ಕಲಬುರಗಿ: ಆಸ್ಪತ್ರೆಯಲ್ಲಿ ಮೃತಪಟ್ಟು ಹತ್ತುಗಂಟೆ ಕಳೆದರು ನೋಡುವವರಿಲ್ಲ
ಕಲಬುರಗಿ: ಜಿಮ್ಸ್ ಆಸ್ಪತ್ರೆಯಲ್ಲಿ ಕೋವಿಡ್ ರೋಗಿ ಒಬ್ಬರು ಮೃತಪಟ್ಟಿ ಹತ್ತು ಗಂಟೆಗಳು ಕಳೆದರು ಅನಾಥ ಶವವಾಗಿ ಬಿದ್ದಿರುವ ಘಟನೆ ಇಲ್ಲಿನ ಜಿಮ್ಸ್ ಆಸ್ಪತ್ರೆಯಲ್ಲಿ ಮೇ. 5 ರಂದು ನಡೆದಿರುವ ಘಟನೆ ಬೆಳಕಿಗೆ ಬಂದಿದೆ.
ನಾಲವರ್ ನಿವಾಸಿ ಹಫಿಜ್ ಬೇಗ್ ಮೃತಪಟ್ಟ ರೋಗಿ. ಜಿಮ್ಸ್ ಆಸ್ಪತ್ರೆ ಜಯದೇವ ಕಟ್ಟಡದ ಎರಡನೇ ಮಹಡಿಯ ವಿಶೇಷ ನಿಗ್ರಹ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದರು. ಮೇ 5 ರಂದು ಬೆಳಿಗ್ಗೆ 2 ಗಂಟೆಗೆ ಮೃತಪಟ್ಟಿರುವ ರೋಗಿಯನ್ನು ಅಪರಾಹ್ನ 10ಗಂಟೆ ಕಳೆದರು ರೋಗಿಯ ಸಾವಿನ ಸುದ್ದಿ ಕುಟುಂಬಸ್ಥರಿಗೆ ತಿಳಿಸಿದಿರುವ ಅಮಾನವಿ ಘಟನೆ ನಡೆದಿದೆ ೆಮದು ತಿಳಿದುಬಂದಿದೆ.
11 ಗಂಟೆಗಳ ಕಾಲ ಮೃತ ದೇಹ ಒಂಟಿಯಾಗಿ ಬೆಡ್ ಮೇಲೆ ಬಿದ್ದರೂ, ಯಾವುದೇ ವೈದ್ಯರಾಗಲಿ, ಸಿಬ್ಬಂದಿಗಳಾಗಲಿ ಗಮನ ಹರಿಸಿಲ್ಲ. ರೋಗಿ ಸಾವಿಗೆ ಆಸ್ಪತ್ರೆಯ ಸಿಬ್ಬಂದಿಗಳ ನಿರ್ಲಕ್ಷ್ಯವೇ ಕಾರಣವೆಂದು ಮೃತ ವ್ಯಕ್ತಿಯ ಕುಟುಂಬಸ್ಥರು ಸಿಬ್ಬಂದಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ನಂತರ ಹ್ಯೂಮಾನ್ ಐಡ್ ಆರ್ಗನೈಸೇಶನ್ ತಂಡದ ಅಜೀಮ್ ಶೇಕ್ ಮೃತ ವ್ಯಕ್ತಿಯ ಶವವನ್ನು ಬೆಳಿಗ್ಗೆ 11 ಗಂಟೆಗೆ ಪಡೆದು ಕುಟುಂಬಸ್ಥರಿಗೆ ಹಸ್ತಾಂತರಿಸಿದ್ದಾರೆ.