ನಟಿ ಶಿಲ್ಪಾ ಶೆಟ್ಟಿ ಕುಟುಂಬಸ್ಥರಿಗೆ ಕೊರೊನಾ ಪಾಸಿಟಿವ್
ಮುಂಬೈ: ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಅವರ ಕುಟುಂಬಸ್ಥರಿಗೆ ಕೊರೊನಾ ಸೋಂಕು ದೃಢಪಟ್ಟಿದೆ. ಈ ಬಗ್ಗೆ ಸ್ವತಃ ಶಿಲ್ಪಾ ಶೆಟ್ಟಿ ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ. ಕಳೆದ 10 ದಿನಗಳು ತಮ್ಮ ಕುಟುಂಬಕ್ಕೆ ಸಂಕಷ್ಟದ ದಿನಗಳು. ನನ್ನ ಅತ್ತೆ-ಮಾವ, ಸಮಿಶಾ, ವಿಯಾನ್ ರಾಜ್ ಹಾಗೂ ನನ್ನ ತಾಯಿ ಹಾಗೂ ರಾಜ್ ಕುಂದ್ರಾ ಅವರಿಗೂ ಸೋಂಕು ತಗುಲಿದೆ. ವೈದ್ಯರು ನೀಡಿದ ಸೂಚನೆ ಮೇರೆಗೆ ಅವರೆಲ್ಲರೂ ಮನೆಯಲ್ಲಿಯೇ ಐಸೋಲೇಟೆಡ್ ಆಗಿದ್ದಾರೆ. ಸದ್ಯ ನನ್ನ ಕೋವಿಡ್ ವರದಿ ನೆಗೆಟಿವ್ ಬಂದಿದೆ. ಇನ್ನು ನಮ್ಮ ಮನೆಯ ಇಬ್ಬರು ಕೆಲಸದವರಿಗೂ ಪಾಸಿಟಿವ್ ಆಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಆಗಿದ್ದಾರೆ ಎಂದು ತಿಳಿಸಿದ್ದಾರೆ.