ಯಾದಗಿರಿಯಲ್ಲಿ ಕೊರೊನಾ ಲಸಿಕೆ ಕೊರತೆ; ವ್ಯಾಕ್ಸಿನ್ ಪಡೆಯಲು ಜನರ ಪರದಾಟ…!
ಯಾದಗಿರಿ: ದೇಶದಲ್ಲಿ ಕೊರೊನಾ ಎರಡನೇ ಅಲೆ ದಿನ ನಿತ್ಯವೂ ಅಟ್ಟಹಾಸ ಮೆರೆಯುತ್ತಿದೆ. ಕೊರೊನಾಗೆ ಅನೇಕ ಸಾವು ಪ್ರಕರಣಗಳು ಬೆಳಕಿಗೆ ಬರುತ್ತಿವೆ. ಪ್ರತಿ ನಿತ್ಯವೂ ಕೋವಿಡ್ ಪ್ರಕರಣಗಳು ಹೆಚ್ಚಿನ ಪ್ರಮಾಣದಲ್ಲಿ ಬೆಳಕಿಗೆ ಬರುತ್ತಿವೆ. ಇದರಿಂದ ಈಗ ಆತಂಕ ಗೊಂಡ ಜನ ಕೊರೊನಾ ಲಸಿಕೆ ಪಡೆಯಲು ಹೆಚ್ಚಿನ ಸಂಖ್ಯೆಯಲ್ಲಿ ಹೆಸರು ನೊಂದಣೆ ಮಾಡಿಸಿ ಲಸಿಕೆ ಪಡೆಯಲು ಮುಗಿ ಬಿಳುತ್ತಿದ್ದಾರೆ. ದೇಶದಲ್ಲಿ ಈಗಾಗಲೇ ಕೊರೊನಾ ಲಸಿಕೆ ಅಭಿಯಾನ ಆರಂಭವಾಗಿದ್ದು ಅಭಿಯಾನಕ್ಕೆ ಕೈಜೊಡಿಸಿ ಜನರು ಲಸಿಕೆ ಪಡೆಯಲು ಮುಂದಾಗುತ್ತಿದ್ದಾರೆ. ಈಗಾಗಲೇ ಕೊರೊನಾ ವಾರಿಯರ್ಸ್ ಗಳಿಗೆ,ವಯಸ್ಸಾದವರಿಗೆ ಹಾಗೂ 45 ವರ್ಷ ಮೇಲ್ಪಟ್ಟ ಅನಾರೋಗ್ಯ ಪೀಡಿತರಿಗೆ ಲಸಿಕೆ ನೀಡಲಾಗುತ್ತಿದೆ.
ರಾಜ್ಯದಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು 18 ವರ್ಷ ಮೇಲ್ಪಟ್ಟ ಯುವಕರಿಗೆ ಲಸಿಕೆ ನೀಡುವ ಅಭಿಯಾನಕ್ಕೆ ಚಾಲನೆ ನೀಡಿದರು. ಯುವ ಜನರು ಆದರೆ,ರಾಜ್ಯದಲ್ಲಿ ಈಗ ಕೊರೊನಾ ಲಸಿಕೆ ಕೊರತೆ ಕಾರಣ ಲಸಿಕೆ ಪಡೆಯಲು ಸಾಧ್ಯವಾಗುತ್ತಿಲ್ಲ. ಯಾದಗಿರಿ ಜಿಲ್ಲೆಯಲ್ಲಿ ಕೂಡ ಕೋವ್ಯಾಕ್ಸಿನ್ ಹಾಗೂ ಕೋವಿಶಿಲ್ಡ್ ಲಸಿಕೆ ಕಳೆದ ಎರಡು ದಿನದಿಂದ ಕೊರತೆಯಾಗಿದೆ. ಲಸಿಕೆ ಸಂಪೂರ್ಣ ಖಾಲಿಯಾಗಿವೆ. ಯಾದಗಿರಿ ಜಿಲ್ಲೆಯಲ್ಲಿ ಮುದ್ನಾಳ ಸಮೀಪದ ಕೋವಿಡ್ ಆಸ್ಪತ್ರೆ, ನಗರದ ಹಳೆ ಆಸ್ಪತ್ರೆ, ಸುರಪುರ ಹಾಗೂ ಶಹಾಪುರ ತಾಲೂಕಾ ಆಸ್ಪತ್ರೆ ಸೇರಿ ಒಟ್ಟು 210 ಲಸಿಕೆ ವಿತರಣೆ ಕೇಂದ್ರದಲ್ಲಿ ಲಸಿಕೆ ನೀಡಲಾಗುತ್ತಿದೆ.
ಆದರೆ, ಕಳೆದ ಎರಡು ದಿನಗಳಿಂದ ಲಸಿಕೆ ಪಡೆಯಲು ಹೆಸರು ನೊಂದಣಿ ಮಾಡಿಕೊಂಡ ಫಲಾನುಭವಿಗಳು ಯಾವುದೇ ಲಸಿಕೆ ಪಡೆಯುತ್ತಿಲ್ಲ. ಯಾದಗಿರಿ ಜಿಲ್ಲೆಗೆ ಇಲ್ಲಿವರಗೆ 150000 ಲಸಿಕೆ ಪೂರೈಕೆಯಾಗಿದ್ದು, ಅಂದಾಜು 140000 ಜನ ಫಲಾನುಭವಿಗಳು ಲಸಿಕೆ ಪಡೆದಿದ್ದು,ಇನ್ನೂ 10 ಸಾವಿರ ದಷ್ಟು ವೆಸ್ಟ್ ಆಗಿದೆ ಎನ್ನಲಾಗುತ್ತಿದೆ. ಯಾದಗಿರಿ, ಸುರಪುರ, ಶಹಾಪುರ ಇವರು ವಡಗೇರಾ, ಹುಣಸಗಿ ಹಾಗೂ ಮೊದಲಾದ ಕಡೆ ಜನರು ಲಸಿಕೆ ಪಡೆಯಲು ಮುಂದಾಗಿದ್ದಾರೆ.
ಲಸಿಕೆ ಪಡೆಯಲು ಕಳೆದ ಎರಡು ದಿನಗಳಿಂದ ಲಸಿಕೆ ವಿತರಣೆ ಕೇಂದ್ರಕ್ಕೆ ಅಲೆದಾಡುತ್ತಿದ್ದಾರೆ. ಆದರೆ, ಯಾವುದೇ ಲಸಿಕೆ ಸಿಗುತ್ತಿಲ್ಲ.ಯಾದಗಿರಿ ಜಿಲ್ಲೆಯಲ್ಲಿ ಕೂಡ ದಿನ ನಿತ್ಯವೂ ಕೋವಿಡ್ ಪ್ರಕರಣಗಳು ಹೆಚ್ಚಾಗಿ ಬೆಳಕಿಗೆ ಬರುತ್ತಿವೆ. ಆರಂಭದಲ್ಲಿ ಕೊರೊನಾ ಲಸಿಕೆ ಪಡೆಯಲು ಜನ ಹಿಂದೇಟು ಹಾಕಿದ್ದರು. ಆದರೆ, ಈಗ ಕೊರೊನಾ ಪ್ರಕರಣಗಳ ಹೆಚ್ಚಳ ಹಿನ್ನೆಲೆ ಆತಂಕಗೊಂಡು ಹೆಚ್ಚಿನ ಪ್ರಮಾಣದಲ್ಲಿ ಲಸಿಕೆ ಪಡೆಯಲು ಮುಂದಾಗುತ್ತಿದ್ದಾರೆ.