Lockdown Guideline: ಬಹುತೇಕ ಹಿಂದಿನ ಕರ್ಫ್ಯೂ ನಿಯಮಗಳೇ ಜಾರಿ; ಹಾಗಾದರೆ ನಿರ್ಬಂಧ ಯಾವುದಕ್ಕೆ?
ಬೆಂಗಳೂರು: ಕೊರೋನಾ ಕರ್ಫ್ಯೂನಿಂದ ರಾಜ್ಯದಲ್ಲಿ ಸೋಂಕು ನಿಯಂತ್ರಣಕ್ಕೆ ಬರದ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಸಂಪೂರ್ಣ ಲಾಕ್ಡೌನ್ ಮೊರೆ ಹೋಗಿದೆ. ಮೇ 10ರಿಂದ 2 ವಾರಗಳ ಕಾಲ ಕರ್ನಾಟದಲ್ಲಿ ಕಠಿಣ ಲಾಕ್ಡೌನ್ ಜಾರಿಗೊಳಿಸಲಾಗಿದೆ. ಸೋಂಕು ಹರಡುವಿಕೆಗೆ ಕಡಿವಾಣ ಹಾಕಲು ಸಿಎಂ ಬಿ.ಎಸ್. ಯಡಿಯೂರಪ್ಪ ಸರ್ಕಾರ ಕಟ್ಟುನಿಟ್ಟಿನ ಮಾರ್ಗಸೂಚಿ ಸಿದ್ಧಪಡಿಸಿದೆ. ಸೋಮವಾರ ಬೆಳಗ್ಗೆ 6 ಗಂಟೆಯಿಂದ ಮೇ 24ರ ಬೆಳಗ್ಗೆ 6 ಗಂಟೆವರೆಗೆ ಕಠಿಣ ಲಾಕ್ಡೌನ್ ರಾಜ್ಯಾದ್ಯಂತ ಜಾರಿಯಲ್ಲಿನ ಇರಲಿದೆ. ಬೆಳಗ್ಗೆ 6 ಗಂಟೆಯಿಂದ 10 ಗಂಟೆವರೆಗೆ ಮಾತ್ರ ಹಾಲು, ದಿನಸಿ ಅಂಗಡಿಗಳನ್ನು ತೆರೆಯಲು ಅನುಮತಿ ನೀಡಲಾಗಿದೆ ಎಂದು ಸಿಎಂ ಯಡಿಯೂರಪ್ಪ ಘೋಷಿಸಿದರು.
ಸಿಎಂ ಬಿಎಸ್ವೈ ಅವರು ಲಾಕ್ಡೌನ್ ಘೋಷಿಸಿದ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮುಖ್ಯ ಕಾರ್ಯದರ್ಶಿ ಪಿ. ರವಿಕುಮಾರ್ ಅವರು ಲಾಕ್ಡೌನ್ ಮಾರ್ಗಸೂಚಿಗಳನ್ನು ವಿವರಿಸಿದರು. ಬಹುತೇಕ ಹಿಂದಿನ ಜನತಾ ಕರ್ಫ್ಯೂನಲ್ಲಿ ಹೇರಲಾಗಿದ್ದ ನಿಯಮಗಳನ್ನು ಇಲ್ಲಿ ಜಾರಿ ಮಾಡಲಾಗಿದೆ. ಕೆಲವೊಂದು ನಿರ್ಬಂಧಗಳನ್ನು ಮಾಡಲಾಗಿದೆ. ಸಿಎಂ ಬಿಎಸ್ವೈ ಲಾಕ್ಡೌನ್ ಎಂಬ ಪದ ಬಳಸಿದ್ದರೆ, ಮುಖ್ಯ ಕಾರ್ಯದರ್ಶಿಗಳು ಇದು ಲಾಕ್ಡೌನ್ ಅಲ್ಲ, ಕಠಿಣ ನಿಯಮಗಳು ಜಾರಿ ಎಂದು ಹೇಳಿದರು.
ಯಾವುದಕ್ಕೆ ಅವಕಾಶ
- ಬೆಳಗ್ಗೆ 6ಗಂಟೆಯಿಂದ 10ರವರೆಗೆ ಮದ್ಯ ಪಾರ್ಸೆಲ್ಗೆ ಅವಕಾಶ
- ಅಗತ್ಯ ವಸ್ತುಗಳ ಖರೀದಿಗೆ ನಡೆದುಕೊಂಡೇ ಹೋಗಬೇಕು. ಅಗತ್ಯ ವಸ್ತಗಳ ತರಲು ವಾಹನ ಬಳಸುವಂತಿಲ್ಲ
- ಬೆಳಗ್ಗೆ 6ರಿಂದ 10 ಗಂಟೆಯವರೆಗೆ ಅಗತ್ಯ ವಸ್ತುಗಳ ಖರೀದಿಗೆ ಅವಕಾಶ
- ಬೆಳಗ್ಗೆ 6ರಿಂದ ಸಂಜೆ 6 ಗಂಟೆಯವರೆಗೆ ಹಾಲು ಮಾರಾಟಕ್ಕೆ ಅನುಮತಿ
- ವೈದ್ಯಕೀಯ ತುರ್ತುಸೇವೆಗಳಿಗೆ ಅನುಮತಿ
- ಹೋಟೆಲ್ಗಳಿಂದ ಪಾರ್ಸೆಲ್ಗೆ ಅನುಮತಿ. ಆದರೆ, ನಡೆದುಕೊಂಡೇ ಹೋಗಬೇಕು.
- ಸರ್ಕಾರಿ ಕಚೇರಿಗಳು ಸೀಮಿತ ಮಂದಿಯಲ್ಲಿ ಕಾರ್ಯ ನಿರ್ವಹಿಸಲು ಅನುಮತಿ
- ಆರೋಗ್ಯ ಸಂಬಂಧಿತ ಸಿಬ್ಬಂದಿ ಓಡಾಡಲು ಅವಕಾಶ
- ಮಾಧ್ಯಮ ಸಿಬ್ಬಂದಿ ಓಡಾಡಲು ಅನುಮತಿ
- ಮದುವೆಯಲ್ಲಿ 50 ಮಂದಿ ಮಾತ್ರ ಪಾಲ್ಗೊಳ್ಳಲು ಅವಕಾಶ
- ತಳ್ಳುವ ಗಾಡಿಯಲ್ಲಿ ತರಕಾರಿ ಮಾರಾಟ ಮಾಡಲು ಅನುಮತಿ
- ರೈಲು, ವಿಮಾನ ಎಂದಿನಂತೆ ಓಡಾಟ. ಆದರೆ, ಟಿಕೆಟ್ ಕಡ್ಡಾಯವಾಗಿ ತೋರಿಸಬೇಕು
- ಈ ಕಾಮರ್ಸ್ ಚಟುವಟಿಕೆಗಳಿಗೆ ಅವಕಾಶ
- ನಿಗದಿತ ಕಟ್ಟಡ ಆವರಣದೊಳಗೆ ಕಟ್ಟಡ ನಿರ್ಮಾಣಕ್ಕೆ ಅವಕಾಶ
- ತುರ್ತು ಎಂದು ಧೃಡಪಡಿಸಿದರೆ ಮಾತ್ರ ಸಂಚಾರಕ್ಕೆ ಮಾತ್ರ
ಯಾವುದಕ್ಕೆ ನಿರ್ಬಂಧ
- 10 ಗಂಟೆಯ ಮೇಲೆ ಯಾರೂ ರಸ್ತೆಯಲ್ಲಿ ಓಡಾಡುವಂತಿಲ್ಲ
- ಕಾರ್ಮಿಕರು, ಕೆಲಸಗಾರರು ಬೆಂಗಳೂರು ಬಿಟ್ಟು ಹೋಗುವಂತಿಲ್ಲ
- ವಾಹನ ಸಂಚಾರಕ್ಕೆ ಅವಕಾಶ ಇಲ್ಲ
- ಯಾರಿಗೂ ಪಾಸ್ ನೀಡುವುದಿಲ್ಲ
- ಗಾರ್ಮೆಂಟ್ಸ್ ಕ್ಲೋಸ್ ಆಗಲಿವೆ
- ಅಂತರ್ಜಿಲ್ಲಾ ಗಡಿಗಳು ಬಂದ್
- ಎಲ್ಲ ಕೈಗಾರಿಕಗಳಿಗೆ ನಿರ್ಬಂಧ