ಕಲಬುರಗಿಯಲ್ಲಿ 45 ಪೊಲೀಸರಿಗೆ ಕೊರೊನಾ; ಓರ್ವ ಸಿಬ್ಬಂದಿ ಬಲಿ
ದೇಶಾದ್ಯಂತ ಬಿಟ್ಟುಬಿಡದೆ ಕಾಡುತ್ತಿರುವ ಕೊರೊನಾ ಆರಕ್ಷಕರಿಗೂ ಅಂಟಿದ್ದು, ಕಲಬುರಗಿಯಲ್ಲಿ 40 ಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿಗೆ ಸೋಂಕು ತಗುಲಿದೆ
ಕಲಬುರಗಿ: ಹಗಲಿರುಳೆನ್ನದೆ ಲಾಠಿ ಹಿಡಿದು ಜನಸೇವೆಯಲ್ಲಿ ತೊಡಗುವ ಪೊಲೀಸ್ ಇಲಾಖೆಗೂ ಕೊರೊನಾ ವೈರಸ್ ವಕ್ಕರಿಸಿದೆ.
ಕಲಬುರಗಿ ನಗರ ಪೊಲೀಸ್ ಆಯುಕ್ತಾಲಯ ವ್ಯಾಪ್ತಿಯ 45 ಪೊಲೀಸರಿಗೆ ಕೊರೊನಾ ದೃಢಪಟ್ಟಿದೆ. ಬಹುತೇಕರು ಸೋಂಕಿನಿಂದ ಗುಣಮುಖರಾಗಿದ್ದಾರೆ. ಆದರೆ ಓರ್ವ ಪೊಲೀಸ್ ಸಿಬ್ಬಂದಿ ಚಿಕಿತ್ಸೆ ಫಲಿಸದೆ ಸೋಂಕಿಗೆ ಪ್ರಾಣ ಕಳೆದುಕೊಂಡಿದ್ದಾರೆ ಎಂದು ಕಲಬುರಗಿ ನಗರ ಪೊಲೀಸ್ ಆಯುಕ್ತ ಎನ್.ಸತೀಶ್ ಕುಮಾರ್ ತಿಳಿಸಿದ್ದಾರೆ.
ಶೇಕಡಾ 70 ರಷ್ಟು ಪೊಲೀಸ್ ಸಿಬ್ಬಂದಿ ವ್ಯಾಕ್ಸಿನ್ ಹಾಕಿಸಿಕೊಂಡಿದ್ದಾರೆ. ಶೇಕಡಾ 40 ರಷ್ಟು ಸಿಬ್ಬಂದಿ ಎರಡನೇ ಡೋಸ್ ವ್ಯಾಕ್ಸಿನ್ ಪಡೆದಿದ್ದಾರೆ ಎಂದು ಅವರು ಹೇಳಿದರು.