ಮಹಾಮಾರಿ ಎರಡನೇ ಅಲೆಯಿಂದ ಇಂಡಿ ತಾಲೂಕಿನಲ್ಲಿ ಹೆಚ್ಚಿನ ಸಾವು-ನೋವು
ಇಂಡಿ : ಕೊರೋನಾ ಮಹಾಮಾರಿ ಎರಡನೇ ಅಲೆಯಿಂದ ಇಂಡಿ ತಾಲೂಕಿನಲ್ಲಿ ಹೆಚ್ಚಿನ ಸಾವು-ನೋವುಗಳನ್ನು ಆಗುತ್ತಿದ್ದು ಈಗ ಸರಕಾರಿ ಆಸ್ಪತ್ರೆಯಲ್ಲಿರುವ ಬೆಡ್ಡಿನ ಸಂಖ್ಯೆ 60. ಇದ್ದು ಮಹಾಮಾರಿ ಕೊರೋನಕ್ಕೆ ತಾಲೂಕಿನಾದ್ಯಂತ ಕನಿಷ್ಟ 500 ಸಂಖ್ಯೆಯಲ್ಲಿ ಕೋರೋನ ಹೊಂದಿದ ರೋಗಿಗಳು ಆಸ್ಪತ್ರೆಗೆ ಬರುತ್ತಿದ್ದು.
ನೂರಾರು ಸಂಖ್ಯೆಯಲ್ಲಿ ಸಾವು ಸಂಭವಿಸುತ್ತಿದ್ದು ಕೂಡಲೇ . ಐದುನೂರು ಬೆಡ್ಡಿನ ವ್ಯವಸ್ಥೆಯನ್ನು ಹಾಗೂ ರೇಮಡಿಸೇವೆರ್.ಇಂಜೆಕ್ಷನ್.500. ಒದಗಿಸಬೇಕೆಂದು ಆಗ್ರಹಿಸಿ ಜಿಲ್ಲಾ ಉಸ್ತುವಾರಿ ಸಚಿವರಿಗೆ ಜೆಡಿಎಸ್ ತಾಲೂಕ ಅಧ್ಯಕ್ಷ ಬಿಡಿ ಪಾಟೀಲ್ ಇಂದು ಮಿನಿ ವಿಧಾನ ಸೌಧದಲ್ಲಿ ಮನವಿ ಸಲ್ಲಿಸಿದರು ಈ ಸಂದರ್ಭದಲ್ಲಿ ತಾಲೂಕು ಪ್ರಧಾನಕಾರ್ಯದರ್ಶಿ ಶ್ರೀಶೈಲಗೌಡ ಪಾಟೀಲ, ಸಿದ್ದು ಡಂಗಾ, ಶ್ರೀಮಂತ ಬಾರಿಕಾಯಿ, ಅಯೂಬ ನಾಟಿಕಾರ, ರಾಕೇಶ ಅಗಸರ, ಮಮ್ಮದಗೌಸ ಬಾಗವಾನ, ಉಪಸ್ಥಿತರಿದ್ದರು..