‘ಕರುನಾಡಿಗೆ ಆಮ್ಲಜನಕ’ ಹೆಸರಿನಲ್ಲಿ ಆಕ್ಸಿಜನ್ ಪೂರೈಕೆಗೆ ಮುಂದಾದ ಹೊರನಾಡಿನ ನಾವಿಕ ಸಂಸ್ಥೆ
ಭಾರತದಲ್ಲಿ ಕೊರೊನಾ ಸಾಂಕ್ರಾಮಿಕ ಕಾಯಿಲೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಕರ್ನಾಟಕ ರಾಜ್ಯದಲ್ಲೂ ಕೂಡ ಪರಿಸ್ಥಿತಿ ಮಿತಿ ಮೀರುವ ಹಂತ ತಲುಪುತ್ತಿದೆ. ಕೊರೊನಾ ಎರಡನೇ ಅಲೆಯಿಂದ ದೇಶ ತತ್ತರಿಸಿದ್ದು, ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ಹೊರನಾಡ ಕನ್ನಡಿಗರ ಸಂಘಟನೆಯಾದ ನಾವಿಕ (ನಾವು ವಿಶ್ವ ಕನ್ನಡಿಗರು ) ಸಂಸ್ಥೆಯು ‘ಕರುನಾಡಿಗೆ ಆಮ್ಲಜನಕ’ ಎಂಬ ಹೆಸರಿನಲ್ಲಿ ಕರ್ನಾಟಕಕ್ಕೆ ಆಮ್ಲಜನಕ ಪೂರೈಕೆಗೆ ಮುಂದಾಗಿದೆ.