ಕಾಳಗಿ. : ಕೊರೋನಾ ವಿಚಾರದಲ್ಲಿ ಕರ್ತವ್ಯಲೋಪಬೇಡ: ಶಾಸಕ ಡಾ. ಅವಿನಾಶ ಜಾಧವ ಖಡಕ್ ವಾರ್ನಿಂಗ

ಕಾಳಗಿ. : ದಿನೆ-ದಿನೆ ದೇಶಾದ್ಯಂತ ಮಹಾಮಾರಿ ಕೊರೋನಾ ಎರಡನೆ ಅಲೆಯೂ ಅತಿ ಶಿಘ್ರವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ಸಾವಿರಾರು ಜನತೆಯ ಪ್ರಾಣ ಹಾನಿಯಾಗಿದೆ.
ಇನ್ನಾದರೂ ಮುಂದೆ ನಿರ್ಲಕ್ಷ ಧೋರಣೆ ತೋರದೆ ಈ ದೇಶದ ಪ್ರತಿಯೊಬ್ಬ ನಾಗರಿಕನೂ ಕೂಡ ಕರೋನಾ ಕಡಿವಾಣಕ್ಕಾಗಿ ಪಣತೊಟ್ಟು ನಿಲ್ಲಬೇಕಾಗಿದೆ ಎಂದು ಶಾಸಕ ಡಾ.ಅವಿನಾಶ ಜಾಧವ ತಿಳಿಸಿದರು.
ಕೋವಿಡ್-19 ಎರಡನೇ ಅಲೆಯ ಹರಡುವಿಕೆಯನ್ನು ತಡೆಗಟ್ಟಲು ವೈದ್ಯಾಧಿಕಾರಿಗಳು, ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು ಕೈಗೊಂಡ ಕ್ರಮಗಳ ಬಗ್ಗೆ, ಕೋವಿಡ್ ವ್ಯಾಕ್ಸಿನ್ ನೀಡುತ್ತಿರುವ ಪ್ರಮಾಣ ಮತ್ತು ತಾಲ್ಲೂಕಿನ ವಿವಿಧ ಅಭಿವೃದ್ಧಿ ಕಾಮಗಾರಿಗಳ ವಿಚಾರವನ್ನಿಟ್ಟುಕೊಂಡು ಮಂಗಳವಾರ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಶಾಸಕ ಡಾ.ಅವಿನಾಶ್ ಜಾಧವ್ ಅವರು, ಅಧಿಕಾರಿಗಳೂಂದಿಗೆ ಸಭೆ ನಡೆಸಿ ರೋಗದ ಬಗ್ಗೆ ಎಚ್ಚೇತ್ತುಕೊಳ್ಳಬೇಕಾಗಿರುವ ಎಲ್ಲಾ ಪ್ರಕಾರದ ಸಂಪೂರ್ಣ ಮಾಹಿತಿಯನ್ನು ಹಾಗೂ ಸಲಹೆಗಳನ್ನು ನೀಡಿದರು.
ಮಹಾಮಾರಿ ಕರೋನಾ ನಿಯಂತ್ರಣಕ್ಕಾಗಿ ಮಾಡಬೇಕಾಗಿರುವ ಸಕಲ ಸಿದ್ಧತೆಗಳನ್ನು ರಾಜ್ಯ ಸರ್ಕಾರ ಕೈಗೊಂಡಿದೆ. ಸರ್ಕಾರ ನಿರ್ಮಿಸಿರುವ ಸಕಲ ನೀತಿ ನೀಯಮಗಳನ್ನು ಅಷ್ಟೇ ಕಟ್ಟುನಿಟ್ಟಾಗಿ ಪರಿಪಾಲನೆ ಮಾಡುವುದು ಕೂಡಾ ಜವಾಬ್ದಾರಿಯೂತವಾದ ಕೆಲಸವಾಗಿದೆ.
ಎಷ್ಠೇ ಪರಿ ಪರಿಯಾಗಿ ಬೇಡಿಕೊಂಡರೂ ಕೂಡಾ ಕೆಲವರು ರೋಗದ ಬಗ್ಗೆ ಬೆಜಾವಾಬ್ದಾರಿತನ ತೋರುತ್ತಿದ್ದಾರೆ. ಇನ್ನು
ಮುಂದೆ ಹೀಗಾಗಬಾರದು ಎಂದ ಶಾಸಕರು, ‘ತಾವು ಬದುಕಿ ಬೆರೋಬ್ಬರಿಗೂ ಬದುಕಲು ಬಿಡಿ’ ಎಂದು ಜಾಗೃತಿ ಮೂಡಿಸಿದರು.

ಕಾಳ ಸಂತೆಯಲ್ಲಿ ಅಕ್ಕಿ ಮಾರಾಟ, ಬಡ ಪಡಿತರರಿಂದ ಹಣವಸೂಲಿ

ಲಾಕ್ ಡೌನ್ ಪ್ರಯುಕ್ತ ಬಡತನ ರೇಖೆಗಿಂತ ಕೆಳಗಿರುವ ವ್ಯಕ್ತಿಗಳು ಜೀವನಸಾಗಿಸುವುದೂ ಕೂಡ ದುಸ್ಥಿತಿಯಾಗಿರುವ ಪರಿಸ್ಥಿತಿ ಯಲ್ಲಿ ಇಲ್ಲಿಯ ನ್ಯಾಯ ಬೆಲೆ ಅಂಗಡಿಗಳ ಮಾಲಿಕರು, ಪ್ರತಿಯೊಬ್ಬ ಪಡಿತರರಿಂದ ತಲಾ ನೂರು ರೂಪಾಯಿಗಳು ತೆಗೆದುಕೊಳ್ಳುತ್ತಿದ್ದು, ಸಂಕಷ್ಟ ದಲ್ಲಿಯೇ ಬಡವರ ‘ಬಾಯಿ ಮೇಲೆ ಬರಿ’ ಎಳೆದಂತಾಗುತ್ತಿದೆ ಎಂದು ಬಡ ಜನತೆಯ ನೋವಿನ ಮಾತಾಗಿದೆ.
ಈ ವಿಚಾರವಾಗಿ ಸಭೆಯಲ್ಲಿದ್ದ ಗ್ರೇಡ್-1ತಹಸೀಲ್ದಾರ ಅರುಣಕುಮಾರ ಕುಲ್ಕರ್ಣಿ ಅವರನ್ನು ಪತ್ರಕರ್ತರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ನನಗೆ ಚಿಂಚೋಳಿ-ಕಾಳಗಿ ಎರಡು ತಾಲೂಕಿನ ಜವಾಬ್ದಾರಿ ಹೆಚ್ಚಾಗಿದೆ. ಬೇರೆ ತಹಸೀಲ್ದಾರ್ ದಾರಿಗೆ ಹಾಕಿಸಿಕೊಳ್ಳುವಂತೆ ನಿಮ್ಮ ಶಾಸಕರಿಗೆ ತಿಳಿಸಿ ಎಂದ ಅವರು, ಅಕ್ರಮ ನಡಸುತ್ತಿರುವ ನ್ಯಾಯಬೆಲೆ ಅಂಗಡಿಗಳ ಮೇಲೆ ಸೂಕ್ತ ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು.
ಗ್ರೇಡ್-2 ತಹಸೀಲ್ದಾರ ನಾಗನಾಥ ತರಗೆ, THO ದೀಪಕ ಪಾಟೀಲ, EO ಅನೀಲ ಕುಮಾರ ರಾಠೋಡ, ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ವೆಂಕಟೇಶ್ ತೆಲಂಗ, ಸಮೂದಾಯ ಆರೋಗ್ಯ ಕೇಂದ್ರದ ಆಡಳಿತ ವೈದ್ಯಾಧಿಕಾರಿ ಡಾ.ಅಮರೇಶ, ಡಾ.ರೇವಣಸಿದ್ಧ ಕಮಲಾಪೂರ, ಶೇಖರ ಪಾಟೀಲ, PWD AEE ಸಿದ್ರಾಮಪ್ಪ ದಂಡಗುಲಕರ, PRE AEE ದೇವಿಂದ್ರ, CPI ವಿನಾಯಕ ಸೇರಿದಂತೆ ಅನೇಕರಿದ್ದರು.

S S Benakanalli

Founder , Director Of KK NEWS KANNADA _ S S BENAKANAHALLI

Leave a Reply

Your email address will not be published. Required fields are marked *