ರಂಗಭೂಮಿ ಮತ್ತು ಪತ್ರಿಕೋದ್ಯಮಕ್ಕೂ ಇರುವ ಅವಿನಾಭಾವ ಸಂಬಂಧ  | Article By Kashibai Guttedar

 

ಕನ್ನಡ ರಂಗಭೂಮಿಯ ಇತಿಹಾಸ ಹಿಂದಿನ ಕಾಲದಿಂದಲೂ ಆರಂಭವಾಗಿ ಇಂದಿನವರೆಗೂ ತಲುಪಿರುವ ಹಾದಿಯನ್ನು ಗಮನಿಸಿದಾಗ ಅದು ಸರಿಸುಮಾರು ಅದು ಅದು ಸರಿಸುಮಾರು ಎರಡು ಶತಮಾನಗಳದ್ದು ಎಂದೆನಿಸುತ್ತದೆ ಅದಕ್ಕೂ ಮುಂಚೆ ನಮ್ಮಲ್ಲಿ ರಂಗಭೂಮಿ ಇರಲಿಲ್ಲ ಎಂದಲ್ಲ.

ಇಂದಿನ ಆಧುನಿಕ ಕನ್ನಡ ರಂಗಭೂಮಿ ಎಂದು ನಾವು ಗುರುತಿಸುವ ರಂಗಭೂಮಿಗೆ ಎರಡು ಕವಲುಗಳಿವೆ.
ವೃತ್ತಿರಂಗಭೂಮಿ
ಹವ್ಯಾಸ ರಂಗಭೂಮಿ

ಈ ಕವಲು ಮೂಡುವ ಮುನ್ನ ದಿನಗಳಲ್ಲಿ ವೃತ್ತಪತ್ರಿಕೆಗಳು ಹಲವಾರು ಇದ್ದರು ರಂಗಭೂಮಿಯನ್ನು ಕುರಿತು ಹೆಚ್ಚಿನ ವಿವರಗಳು ಬರುತ್ತಿರಲಿಲ್ಲ. ಕನ್ನಡ ನುಡಿಯಾಡುವ ಪ್ರಾದೇಶಿಕ ಪಾರ್ಸಿ ರಂಗಭೂಮಿ ಎಂಬ ನೇರವಾಗಿ ಮಾರುಕಟ್ಟೆಯನ್ನು ಗುರಿಯಾಗಿಸಿಕೊಂಡಿದ್ದ ಮನರಂಜನಾ ನಾಟಕ ಪ್ರವೇಶಿಸಿದ ಕೂಡಲೇ ನಮ್ಮಲ್ಲಿದ್ದ ರಂಗಭೂಮಿಯು ಒಂದಾಗಿದೆ.

ಇದರಿಂದಾಗಿ ಜಾಹೀರಾತು ನೀಡುವ ಕಲಾ ಮಾಧ್ಯಮದವರನ್ನು ಮೆಚ್ಚಿಸುವಂತೆ ಕಲಾವಿದರ ಪರಿಚಯಗಳು ಮತ್ತು ನಾಟಕದ ಪರಿಚಯಗಳು ಮುದ್ರಣ ಮಾಧ್ಯಮದಲ್ಲಿ ಕಾಣಿಸತೊಡಗಿತು.

ಮುದ್ರಣ ಮಾಧ್ಯಮಕ್ಕೆ ಅಣ್ಣವರಿಗೆ ಸಿದ್ ಅವರ ಪರಿಚಯ ಮಾತ್ರವಲ್ಲದೆ ರಂಗ ಪ್ರಯತ್ನದ ವಿಮರ್ಶೆಯು ಆಗಬೇಕೆಂಬ ಆಲೋಚನೆ ಇದರ ದಾಗಿದೆ.

ಸಾಮಾನ್ಯವಾಗಿ ವಿಮರ್ಶೆಯೆಂದರೆ ಪ್ರಜ್ಞೆಗಿಂತ ನಾಟಕಕ್ಕೆ ಓದುಗ ವರ್ಗವನ್ನು ಪ್ರೇಕ್ಷಕರಾಗಿ ಸೆಳೆಯುವ ಜಾಹೀರಾತು ವಿಸ್ತರಣೆಯಂತೆ ವಿಮರ್ಶೆಯ ಕೆಲಸವಾಗಿದೆ.

ಪತ್ರಿಕೋದ್ಯಮ ರಂಗಭೂಮಿಯನ್ನು ನೋಡುವ ಕ್ರಮದಲ್ಲಿ ವಿಶಿಷ್ಟ ಬದಲಾವಣೆಗಳಾದವು.

ವೃತ್ತಪತ್ರಿಕೆಗಳು ಹವ್ಯಾಸಿ ( ಈ ರಂಗಭೂಮಿಯನ್ನು ವಿಲಾಸಿ ಎಂದು ಗುರುತಿಸುತ್ತಾರೆ)
ರಂಗಭೂಮಿಯನ್ನು ಪ್ರೋತ್ಸಾಹದಾಯಕವಾಗಿ ನೋಡುತ್ತ ವೃತ್ತಿ ರಂಗಭೂಮಿಯನ್ನು ಅತ್ಯಂತ ಚಿಕ್ಕದಾಗಿ ನೋಡಲಾರಂಭಿಸಿದರು ಇದೊಂದು ಸುಂದರ ಬೆಳವಣಿಗೆ ಆಗಿತ್ತು.

ಪ್ರಥಮ ಎಂಬುವುದು ವೃತ್ತಿರಂಗಭೂಮಿಯ ಪ್ರೇಕ್ಷಕರನ್ನು ತನ್ನತ್ತ ಸೆಳೆದುಕೊಂಡಿತು.
ಅದಲ್ಲದೆ ಚಿತ್ರೋದ್ಯಮವು ಜಾಹೀರಾತಿಗಾಗಿ ಹೆಚ್ಚು ಹಣ ಒದಗಿಸುವ ಶಕ್ತಿ ಹೊಂದಿದೆ.

ಅರವತ್ತರ ದಶಕದ ಆದಿಭಾಗದಲ್ಲಿ ಕನ್ನಡ ರಂಗಭೂಮಿಗೆ ಹೊಸ ಚಿಂತಕರು ಮತ್ತು ಹೊಸ ತಜ್ಞರು ಬರತೊಡಗಿದರು.

ಬಹುತೇಕ ಅಧಿಕಾರದಲ್ಲಿ ಪತ್ರಿಕೋದ್ಯಮಕ್ಕೂ ಅನೇಕ ಹೊಸಬರ ಆಗಮನವಾಯಿತು ಎರಡು ವಸಾಹತುಗಳಿಂದಾಗಿ ರಂಗಭೂಮಿ ಮತ್ತು ಪತ್ರಿಕೋದ್ಯಮದ ನಡುವೆ ವಿಶೇಷವಾಗಿ ಹವ್ಯಾಸಿ ರಂಗಭೂಮಿಯ ಜೊತೆಗೆ ಒಂದು ಹೊಸ ಸಂಬಂಧ ಆರಂಭವಾಯಿತು.
ಉದಾಹರಣೆ- ಪ್ರಜಾವಾಣಿ ,ಸಂಯುಕ್ತ ಕರ್ನಾಟಕ, ಕನ್ನಡಪ್ರಭ.

ಹೊಸ ತಲೆಮಾರಿನ ಪತ್ರಕರ್ತರಿಂದ ಹವ್ಯಾಸಿ ರಂಗಭೂಮಿಯನ್ನು ಕುರಿತು ಪ್ರತ್ಯೇಕ ಲೇಖನಗಳನ್ನು ಹಾಗೂ ವಿಶಿಷ್ಟ ವಿವರಿಸಿ ಗಳನ್ನು ಈ ಪತ್ರಿಕೆಗಳು ಬರೆಯಲು ಆರಂಭಿಸಿದವು.
ಉದಾಹರಣೆ- ಎಂ. ಬಿ.ಸಿಂಗ್ ಹಾಗೂ ರಂಗನಾಥರಾವ್.

ಈ ಹವ್ಯಾಸಿ ಬರವಣಿಗೆಯ ಜೊತೆಗೆ ಕನ್ನಡ ಹವ್ಯಾಸಿ ರಂಗಭೂಮಿಯಲ್ಲಿ ಅನೇಕ ಹೊಸತನಗಳು ಕಾಣಿಸಿಕೊಳ್ಳತೊಡಗಿದವು.

ಎಲ್ಲ ಸಂಕಷ್ಟಗಳನ್ನು ರಂಗಭೂಮಿ ಎದುರಿಸುತ್ತ ಇರುವಾಗಲೇ ಪತ್ರಿಕೋದ್ಯಮಕ್ಕೂ ಜಾಗತೀಕರಣದ ಭಾರಿ ಹೊಡೆತಗಳು ಬೀಳತೊಡಗಿದವು. ಅತಿ ವಿಸ್ತೃತ ಲೇಖನವನ್ನು ಆಹ್ವಾನಿತ ಲೇಖಕರು ಮಾತ್ರ ಬರೆಯುವಂತಹ ವಾತಾವರಣ ಉಂಟಾಗತೊಡಗಿತು.

ಕಲೆಯನ್ನು ಕುರಿತು ಆಸಕ್ತಿ ಇದ್ದರೂ ಪತ್ರಕರ್ತರು ಏನನ್ನೂ ಮಾಡಲಾಗದ ಸ್ಥಿತಿ ತಲುಪಿದ್ದರು, ಹೀಗಾಗಿ ಯಾವುದೇ ರಂಗಭೂಮಿಯನ್ನು ಕುರಿತು ವಿವರವು ಸಣ್ಣ ಸುದ್ದಿಯಾಗಿ ಮಾತ್ರ ವೃತ್ತಪತ್ರಿಕೆಗಳಲ್ಲಿ ಕಾಣುತ್ತಿವೆ.

ಸರ್ಕಾರವೇ ಆರಂಭಿಸಿದ ರಂಗಾಯಣದಂತಹ ವೃತ್ತಿಪರ ನಾಟಕ ರೆಸಾರ್ಟ್ಗಳು ತಮ್ಮ ಉಳಿವಿಗೆ ಬೇಕಾದಷ್ಟು ಹಣ ಇರಬೇಕು.

ಎಲ್ಲಾ ಹೊಸ ಸ್ಪರ್ಧೆಗಳ ನಡುವೆ ಈ ಎರಡು ಮಾಧ್ಯಮಗಳು ಕನ್ನಡಿಗರ ಬದುಕನ್ನು ವರ್ಣರಂಜಿತ ಗೊಳಿಸುವ ಪ್ರಯತ್ನವಂತೂ ಸದಾ ಇರಬೇಕು.

ರಂಗಭೂಮಿ ಮತ್ತು ಪತ್ರಿಕೆ-2 ವಿಶ್ವವಿದ್ಯಾಲಯ ಆಗುವಷ್ಟು ವ್ಯಾಪ್ತಿ ಹೊಂದಿದೆ.
ಇವುಗಳು ಪ್ರತ್ಯೇಕ ಮಾಧ್ಯಮಗಳಾದರೂ ಗುರಿ ಮಾತ್ರ ಒಂದೇ ಆಗಿದೆ.
ಹಾಗೂ ಪರಿಣಾಮಕಾರಿಯಾದ ಮಾಧ್ಯಮವಾಗಿವೆ.
ಆದಿಮಾನವ ರಿಂದಲೇ ರಂಗಭೂಮಿ ಎಂಬುವುದು ಹುಟ್ಟಿಕೊಂಡರೆ, ಹರ್ಮನ್ ಮೊಗ್ಲಿಂಗ್ ಕಾಲದಿಂದಲೇ ಮುದ್ರಣ ಮಾಧ್ಯಮ ಆರಂಭವಾಗಿತ್ತು.
ಜಾಹೀರಾತಿನ ಮೂಲಕ ಪತ್ರಿಕೆಗಳಿಗೆ ರಂಗಭೂಮಿಯ ನಂಟು ಆರಂಭವಾಯಿತು. ಪ್ರಾದೇಶಿಕ ರಂಗಭೂಮಿಯನ್ನು ಕುರಿತು ನಾಟಕಗಳ ಮಾಡಲಾಗಿತ್ತು.
ನಾಟಕಗಳ ವಿಮರ್ಶೆಗೆ ಪತ್ರಿಕೆಗಳಲ್ಲಿ ಸ್ಥಳದ ಕೊರತೆಯಿತ್ತು.
ಪತ್ರಿಕೆಗಳ ಒಂದು ವರದಿಯೇ ನಾಟಕಗಳಿಗೆ ಆಹಾರವಾದ ತೊಡಗಿವೆ ಹಿಂದಿನ ಕಾಲದಲ್ಲಿ. ಭಾವನೆಗಳನ್ನು ವ್ಯಕ್ತಪಡಿಸುವ ಶಕ್ತಿ ಎರಡು ಮಾಧ್ಯಮಗಳು ಹೊಂದಿವೆ. ಆಧುನಿಕ ರಂಗಭೂಮಿ ಎಂಬುವುದು ಹವ್ಯಾಸ ಮತ್ತು ವೃತ್ತಿಗೂ ಸಂಬಂಧ ಹೊಂದಿವೆ.

ಹಿಂದಿನ ಕಾಲಕ್ಕೂ ಪ್ರಸ್ತುತ ದಿನಗಳಿಗೂ ಹೋಲಿಸಿ ನೋಡಿದಾಗ ಅಜಾಗಜಂತರ ಸಂಬಂಧವಿದೆ
ರಂಗ ಭೂಮಿ ಹಿಂದಿನ ದಿನಗಳಿಂದಲೂ ರೂಡಿಯಲಿರುವಂತದು ಈ ರಂಗಭೂಮಿ ಇಂದಲೇ ಚಿತ್ರಗಳು ತೆರೆಕಂಡಿವೆ. ಆಗೀನಿ ದಿನದಲ್ಲಿ ರಂಗಭೂಮಿಯಲ್ಲೇ ಅಭಿನಯಿಸಿರುವ ಡಾ – ರಾಜಕುಮಾರ ಅವರೇ ಅಚ್ಚ ಉದಾಹರಣೆ ಎಂದು ಹೇಳಬಹುದು.

ಪ್ರಸ್ತುತ ದಿನಗಳಲ್ಲಿ ಈ ರಂಗಭೂಮಿ ಎಂಬುದೇ ಮರೆಮಾಚಿದೆ. ಆದ್ರೂ ಕೂಡ ಹಲವಾರು ಏಳುಬಿಳಿನ ನಡುವೆಯೂ ಮುಂದುವರೆಯುತ್ತಿದೆ.
ಇಂದಿನ ಪತ್ರಿಕೆಗಳ ವರದಿಯೇ ರಂಗಭೂಮಿಗೆ ಆಹಾರವಾಗಿದೆ.

ಹೇಗೆಂದರೆ ಪತ್ರಿಕೆಗಳಲ್ಲಿ ಬರುವಂತಹ ಜಾಹಿರಾತುಗಳೇ ಇದಕ್ಕೆ ಮುಖ್ಯ ಕಾರಣವಾಗಿದೆ ಎಂದು ಹೇಳಿದರೆ ತಪ್ಪಾಗಲಾರದು.
ಅದ್ರಲ್ಲಿ ಬರುವಂತಹ ಜಾಹಿರಾತುಗಳಿಂದ ಜನರಿಗೆ ಮಾಹಿತಿ ಸಿಕ್ಕು ಅದನ್ನು ವೀಕ್ಷಿಸಿ ಮನೋರಂಜನೆ ಪಡುತ್ತಾರೆ ಅದರ ಜೊತೆಗೆ ಆ ರಂಗಭೂಮಿಯನ್ನು ಉಳಿಸುತ್ತಾರೆ.

ಈ ರಂಗ ಭೂಮಿ ಎನ್ನುವುದು ಗುಬ್ಬಿ ವೀರಣ್ಣ ಅವರಿಂದಲೇ ಆರಂಭವದಂತಹದು.
ರಂಗಭೂಮಿ ಎಂದರೆ ನೆನಪಾಗೋದು ಬಯಲಾಟ, ದೊಡ್ಡಟಾ.

ಇದರಲ್ಲಿ ಬರುವಂತಹ ವ್ಯಕ್ತಿಗಳು ತಮ್ಮ ತಮ್ಮ ಪ್ರತಿಭೆಗಳನ್ನು ಹೊರ ಹಾಕುವ ವೇದಿಕೆ ಈ ರಂಗಭೂಮಿಯಾಗಿದೆ.

ಪತ್ರಿಕೋದ್ಯಮ ಎಂಬುದು ಹರ್ಮನ್ ಮೋಗ್ಲಿಂಗ ಇಂದಲೇ ಆರಂಭವಾಯಿತು.
ರಂಗಭೂಮಿಗು ಈ ಪತ್ರಿಕೋದ್ಯಮಕ್ಕೂ ಅವಿನಾಭವಾದ ನಂಟಿದೆ. ಅನೇಕ ಪತ್ರಿಕೆಗಳು ಈ ರಂಗಭೂಮಿಯನ್ನು ಒಳಗೊಂಡು ಕಾರ್ಯ ನಿರ್ವಹಿಸುತ್ತಿವೆ ಎನ್ನಬಹುದು.

ಒಟ್ಟಾರೆಯಾಗಿ ಆಧುನಿಕ ರಂಗಭೂಮಿಯ ಹುಟ್ಟಿದ ಅವಧಿಯಲ್ಲಿಯೇ ಬಂದ ಪತ್ರಿಕೋದ್ಯಮವೂ ತನ್ನ ಸಹೋದರನಂತೆ ಭೂಮಿಯನ್ನು ಪೋಷಿಸುವ ಪ್ರಯತ್ನ ಮಾಡಿದ್ದು, ಹೌದಾದರೂ ಇಂದು ಪತ್ರಿಕೋದ್ಯಮವೇ ಸ್ವಂತ ದೊಡ್ಡ ಸ್ಪರ್ಧೆಯನ್ನು ಎದುರಿಸುತ್ತಾ ಇರುವುದಕ್ಕಿಂತ ದೊಡ್ಡ ಸಂಕಷ್ಟಗಳಿಗೆ ಸ್ವಂತ ಪತ್ರಿಕೋದ್ಯಮ ಸಿದ್ಧವಾಗಬೇಕಾದ ಅಗತ್ಯವಿದೆ.

 

 

ಕಾಶಿಬಾಯಿ. ಸಿ. ಗುತ್ತೇದಾರ
ಪತ್ರಿಕೋದ್ಯಮ ವಿದ್ಯಾರ್ಥಿನಿ
ಶರಣಬಸವ ವಿಶ್ವ ವಿದ್ಯಾಲಯ ಕಲಬುರಗಿ

S S Benakanalli

Founder , Director Of KK NEWS KANNADA _ S S BENAKANAHALLI

Leave a Reply

Your email address will not be published. Required fields are marked *