ಆಕ್ಸಿಜನ್ ಕೊರತೆ: ಕಲಬುರಗಿಯಲ್ಲಿ ಮತ್ತೆ ಐವರ ಸಾವು

ಕಲಬುರಗಿ: ಆಕ್ಸಿಜನ್ ಕೊರತೆಯಿಂದ ಅಫಜಲಪುರ ತಾಲ್ಲೂಕು ಆಸ್ಪತ್ರೆಯಲ್ಲಿ ನಾಲ್ವರು ಮತ್ತು ನಗರದ ಕ್ಯೂಪಿ ಆಸ್ಪತ್ರೆಯಲ್ಲಿ ಓರ್ವ ಮೃತಪಟ್ಟಿರುವ ಘಟನೆ ಇಂದು ನಡೆದಿದೆ.

ಅಫಜಲಪುರ ತಾಲ್ಲೂಕು ಆರೋಗ್ಯ ಅಧಿಕಾರ ಆಸ್ಪತ್ರೆಯಲ್ಲಿ ಆಕ್ಸಿಜನ್ ಒದಗಿಸುವುದು ಮಂಗಳವಾರ ಮನವಿ‌ ಮಾಡಿದರು ಎಂದು ಹೇಳಲಾಗಿದ್ದು, ಆಮ್ಲಜನಕ ಕೊರತೆಯಿಂದ ನಾಲ್ವರು ನರಳಾಡಿ ಪ್ರಾಣಬಿಟ್ಟಿದ್ದಾರೆ ಎಂದು ತಿಳಿದುಬಂದಿದೆ.

ಸದ್ಯ ಅಫಜಲಪುರ ತಾಲ್ಲೂಕು ಆಸ್ಪತ್ರೆಗೆ ಶಾಸಕ ಮತ್ತು ತಹಶೀಲ್ದಾರ ಭೇಟಿ ನೀಡಿ ಪರಿಶೀಲನೆ ನಡೆಸಿ ಮಾಹಿತಿ ಪಡೆಯುತ್ತಿದ್ದಾರೆ.

ಇದೇ ರೀತಿ ನಗರದ ಎಂಎಸ್ ಕಿ ಮಿಲ್ ಪ್ರದೇಶದ ಕ್ಯೂಪಿ ಆಸ್ಪತ್ರೆಯಲ್ಲಿ ಆಕ್ಸಿಜನ್ ಕೊರತೆಯಿಂದ ಓರ್ವ ರೋಗಿ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.

ಈ ಹಿಂದೆ ಕೆಬಿಎನ್‌‌ 2 ಮತ್ತು ಭಾನುವಾರ ಸಂತೋಷ ಕಾಲೋನಿಯ ಖಾಸಗಿ ಆಸ್ಪತ್ರೆಯಲ್ಲಿ 5‌ ಮತ್ತು ಜಿಲ್ಲೆಯಲ್ಲಿ ಇಂದು ಮತ್ತೆ ನೈವರು ಆಕ್ಸಿಜನ್ ಕೊರತೆಯಿಂದ ಮೃತಪಟ್ಟಿದ್ದಾರೆ.

ಜಿಲ್ಲೆಯಲ್ಲಿ ಆಕ್ಸಿಜನ್ ‌ಕೊರತೆಯಿಂದ ಜನರು ಜಿಲ್ಲಾಧಿಕಾರಿ ವಿ.ವಿ ಜೋತ್ಸ್ನಾ ಅವರು ನಗರದ ಉದ್ಭವವಾಗುತ್ತಿರುವ ಆರೋಗ್ಯ ಸಮಸ್ಯೆ ಪರಿಹಾರ ಕೈಗೊಳಬೇಕಾಗಿದೆ.

S S Benakanalli

Founder , Director Of KK NEWS KANNADA _ S S BENAKANAHALLI

Leave a Reply

Your email address will not be published. Required fields are marked *