ಮೇ 12 ಬಳಿಕ ಲಾಕ್ ಡೌನ್ ಸುಳಿವು ಕೊಟ್ಟ ಸುಧಾಕರ್
ಬೆಂಗಳೂರು -ರಾಜ್ಯದಲ್ಲಿ ವ್ಯಾಪಕವಾಗಿ ಹಬ್ಬುತ್ತಿರುವ ಕೋರೊನಾ ಸೋಂಕು ತಡೆಗೆ ಮೇ12ರ ಬಳಿಕ ರಾಜ್ಯದಲ್ಲಿ ಲಾಕ್ ಡೌನ್ ಮಾಡುವ ಕುರಿತು ಚಿಂತನೆ ನಡೆಸಲಾಗುವುದು ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಡಾ.ಸುಧಾಕರ್ ತಿಳಿಸಿದ್ದಾರೆ.
ಮೇ 12ರವರೆಗೆ ಕರ್ಫ್ಯೂ ವಿಧಿಸಲಾಗಿದ್ದರೂ ಸೋಂಕು ನಿಯಂತ್ರಣದಲ್ಲಿ ನಿರೀಕ್ಷಿತ ಯಶಸ್ಸು ಸಿಕ್ಕಿಲ್ಲ ಹೀಗಾಗಿ ಸಂಪೂರ್ಣ ಲಾಕ್ ಡೌನ್ ಮಾಡುವ ಬಗ್ಗೆ ತೀರ್ಮಾನ ಕೈಗೊಳ್ಳುವ ಪರೋಕ್ಷ ಸುಳಿವು ನೀಡಿದ್ದಾರೆ.
ಸೋಂಕು ತಡೆಗೆ ಅಂಕುಶ ಬೀಳುತ್ತಿಲ್ಲ. ಪ್ರತಿನಿತ್ಯ ಪ್ರಕರಣಗಳು ಹೆಚ್ವುತ್ತಲೆ ಇವೆ. ಆದ್ದರಿಂದ ಲಾಕ್ ಡೌನ್ ಅನಿವಾರ್ಯ ಎಂದು ಸುದ್ದಿಗಾರರಿಗೆ ತಿಳಿಸಿದರು.
ಇದುವರೆಗೆ ರಾಜ್ಯದಲ್ಲಿ ಒಂದು ಕೋಟಿ ಡೋಸ್ ಲಸಿಕೆ ನೀಡಲಾಗಿದೆ ಎಂದ ಅವರು, ಮೇ15 ರ ಬಳಿಕ 18 ವರ್ಷ ಮೇಲ್ಪಟ್ಟವರಿಗೆ ಲಸಿಕೆ ಹಾಕಲಾಗುವುದು ಎಂದರು.
ಕೋವಿಡ್ ನಿರ್ವಹಣೆಯನ್ನು ಐದು ಮಂದಿ ಸಚಿವರಿಗೆ ವಹಿಸಿರುವ ಬಗ್ಗೆ ಬೇಸರವಿಲ್ಲ. ತಮ್ಮ
ರಾಜೀನಾಮೆ ಕೇಳುತ್ತಿರುವ ರೇಣುಕಾಚಾರ್ಯ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಕೋವಿಡ್ ಸಮಯದಲ್ಲಿ ರಾಜಕೀಯ ಬಗ್ಗೆ ಮಾತನಾಡದೆ ಕೊರೊನಾ ಯೋಧನಾಗಿ ಕಾರ್ಯನಿರ್ವಹಿಸುವುದಾಗಿ ತಿಳಿಸಿದರು.