಳನ್ನು ಬದಿಗಿಟ್ಟು ಸಾರ್ವಜನಿಕರ ಸೇವೆಯಲ್ಲಿ ನಿರತಾರಗುವ ಕಾರ್ಯ ಪೊಲೀಸ್ ಇಲಾಖೆಯ ಅಧಿಕಾರಿಗಳು ಮಾಡುತ್ತಿದ್ದಾರೆ. ಮನಸ್ಸಿಗೆ ನೆಮ್ಮದಿ ನೀಡುವ ಕೆಲಸವಾಗಿದೆಂದರು.
ಎಸ್ಪಿ ಸೈದುಲು ಅಡಾವತ್ ಮಾತಾನಾಡಿ, ಪೊಲೀಸ್ ಇಲಾಖೆ ಇತರೆ ಇಲಾಖೆಗಳಗಿಂತ ವಿಭಿನ್ನವಾದದ್ದು, ವಿರಾಮವಿಲ್ಲದೆ ದುಡಿಯುವ ಇಲಾಖೆಯಾಗಿದೆ. ಅತ್ಯಂತ ಕ್ಲಿಷ್ಟಕರ ಸಮಯದಲ್ಲಿ ಜನರ ರಕ್ಷಣೆಗೆ ನಿಲ್ಲುವ ಒಂದು ಉತ್ತಮ ಕೆಲಸ ಪೊಲೀಸ್ ಇಲಾಖೆಯ ಅಧಿಕಾರಿಗಳಿಂದ ಆಗುತ್ತಿದೆ. ದೇಶದ ರಕ್ಷಣೆಗಾಗಿ ಗಡಿ ಕಾಯುವ ಸೈನಿಕರಂತೆ ಸಮಾಜದಲ್ಲಿ ನಡೆಯುವ ಅನೈತಿಕ ಚಟುವಟಿಕೆಗಳನ್ನು ತಡೆಯುವ ಉದ್ದೇಶದಿಂದ ಮಹತ್ವದ ಕಾರ್ಯವನ್ನು ಪೊಲೀಸ್ ಇಲಾಖೆ ಮಾಡುತ್ತಿದೆಂದರು.
ಪೊಲೀಸ್ ಧ್ವಜ ದಿನಾಚರಣೆಯ ಅಂಗವಾಗಿ ಪೊಲೀಸ್ ಧ್ವಜ ಮಾರುವುದರಿಂದ ಬರುವ ಶೇ.50ರಷ್ಟು ಹಣವನ್ನು ಜಿಲ್ಲಾ ನಿವೃತ್ತ ಪೊಲೀಸ್ ಅಧಿಕಾರಿಗಳ ನಿಧಿಗೆ ನೀಡುವ ಮೂಲಕ ಪೊಲೀಸ್ ಅಧಿಕಾರಿಗಳು ನಿವೃತ್ತ ಜೀವನ ಸಾಗಿಸಲು ನೆರವು ನೀಡಲಾಗುವುದು.3.75 ಲಕ್ಷ ಹಣವನ್ನು ಪೊಲೀಸ್ ಇಲಾಖೆಯ ನಿವೃತ್ತ ಪೊಲೀಸ್ ಅಧಿಕಾರಿಗಳು ಮತ್ತು ಕರ್ತವ್ಯ ನಿರ್ವಹಿಸುತ್ತಿರುವವರ ಮಕ್ಕಳ ವಿದ್ಯಾಭ್ಯಾಸ ನಿಧಿಗೆ ನೀಡಲಾಗಿದೆಂದು‌ಹೇಳಿದರು.
@12bc = ಸನ್ಮಾನ:
1-4-2020 ರಿಂದ 31-3-2021 ರವರಗೆ ನಿವೃತ್ತಿಯಾದ 9 ಜನ ಪಿಎಸ್ ಐ,18 ಜನ ಎಎಸ್ ಐ, ಒಬ್ಬರು ಮಹಿಳಾ ಎಎಸ್ ಐ, 4 ಜನ ಹೆಡ್ ಕಾನ್ ಸ್ಟೇಬಲ್, 6 ಜನ ಎಆರ್ ಎಸ್ ಐ, 2 ಜನ ಎಹೆಚ್ ಸಿ ಅಧಿಕಾರಿಗಳು ಸೇರಿದಂತೆ ಒಟ್ಟು 40 ಜನ ಪೊಲೀಸ್ ಅಧಿಕಾರಿಗಳನ್ನು ಈ ಸಮಯದಲ್ಲಿ ಸನ್ಮಾನಿಸಲಾಯಿತು‌.
ನೀವೃತ್ತ ಪೊಲೀಸ್ ಸಬ್ ಇನ್ ಸ್ಪೆಕ್ಟರ್ ಹೆಚ್.ನಾಗರಾಜ್ ಅವರು ಮಾತಾನಾಡಿದರು.
ಜಿಲ್ಲಾ‌ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಬಿ.ಎನ್.ಲಾವಣ್ಯ ವಂದಿಸಿದರು‌. ಜಿಲ್ಲಾ ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿ ಮತ್ತು ಇತರರು ಇದ್ದರು.

S S Benakanalli

Founder , Director Of KK NEWS KANNADA _ S S BENAKANAHALLI

Leave a Reply

Your email address will not be published. Required fields are marked *