ಬೇವು ಬೆಲ್ಲ ತಿಂದು ಶುಭಾಶಯಗಳು ಹೇಳುವ ಹಬ್ಬವೇ ಈ ಯುಗಾದಿ ಹಬ್ಬ | Article Written By Kashibai Guttedar
ಬೇವು ಬೆಲ್ಲ ತಿಂದು ಶುಭಾಶಯಗಳು ಹೇಳುವ ಹಬ್ಬವೇ ಈ ಯುಗಾದಿ ಹಬ್ಬ.
ಯುಗಾದಿ ಎಂದು ಕೂಡಲೇ ಎಲ್ಲರಿಗೂ ನೆನಪಾಗೋದೇ ಬೇವು ಬೆಲ್ಲ.
ಎಲ್ಲ ಹಬ್ಬಗಳಲ್ಲಿ ಯುಗಾದಿ ಶ್ರೇಷ್ಠ ಹಬ್ಬವನ್ನು ಭಾರತದ ಪರ್ವದಲ್ಲಿ ಬೇರೆ ಬೇರೆ ಹೆಸರಿನಿಂದ ಸಾಮಾನ್ಯವಾಗಿ ಎಲ್ಲರೂ ಆಚರಿಸುವರು.
ಹಬ್ಬಗಳಲ್ಲಿ ಶ್ರೇಷ್ಠವಾದ ಪ್ರಸಿದ್ಧವಾದ ಯುಗಾದಿ ಹಬ್ಬ ಚೈತ್ರಮಾಸದ ಶುಕ್ಲಪಕ್ಷದ ಪಾಡ್ಯದಂದು ಬರುತ್ತದೆ ಯುಗಾದಿ ಹಬ್ಬವು ಹಿಂದೂಗಳ ದೃಷ್ಟಿಯಲ್ಲಿ ವರ್ಷಾರಂಭದ ಪವಿತ್ರ ದಿನ.
ಹೊಸ ವರ್ಷ ಹರುಷ ತರಲಿ
ನವ ಬಾಳು ಬೆಳಗಲಿ
ನವ ಚೈತನ್ಯ ಚಿಮ್ಮಲಿ
ಕಹಿ ನೋವುಗಳು ತೊಲಗಲಿ
ಸಿಹಿ ನಲಿವುಗಳು ಬರಲಿ
ಶಾಂತಿ, ಸಮೃದ್ಧಿ, ನೆಮ್ಮದಿ ಬಾಳು ನಮ್ಮದಾಗಲಿ.
ಯುಗಾದಿಯೆಂದರೆ ಯುಗದ ಆದಿ ಯುಗಾದಿ ಹಬ್ಬ ಶಬ್ದ ಸಂಸ್ಕೃತದ ಯುಗ ಮತ್ತು ಆದಿ ಎಂಬ ಎರಡು ಶಬ್ದಗಳಿಂದ ಕೂಡಿದೆ ಯುಗಯೆಂದರೆ ಸೃಷ್ಟಿಯ ಕಾಲ.
ಯುಗಾದಿ ಹಬ್ಬವು ಪೌರಾಣಿಕ ಹಾಗೂ ಐತಿಹಾಸಿಕ ವಿಶೇಷತೆಗಳ ದಿನವಾಗಿದೆ ಇದು ಬ್ರಹ್ಮದೇವನ ಸೃಷ್ಟಿಯ ದಿನ.
ವೇದಗಳ ಕಾಲದಿಂದಲೂ ಯುಗಾದಿಯ ಮಹಿಮೆ ಇದೆ.
ಈ ಹಬ್ಬವು ಎರಡು ರೀತಿಯಲ್ಲಿ ಆಚರಿಸಲಾಗುವುದು ಚಂದ್ರಮಾನ ಯುಗಾದಿ ಅಂದರೆ ಚಂದ್ರನ ಚಲನೆಯನ್ನು ಗುರುತಿಸಿ ಮಾಡುವ ಪ್ರಗತಿಯ ಚಂದ್ರಮಾನ ಯುಗಾದಿ.
ಎರಡನೆಯದಾಗಿ ಸೌರಮಾನ ಯುಗಾದಿ ಸೂರ್ಯವಶ ರಾಶಿಗೆ ಬಂದಾಗ ಸೌರಮಾನ ಯುಗಾದಿ ಆಚರಿಸುವರು.
ಹೊಸವರ್ಷದ ಪ್ರಾರಂಭದ ಸಂಕೇತವಾದ ಯುಗಾದಿಯನ್ನು ಬಡವ-ಬಲ್ಲಿದರೆಂಬ ತಾರತಮ್ಯವಿಲ್ಲದೆ ಎಲ್ಲರೂ ಗಳು ಆಚರಿಸುತ್ತಾರೆ.
ರೈತರು ಎತ್ತುಗಳನ್ನು ಶೃಂಗರಿಸಿ ಸಂಭ್ರಮದಿಂದ ಹಬ್ಬವನ್ನುಆಚರಿಸುತ್ತಾರೆ ವ್ಯಾಪಾರಿಗಳು ಹಾಗೂ ಇನ್ನಿತರರು ಕೂಡ ಅಂದಿನ ದಿನ ಕಾರ್ಯವನ್ನು ಮಾಡುತ್ತಾರೆ.
ಯುಗಾದಿ ಬಂತೆಂದರೆ ಎಲ್ಲರಿಗೂ ಸಂತೋಷ ಸಂಭ್ರಮ ತುಂಬಿ ತುಳುಕುತ್ತಿರುತ್ತದೆ.
ವನಗಲೆಲ್ಲವೂ ಚಿಗುರಿ ಹೂವುಬಿಟ್ಟು ಯುಗಾದಿ ಹಬ್ಬವನ್ನು ಬಹು ಎಲ್ಲಿ ನೋಡಿದರೂ ಮರ-ಗಿಡಗಳು ಹಸಿರಾಗಿ ಕಾಣುವವು.
ಆ ದಿನದಿಂದು ಮುಂಜಾನೆ ಬಿಡು ಮಿಶ್ರಿತ ನೀರಿನಿಂದ ಸ್ನಾನ ಮಾಡಿ ಹೊಸ ಬಟ್ಟೆ ಧರಿಸಿ ತಮ್ಮ ತಮ್ಮ ದೇವರನ್ನು ಪೂಜಿಸಿ ಬೇವು-ಬೆಲ್ಲವನ್ನು ಸೇವನೆ ಮಾಡುತ್ತಾರೆ. ಬೇವು ಬೆಲ್ಲವು ಸುಖ-ದುಃಖ ರಾತ್ರಿ-ಹಗಲು ಇವುಗಳ ಸಂಕೇತ.
ಮಾನವರ ಬದುಕಿನಲ್ಲಿ ಸುಖ-ದುಃಖಗಳು ಅವಿಭಾಜ್ಯ ಅಂಗ . ಇವೆಲ್ಲವುಗಳ ನಡುವೆ ಸಮತೋಲನ ಕಾಪಾಡಿಕೊಂಡು ಮನುಷ್ಯ ಬದುಕಬೇಕು ಜೀವನ ಕಷ್ಟ-ಸುಖ, ನೋವು-ನಲಿವುಗಳ ಸಮ್ಮಿಶ್ರಣ. ಎರಡನ್ನು ಸಮದೃಷ್ಟಿಯಿಂದ ಸವಿಯುವುದನ್ನು ಕಲಿತಿರಬೇಕು ಯುಗಾದಿಯಂದು ಬೇವು-ಬೆಲ್ಲವನ್ನು ತಿನ್ನಿಸುವರು.
ನೋವು – ನಲಿವು ಎರಡಕ್ಕೂ ನಾವು ಸ್ವಾ ಗತ್ತಿಸಬೇಕು ಬೇವಿನ ಸಮಾನ- ದುಃಖ,ಅಶಾಂತಿ ಬೆಲ್ಲದ ಸಮಾನ – ಆತ್ಮೀಯತೆಯ, ಸ್ನೇಹ,ಸುಖ
ಮಧುರತೆಯ ಅನುಭವ ಮಾಡುವುದು ಎಂಬ ನಿಜ ಅರ್ಥವಾಗಿದೆ.
ಬೇವಿನ ಎಲೆಯ ಮಾನವನ ಆರೋಗ್ಯಕ್ಕೆ ತುಂಬಾ ಸಹಕಾರಿ ಆಗುವುದು.
ಯುಗಾದಿಯಂದು ಇಷ್ಟದೇವತೆಯ ಪೂಜೆ ಮಾಡುವರು ಆ ದಿನ ಎಲ್ಲಾ ದೇವಾಲಯಗಳಲ್ಲಿ ವಿಶೇಷ ಪೂಜೆ ನಡೆಯುತ್ತದೆ ಕೆಲವು ಊರುಗಳಲ್ಲಿ ಪಂಚಾಗ ಶ್ರವಣವನ್ನು ಏರ್ಪಡಿಸುವರು.
ಎಲ್ಲ ರಾಶಿಗಳ ಫಲಾಫಲಗಳನ್ನು ವಿವರಿಸುವರು ಪ್ರತಿವರ್ಷದಲ್ಲು ಬರುವ ಕಷ್ಟ-ಸುಖ ಮಳೆ-ಬೆಳೆ ವಿಚಾರವನ್ನು ಜನರು ವರ್ಷದ ಪ್ರಾರಂಭದಿಂದಲೂ ತಿಳಿದುಕೊಳ್ಳಬಹುದು.
ಈ ರೀತಿಯಾಗಿ ಯುಗಾದಿಯು ನಾಡಿನ ಜನತೆಯ ಅತ್ಯಂತ ಸವಿಸ್ತಾರವಾಗಿ ತಿಳಿದುಕೊಂಡು, ಅದನ್ನು ಸರಳವಾಗಿ ಆಚರಿಸುತ್ತಾರೆ.
ಹೊಸತು ಎಂದರೆ ಸಂಭ್ರಮ ಹೊಸತು ಎಂದರೆ ಉಲ್ಲಾಸ ವಸ್ತು ಎಂದರೆ ಉತ್ಸಾಹ ಹೊಸತು ಎಂದರೆ ಉತ್ಸಾಹ ಯುಗಾದಿ ಎಲ್ಲಾ ಹೊಸತನಕ್ಕೆ ಮುನ್ನುಡಿಯಾಗಲಿ ಬದುಕು ನವೀಕರಣಗಳಲಿ ನಲಿವು ನಿರಂತರವಾಗಿರಲಿ ಹಬ್ಬ ಎಲ್ಲರಿಗಾಗಿ ಇರಲಿ ಎಂದು ಹೇಳುತ್ತಾ ಎಲ್ಲರಿಗೂ ಯುಗಾದಿ ಹಬ್ಬದ ಶುಭಾಶಯಗಳು.
ಕಾಶಿಬಾಯಿ. ಸಿ. ಗುತ್ತೇದಾರ ಪಾಳಾ