ಜೂಜುಕೊರರ ಹವ್ಯಾಸಿ ತಾಣವಾದ ಅಫಜಲಪುರದ ಹಳ್ಳಿಗಳು
ಅಫಜಲಪುರ,. ತಾಲ್ಲೂಕಿನ ಕೆಲವು ಹಳ್ಳಿಗಳಲ್ಲಿ ಜನರು ಜೂಜು ಆಡುವುದೆ ಕೆಲಸ ಎಂಬಂತೆ ಎಲ್ಲಾ ಕೆಲಸಗಳನ್ನು ಬಿಟ್ಟು ದೂರದ ಹೊಲಗಳಲ್ಲಿ ಹತ್ತಾರು ಜನರು ಸೇರಿಕೊಂಡು ಯಾವುದೇ ಕೊರೊನಾ ನಿಯಮ ಪಾಲಿಸದೆ ಮಾಸ್ಕ ಹಾಕದೆ ಒಬ್ಬರನ್ನೊಬ್ಬರು ಅಂಟಿಕೊಂಡು ಆಟವಾಡುತ್ತಿದ್ದಾರೆ. ತಾಲ್ಲೂಕಿನ ಹತ್ತಿರದ ಹಳ್ಳಿಯಾದ ಬಳೂರ್ಗಿ ಗ್ರಾಮದಲ್ಲಿ ನೂರಾರು ಯುವಕರು ಸೆರಿ ಈ ದಂದೆಯಲ್ಲಿ ಪಾಲುದಾರರಾಗಿದ್ದಾರೆ.
ರಾಜ್ಯದ ಗಡಿ ಗ್ರಾಮವಾದ ಈ ಹಳ್ಳಿಯು ಕೆಟ್ಟ ವ್ಯಸನಗಳ ತಾಣವಾಗಿದೆ.ದಿನಾಲೂ ಈ ಗ್ರಾಮದ ಚೆಕ್ ಪೋಸ್ಟ್ ಗಳಿಗೆ ಹಲವಾರು ಅಧಿಕಾರಿಗಳು ಹಾಗೂ ವಿಶೇಷವಾಗಿ ಪೋಲಿಸ್ ಅಧಿಕಾರಿಗಳು ಭೇಟಿ ಕೊಡುತ್ತಾರೆ.ಆದರೆ ಜೂಜುಕೊರರು ಇದಾವುದಕ್ಕು ಕ್ಯಾರೆ ಎನ್ನದೆ ತಮ್ಮ ಆಟದಲ್ಲಿ ತಲ್ಲಿನರಾಗುತ್ತಾರೆ. ಸಾಮಾಜಿಕ ಅಂತರ ಎಂದರೆ ಇವರಿಗೆ ಗೊತ್ತೆ ಇಲ್ಲ ಎಂಬಂತೆ ತಮ್ಮ ಇಚ್ಛೆಗೆ ತಕ್ಕಂತೆ ಇರುತ್ತಾರೆ. ಇದು ಕೊರೊನಾ ರೋಗ ಹರಡಲು ಯೊಗ್ಯವಾದ ತಾಣವಾಗಿದೆ. ಸಂಬಂಧ ಪಟ್ಟ ಅಧಿಕಾರಿಗಳು ಇದರ ಬಗ್ಗೆ ಕ್ರಮ ಕೈಗೊಳ್ಳದೆ ಹೊದರೆ ಮುಂದಿನ ದಿನಗಳಲ್ಲಿ ಇದು ಕೊರೊನಾ ಮಾರಿಯ ಹಾಟಸ್ಪಾಟ್ ಆಗುವುದರಲ್ಲಿ ಎರಡು ಮಾತಿಲ್ಲ…….