ಕಾರ್ಮಿಕರೇ ದೇಶದ ಪ್ರಬಲ ಶಕ್ತಿ / Article By Kashibai Guttedar
ಈ ಇಡೀ ದೇಶದ ಆರ್ಥಿಕತೆಯ ಅಭಿವೃದ್ದಿ ಎಂಬುದು ದೇಶದ ಕಾರ್ಮಿಕರ ಮೇಲೆ ಅವಲಂಬಿತವಾಗಿರುತ್ತದೆ.
ದಕ್ಷತೆಯಿಂದ ಕೂಡಿದ ಕಾರ್ಮಿಕರ ವರ್ಗದಿಂದ ಮಾತ್ರ ಈ ದೇಶ ಆರ್ಥಿಕ ಪ್ರಗತಿ ಸಾಧಿಸಲು ಸಾಧ್ಯ.
ಅದಕ್ಕೆ ಕಾರ್ಮಿಕರೇ ದೇಶದ ಪ್ರಬಲ ಶಕ್ತಿಯಾಗಿದ್ದಾರೆ.
ತಮ್ಮ ದೈಹಿಕ ಬೌದ್ಧಿಕ ಶಕ್ತಿಯನ್ನು ಪ್ರದರ್ಶಿಸಿ ಕಾರ್ಮಿಕರ ಆದಾಯವನ್ನು ಗಳಿಸಿ ತಮ್ಮ ಬದುಕಿನ ಬಂಡಿಯನ್ನು ಸಾಧಿಸುವವರು ಈ ಕಾರ್ಮಿಕರು
ಕಾರ್ಮಿಕ ವರ್ಗದಲ್ಲಿ ಎರಡು ವರ್ಗಗಳನ್ನು ನಾವುಗಳು ಕಾಣಬಹುದು.
ಅವುಗಳೆಂದರೆ ಶ್ರೀಮಂತವರ್ಗ
ಬಡವರ ವರ್ಗ
ಈ ಕಾರ್ಮಿಕರ ದಿನಾಚರಣೆ ಮಾಡುವ ಉದ್ದೇಶ
ಬಂಡವಾಳಶಾಹಿ ವರ್ಗದವರು ಅನಿರ್ದಿಷ್ಟ ಅವಧಿಯ ತನಕ ದುಡಿಸಿಕೊಳ್ಳುತ್ತಿದ್ದರು ಇದನ್ನು ವಿರೋಧಿಸಿದ ಕಾರ್ಮಿಕರ ದಿನದ ಎಂಟು ತಾಸು ಮಾತ್ರ ದುಡಿಯುತ್ತೇವೆ ಎಂಬ ಬೇಡಿಕೆ ಇಟ್ಟರು.
ದಿನದ 24 ಗಂಟೆಗಳಲ್ಲಿ ಎಂಟು ತಾಸುಗಳ ವಿಶ್ರಾಂತಿಗಾಗಿ ಎಂದು ತಿಳಿಸಿದರು ಈ ಬೇಡಿಕೆ ಮುಂದಿಟ್ಟುಕೊಂಡು 18 86 ರಂದು ಅಮೆರಿಕದ ಚಿಕಾಗೋ ನಗರದಲ್ಲಿ ಹೋರಾಟ ಮಾಡಿದರು.
ಈ ಸಂದರ್ಭದಲ್ಲಿಯೇ ಖಾಸಗಿ ಸಂಸ್ಥೆಗಳಲ್ಲಿ ಹೆರಿಗೆ ರಜೆ ಎಂದು ಮೇನಕ ಗಾಂಧಿ ತಿಳಿಸಿದರು.
ಈ ಹೋರಾಟದಲ್ಲಿ ಅನೇಕರು ಪ್ರಾಣಕಳೆದುಕೊಂಡರು ಇದರ ಫಲವಾಗಿ ಎಂಟು ಗಂಟೆಯ ಕೆಲಸದ ಅವಧಿ ಜಾರಿಗೆ ತಂದರು.ಇದರ ಸವಿನೆನಪಿಗಾಗಿ ಮೇ ಒಂದರಂದು ಕಾರ್ಮಿಕರ ದಿನವನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಆಚರಿಸುತ್ತಾರೆ .
ಕಾರ್ಮಿಕರು ಗ್ರಾಮೀಣ ಪ್ರದೇಶದಲ್ಲಿ ದುಡಿಯುವ ಭೂರಹಿತ ಮಹಿಳೆ ಹಾಗೂ ಪುರುಷ ಪುರುಷ ಶ್ರಮಿಕರ ನಗರಗಳ ಹೋಟೆಲ್ಗಳಲ್ಲಿ ದುಡಿಯುವ ಕಾರ್ಮಿಕರು ಸಣ್ಣ ಉದ್ಯಮಗಳಲ್ಲಿ ದುಡಿಯುವ ಕಾರ್ಮಿಕರು ಹೀಗೆ ಮುಂತಾದ ಕ್ಷೇತ್ರಗಳಲ್ಲಿ ದುಡಿಯುವ ಕೆಲಸಗಾರರು ಅಸಂಘಟಿತ ಕಾರ್ಮಿಕರು ಇದರಲ್ಲಿ ಕಾರ್ಯನಿರ್ವಹಿಸುತ್ತಾರೆ.
ಎಲ್ಲ ವರ್ಗದವರನ್ನು ಗಮನದಲ್ಲಿಟ್ಟುಕೊಂಡು ಸ್ವತಂತ್ರ ನಂತರ ಕೇಂದ್ರ ಸರ್ಕಾರ 1949 ರಲ್ಲಿ ಕನಿಷ್ಠ ಕೂಲಿ ಕಾಯ್ದೆ ಜಾರಿಗೆ ತಂದರು.
ಆದರೆ ಅದು ಹೆಸರಿಗೆ ಮಾತ್ರ ಸೀಮಿತವಾಯಿತು ಕಾರ್ಯರೂಪಕ್ಕೆ ಬರಲಿಲ್ಲ.
ಹಿಂದಿನ ದಿನಗಳಲ್ಲಿ ಕೈಗಾರಿಕೋದ್ಯಮಗಳು ಈ ದಿನಗಳಲ್ಲಿ ಕಾರ್ಮಿಕ ವರ್ಗವನ್ನು ಬಳಸಿಕೊಂಡು ಅವರು ಅವರಿಂದ ಸಾಕಷ್ಟು ಕೆಲಸವನ್ನು ತೆಗೆದುಕೊಂಡರು. ಆದರೆ ಅವರಿಗೆ ಸಂಬಳ ಮಾತ್ರ ತುಂಬಾ ಕಡಿಮೆ ನೀಡುತ್ತಿದ್ದರು.
ಕೆಲಸಗಾರರು ತಮ್ಮ ಸ್ವಂತ ಕ್ಷಣವನ್ನು ಮಾರಾಟ ಮಾಡುವ ಮೂಲಕ ಕನಿಷ್ಠ ವೇತನವನ್ನು ಪಡೆಯುತ್ತಾರೆ ಎಂದು ಹೇಳಬಹುದು.
ಅದಕ್ಕಾಗಿ ವಿಶ್ವಾದ್ಯಂತ ಅಂತರಾಷ್ಟ್ರೀಯ ಕಾರ್ಮಿಕ ದಿನಾಚರಣೆಯನ್ನು ಆಚರಿಸಲಾಗುತ್ತದೆ.
ಆದ್ದರಿಂದ ಈ ದಿನವೂ ಅಂತರಾಷ್ಟ್ರೀಯಕಾರ್ಮಿಕರನ್ನು ಉತ್ತೇಜಿಸುವುದು ಪ್ರೋತ್ಸಾಹಿಸುವುದು.
ಆದಕಾರಣ ಖಂಡಿತವಾಗಿಯೂ ಅರ್ಹರು ಎಂಬ ಕಾರಣಕ್ಕೆ ಸಮಾಜಕ್ಕೂ ಅವರು ನೀಡಿದ ಕೊಡುಗೆಯನ್ನು ತುಂಬಾ ಶ್ಲಾಘನೀಯವಾದದ್ದು ವಿಶೇಷ ದಿನವೇ ಈ ಕಾರ್ಮಿಕರ ದಿನ.
ಒಟ್ಟಾರೆಯಾಗಿ ಭಾರತದಲ್ಲಿ ಕಾರ್ಮಿಕರು ಶೋಷಣೆಯಲ್ಲಿ ಬದುಕುತ್ತಿದ್ದರು ಶ್ರೀಮಂತರು ಶ್ರೀಮಂತರಾಗಿ ಮುಂದುವರೆಯುತ್ತಿದ್ದಾರೆ.
ಬಡವರು ಬಡವರಾಗಿಯೇ ಉಳಿದಿದ್ದಾರೆ.
ಇಂತಹ ಶೋಷಣೆಯ ವಿರುದ್ಧ ಕಾರ್ಮಿಕರ ಒಕ್ಕೂಟಗಳಲ್ಲಿ ಆಯ್ಕೆಯನ್ನು ಕಾಪಾಡಿಕೊಂಡು ಹೋರಾಟ ಮಾಡಲು ಸದಾಕಾಲ ಶ್ರಮಿಸುತ್ತಿರುವ ಬೇಕು.
ಆಗ ಮಾತ್ರ ಶೋಷಣೆ ನಿಲ್ಲಲು ಸಾಧ್ಯ ಇದು ಕೇವಲ ಕಾರ್ಮಿಕರ ಐಕ್ಯತೆ ಇಲ್ಲ ಮಾತ್ರ ಸಾಧ್ಯ.
ಸಂಘಟಿತ ರೊಂದಿಗೆ ಅಸಂಘಟಿತ ಕಾರ್ಮಿಕರು ಸೇರಿಯಾ ಏಕತೆಯಿಂದ ಒಕ್ಕೂಟ ರಚಿಸಿ ಆ ಮೂಲಕ ತಮ್ಮ ಬದುಕನ್ನು ಹಸನಾಗಿಸ ಮಾಡಿಕೊಳ್ಳಲಿ ಎಂದು ಹೇಳಬಯಸುವೆ
ಕಾರ್ಮಿಕರೇ ದೇಶದ ಪ್ರಬಲ ಶಕ್ತಿ
ಶ್ರಮವಹಿಸಿ ಬೆವರ ಸುರಿಸಿ
ದುಡಿದು ಎಷ್ಟೋ ಜನರನ್ನು
ಶ್ರೀಮಂತರನ್ನಾಗಿ ಸಿದ ಪ್ರಾಮಾಣಿಕ ದುಡಿಮೆಯನ್ನು ಮಾಡುತ್ತಿರುವ
ವಿವಿಧ ಕ್ಷೇತ್ರದ ಕಾರ್ಮಿಕ ರೆಲ್ಲರಿಗೂ ಶುಭಾಶಯಗಳು.
ಕಾಶಿಬಾಯಿ ಗುತ್ತೇದಾರ