‘ಬಿಗ್ ಬಾಸ್’ ಮನೆಯಿಂದ ದಿವ್ಯಾ ಉರುಡುಗ ಔಟ್? ಕಣ್ಣೀರು ಹಾಕಿದ ಅರವಿಂದ್!

ಹೈಲೈಟ್ಸ್‌:

  • ದಿವ್ಯಾ ಉರುಡುಗಗೆ ಅನಾರೋಗ್ಯ
  • ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ದಿವ್ಯಾ ಉರುಡುಗ ‘ಬಿಗ್ ಬಾಸ್’ ಕಾರ್ಯಕ್ರಮದಿಂದ ಔಟ್?
  • ದಿವ್ಯಾ ಉರುಡುಗ ಇಲ್ಲದೆ ಕಣ್ಣೀರು ಹಾಕಿದ ಅರವಿಂದ್

ಬಿಗ್ ಬಾಸ್ ಕನ್ನಡ 8‘ ಕಾರ್ಯಕ್ರಮದಲ್ಲಿ ಬೈಕ್ ರೇಸರ್ ಅರವಿಂದ್ ಹಾಗೂ ದಿವ್ಯಾ ಉರುಡುಗ ವೀಕ್ಷಕರ ಗಮನ ಸೆಳೆದಿದ್ದರು. ತಮ್ಮ ನಡುವಿನ ಆತ್ಮೀಯ ಅನುಬಂಧದ ಮೂಲಕ ‘ಬಿಗ್ ಬಾಸ್’ ಮನೆಯೊಳಗೂ ಅರವಿಂದ್ ಹಾಗೂ ದಿವ್ಯಾ ಉರುಡುಗ ಎಲ್ಲರ ಕಣ್ಣು ಕುಕ್ಕಿದ್ದರು.

ಅರವಿಂದ್ ಹಾಗೂ ದಿವ್ಯಾ ಉರುಡುಗ ನಡುವೆ ಪ್ರೀತಿ ಮೊಳಕೆಯೊಡೆದಿದೆ ಅಂತಲೇ ‘ಬಿಗ್ ಬಾಸ್’ ಮನೆಯೊಳಗಿರುವ ಸ್ಪರ್ಧಿಗಳು ಭಾವಿಸಿದ್ದಾರೆ. ‘ಬಿಗ್ ಬಾಸ್’ ಮನೆಯಿಂದ ಹೊರಗೆ ಹೋದ ಬಳಿಕ ಪ್ರೀತಿ ಮತ್ತು ಭವಿಷ್ಯದ ಬಗ್ಗೆ ನಿರ್ಧಾರ ಕೈಗೊಳ್ಳುವುದಾಗಿ ಅರವಿಂದ್ ಮತ್ತು ದಿವ್ಯಾ ಉರುಡುಗ ತಿಳಿಸಿದ್ದರು. ಹೀಗಿರುವಾಗಲೇ, ‘ಬಿಗ್ ಬಾಸ್’ ಮನೆಯಲ್ಲಿ ಅನಿರೀಕ್ಷಿತ ಘಟನೆಯೊಂದು ನಡೆದಿದೆ.

ಅನಾರೋಗ್ಯದಿಂದ ಬಳಲುತ್ತಿರುವ ದಿವ್ಯಾ ಉರುಡುಗ
ಕಳೆದ ವಾರದಿಂದಲೂ ದಿವ್ಯಾ ಉರುಡುಗ ಅನಾರೋಗ್ಯದಿಂದ ಬಳಲುತ್ತಿದ್ದಾರೆ. ”ನಿಮ್ಮ ಆರೋಗ್ಯ ಚೆನ್ನಾಗಿ ನೋಡಿಕೊಳ್ಳಿ. ಟೈಮ್ ಸರಿಯಾಗಿ ಮಾತ್ರೆ ತೆಗೆದುಕೊಳ್ಳಿ” ಎಂಬ ಸಂದೇಶ ಕಿಚ್ಚ ಸುದೀಪ್ ಕಡೆಯಿಂದಲೂ ಬಂದಿತ್ತು. ಇದೀಗ ದಿವ್ಯಾ ಉರುಡುಗ ಆರೋಗ್ಯದಲ್ಲಿ ಏರುಪೇರಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಆಸ್ಪತ್ರೆಗೆ ತೆರಳಿದ ದಿವ್ಯಾ ಉರುಡುಗ
ಅನಾರೋಗ್ಯದ ಸಮಸ್ಯೆಯಿಂದಾಗಿ ದಿವ್ಯಾ ಉರುಡುಗ ‘ಬಿಗ್ ಬಾಸ್’ ಮನೆಯಿಂದ ನೇರವಾಗಿ ಆಸ್ಪತ್ರೆಗೆ ತೆರಳಿದ್ದಾರೆ. ಸ್ಕ್ಯಾನಿಂಗ್ ಮತ್ತು ಚಿಕಿತ್ಸೆಗೆಂದು ‘ಬಿಗ್ ಬಾಸ್’ ಮನೆಯಿಂದ ದಿವ್ಯಾ ಉರುಡುಗ ಹೊರಗೆ ಬಂದ್ಮೇಲೆ, ”ದಿವ್ಯಾ ಉರುಡುಗ ಅವರಿಗೆ ಸ್ಕ್ಯಾನಿಂಗ್ ಮಾಡಿಸಬೇಕು ಎಂದು ವೈದ್ಯರು ಸೂಚಿಸಿರುವುದರಿಂದ ಅವರನ್ನು ತಪಾಸಣೆಗೆ ಕರೆದೊಯ್ಯಲಾಗಿದೆ. ಅವರು ಕ್ಷೇಮವಾಗಿದ್ದಾರೆ” ಎಂದು ‘ಬಿಗ್ ಬಾಸ್’ ಸ್ಪರ್ಧಿಗಳಿಗೆ ತಿಳಿಸಿದ್ದಾರೆ.

ಜೊತೆಗೆ, ”ಸ್ಕ್ಯಾನಿಂಗ್ ನಂತರ ಯೂರಿನರಿ ಟ್ರ್ಯಾಕ್ಟ್ ಇನ್ಫೆಕ್ಷನ್ ಕಂಡುಬಂದಿದ್ದರಿಂದ ದಿವ್ಯ ಉರುಡುಗ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ” ಅಂತಲೂ ‘ಬಿಗ್ ಬಾಸ್’ ಸ್ಪರ್ಧಿಗಳಿಗೆ ಮಾಹಿತಿ ನೀಡಿದ್ದಾರೆ.

‘ಬಿಗ್ ಬಾಸ್’ ಮನೆಯಿಂದ ದಿವ್ಯಾ ಉರುಡುಗ ಔಟ್?
‘ಬಿಗ್ ಬಾಸ್ ಕನ್ನಡ 8’ ಕಾರ್ಯಕ್ರಮದಿಂದ ದಿವ್ಯಾ ಉರುಡುಗ ಔಟ್ ಆದ್ರಾ? ಸದ್ಯ ಹೀಗೊಂದು ಅನುಮಾನ ವೀಕ್ಷಕರಲ್ಲಿ ಕಾಡುತ್ತಿದೆ. ಅದಕ್ಕೆ ಕಾರಣ ಕಲರ್ಸ್ ಕನ್ನಡ ವಾಹಿನಿ ಬಿಡುಗಡೆ ಮಾಡಿರುವ ಇಂದಿನ ಸಂಚಿಕೆಯ ಪ್ರೋಮೋ..!

ಕಲರ್ಸ್ ಕನ್ನಡ ವಾಹಿನಿ ಬಿಡುಗಡೆ ಮಾಡಿರುವ ‘ಬಿಗ್ ಬಾಸ್ ಕನ್ನಡ 8’ ಕಾರ್ಯಕ್ರಮದ ಇಂದಿನ ಸಂಚಿಕೆಯ ಪ್ರೋಮೋದಲ್ಲಿ ”ಈ ಕೂಡಲೆ ದಿವ್ಯಾ ಉರುಡುಗ ಬಟ್ಟೆಯನ್ನು ಸ್ಟೋರ್‌ರೂಮ್‌ಗೆ ತಂದಿರಿಸಿ” ಎಂಬ ಸೂಚನೆ ಸ್ಪರ್ಧಿಗಳಿಗೆ ‘ಬಿಗ್ ಬಾಸ್’ ಕಡೆಯಿಂದ ಸಿಕ್ಕಿದೆ. ದಿವ್ಯಾ ಉರುಡುಗ ಸೂಟ್‌ಕೇಸ್‌ಅನ್ನು ಅರವಿಂದ್ ಸ್ಟೋರ್‌ ರೂಮ್‌ಗೆ ತಂದಿರಿಸಿದ್ದಾರೆ.

ಈ ಬೆನ್ನಲ್ಲೇ, ”ಹೋದವರು ವಾಪಸ್ ಬರಲ್ಲ” ಅಂತ ಅರವಿಂದ್ ಹೇಳಿದ್ದಾರೆ. ಜೊತೆಗೆ ”ಬೆಳಗ್ಗೆಯಿಂದ ರಾತ್ರಿವರೆಗೂ ಜೊತೆಯಲ್ಲಿ ಇರ್ತಿದ್ಲು” ಎಂದು ದಿವ್ಯಾ ಉರುಡುಗ ಬಗ್ಗೆ ಮಾತನಾಡುತ್ತಾ ಅರವಿಂದ್ ಭಾವುಕರಾಗಿ ಕಣ್ಣೀರು ಸುರಿಸಿದ್ದಾರೆ. ಅತ್ತ ಶುಭಾ ಪೂಂಜಾ ಹಾಗೂ ನಿಧಿ ಸುಬ್ಬಯ್ಯ ಕೂಡ ಕಣ್ಣೀರಿಟ್ಟಿದ್ದಾರೆ.

ಹಾಗಾದ್ರೆ, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ದಿವ್ಯಾ ಉರುಡುಗರನ್ನ ‘ಬಿಗ್ ಬಾಸ್ ಕನ್ನಡ 8’ ಕಾರ್ಯಕ್ರಮದಿಂದ ಔಟ್ ಮಾಡಲಾಗಿದ್ಯಾ? ಈ ಬಗ್ಗೆ ‘ಬಿಗ್ ಬಾಸ್’ ಸ್ಪಷ್ಟನೆ ಕೊಡ್ತಾರಾ? ಕಾದು ನೋಡೋಣ…

S S Benakanalli

Founder , Director Of KK NEWS KANNADA _ S S BENAKANAHALLI

Leave a Reply

Your email address will not be published. Required fields are marked *