ಕೆ.ಕೆ.ಆರ್.ಡಿ.ಬಿ.ಯಿಂದ 6 ಜಿಲ್ಲೆಗಳಿಗೆ ಆಂಬುಲೆನ್ಸ್ ವಾಹನ ಸೇವೆಗೆ ರೇವೂರ ಚಾಲನೆ
ಕಲಬುರಗಿ: ತೀವ್ರ ಅನಾರೋಗ್ಯದಿಂದ ಬಳಲುವ ರೋಗಿಗಳನ್ನು ತುರ್ತಾಗಿ ಅಸ್ಪತ್ರೆಗೆ ಸಾಗಿಸಲು ಅನುಕೂಲವಾಗುವಂತೆ ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿಯಿಂದ ಕಲಬುರಗಿ ವಿಭಾಗದ ಆರು ಜಿಲ್ಲೆಗಳಿಗೆ ಮುಂದುವರಿದ ಜೀವರಕ್ಷಕ ತಂತ್ರಜ್ಞಾನವುಳ್ಳ ಆಂಬುಲೆನ್ಸ್? ವಾಹನಗಳನ್ನು ಒದಗಿಸಿದ್ದು, ಗುರುವಾರ ಮಂಡಳಿಯ ಅಧ್ಯಕ್ಷ ದತ್ತಾತ್ರೇಯ ಸಿ. ಪಾಟೀಲ ರೇವೂರ ಅವರು ಹಸಿರು ನಿಶಾನೆ ತೋರಿಸುವ ಮೂಲಕ ಅಂಬುಲೆನ್ಸ್ ವಾಹನಗಳಿಗೆ ಚಾಲನೆ ನೀಡಿದರು.
ಬಳಿಕ ಮಾತನಾಡಿದ ದತ್ತಾತ್ರೇಯ ಸಿ. ಪಾಟೀಲ ರೇವೂರ ಅವರು, ಕಲ್ಯಾಣ ಕರ್ನಾಟಕ ಭಾಗದ ೬ ಜಿಲ್ಲೆಗಳಿಗೆ ಒಟ್ಟು ೯ ಆಂಬುಲೆನ್ಸ್?ಗಳನ್ನು ನೀಡಲಾಗಿದೆ. ಕಲಬುರಗಿ, ಯಾದಗಿರಿ ಹಾಗೂ ಬಳ್ಳಾರಿಗೆ ತಲಾ ೨, ಬೀದರ, ಕೊಪ್ಪಳ ಹಾಗೂ ರಾಯಚೂರು ಜಿಲ್ಲೆಗಳಿಗೆ ತಲಾ ೧ ಸುಸಜ್ಜಿತ ಆಂಬುಲೆನ್ಸ್? ವಾಹನ ಒದಗಿಸಲಾಗಿದೆ. ಜೀವರಕ್ಷಕ ತಂತ್ರಜ್ಞಾನವುಳ್ಳ ಆಂಬುಲೆನ್ಸ್? ವಾಹನಗಳಾದ ಇವುಗಳಲ್ಲಿ ಹೆಚ್ಚಿನ ವೈದ್ಯಕೀಯ ಸಲಕರಣೆಗಳಿರುವುದರಿಂದ ತಲಾ ಒಂದು ಆಂಬುಲೆನ್ಸ್? ವಾಹನಕ್ಕೆ ಮಂಡಳಿಯು ಅಂದಾಜು ೫೦ ಲಕ್ಷ ರೂ. ವೆಚ್ಚ ಮಾಡಿದೆ ಎಂದು ಅವರು ವಿವರಿಸಿದರು.