ಸುಲಿಗೆ ಆರೋಪದ ಬೆನ್ನಲ್ಲೇ ಸಿಟಿ-ಸ್ಕ್ಯಾನ್, ಎಕ್ಸ್-ರೇಗೆ ದರ ನಿಗದಿಪಡಿಸಿ ಆದೇಶ ಹೊರಡಿಸಿದ ಸರಕಾರ, ಎಷ್ಟಿದೆ ದರ?
ಹೈಲೈಟ್ಸ್:
- ಸ್ಕ್ಯಾನಿಂಗ್ ಸೆಂಟರ್ಗಳು ದುಪ್ಪಟ್ಟು ಹಣ ಕೀಳುತ್ತಿರುವ ಆರೋಪ
- ಸಿಟಿ-ಸ್ಕ್ಯಾನ್, ಎಕ್ಸ್-ರೇಗೆ ದರ ನಿಗದಿಪಡಿಸಿ ಸರಕಾರದ ಆದೇಶ
- ಸರಕಾರದಿಂದ ಸಿಟಿ-ಸ್ಕ್ಯಾನ್ 1500 ದರ ಫಿಕ್ಸ್
ಬೆಂಗಳೂರು : ಕೋವಿಡ್-19 ಸೋಂಕು ಪತ್ತೆಗೆ ನೆರವಾಗುವ ಸಿಟಿ-ಸ್ಕ್ಯಾನ್ ಮತ್ತು ಎಕ್ಸ್-ರೇಗೆ ಸರಕಾರವು ಖಾಸಗಿ ಆಸ್ಪತ್ರೆ ಮತ್ತು ಪ್ರಯೋಗಾಲಯಗಳ ದರ ನಿಗದಿಪಡಿಸಿ ಆದೇಶ ಹೊರಡಿಸಿದೆ. ಖಾಸಗಿ ಆಸ್ಪತ್ರೆಗಳು ಜನರಿಂದ ಹೆಚ್ಚಿನ ಹಣ ವಸೂಲಿ ಮಾಡಬಾರದು ಎಂಬ ಉದ್ದೇಶದಿಂದ ಈ ಕ್ರಮ ಕೈಗೊಳ್ಳಲಾಗಿದೆ.
ಖಾಸಗಿ ಆಸ್ಪತ್ರೆ ಅಥವಾ ಲ್ಯಾಬ್ಗಳಲ್ಲಿ ಸಿಟಿ-ಸ್ಕ್ಯಾನ್ಗೆ ಗರಿಷ್ಠ 1,500 ರೂ. ಮತ್ತು ಮತ್ತು ಡಿಜಿಟಲ್ ಎಕ್ಸ್-ರೇಗೆ 250 ರೂ. ಮಾತ್ರ ಪಡೆಯಬೇಕಾಗುತ್ತದೆ. ಕೋವಿಡ್ ಸೋಂಕಿನ ಲಕ್ಷಣಗಳಿದ್ದು, ಆರ್ಟಿಪಿಸಿಆರ್ ಮತ್ತು ರಾರಯಪಿಡ್ ಪರೀಕ್ಷೆಯಲ್ಲಿ ನೆಗೆಟಿವ್ ವರದಿ ಬಂದವರೂ ಸಿಟಿ ಸ್ಕ್ಯಾನ್ ಮಾಡಿಸಿದರೆ ರೋಗದ ಲಕ್ಷಣ ಇರುವುದು ನಿಖರವಾಗಿ ಗೊತ್ತಾಗುತ್ತದೆ ಎಂದು ತಜ್ಞರು ಹೇಳಿದ್ದರು.
ಆದರೆ ಸ್ಕ್ಯಾನಿಂಗ್ ಸೆಂಟರ್ಗಳು ದುಪ್ಪಟ್ಟು ಹಣ ಕೀಳುತ್ತಿರುವ ಬಗ್ಗೆ ಸಾರ್ವಜನಿಕರು ದೂರಿದ್ದರು. ಸಿಟಿ ಸ್ಕ್ಯಾನ್ಗೆ ಹೆಚ್ಚು ಹಣ ವಸೂಲಿ ಮಾಡಿದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು. ಸರಕಾರಿ ಆಸ್ಪತ್ರೆಗಳಲ್ಲಿ ಸ್ಕ್ಯಾನಿಂಗ್ ಅನ್ನು ಉಚಿತವಾಗಿ ಮಾಡಲಾಗುತ್ತಿದೆ. ಸಾರ್ವಜನಿಕರು ಇದರ ಸೌಲಭ್ಯ ಪಡೆದುಕೊಳ್ಳಬೇಕು ಎಂದು ಆರೋಗ್ಯ ಸಚಿವ ಡಾ. ಕೆ. ಸುಧಾಕರ್ ಮನವಿ ಮಾಡಿದ್ದಾರೆ.