ವಿಜಯಪುರ : ಕೊಲೆ ಪ್ರಕರಣ: ಐವರು ಆರೋಪಿಗಳ ಬಂಧನ
ವಿಜಯಪುರ : ಕಳೆದ ಎಪ್ರಿಲ್ 10 ರಂದು ನಡೆದ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಐವರು ಆರೋಪಿಗಳನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ
ಕಳೆದ ಏ.10 ರಂದು ದರ್ಗಾ ಬಡಾವಣೆಯ ನಿವಾಸಿ ದಸ್ತಗೀರಸಾಬ ಗುಲಾಬಸಾಬ ಮಮದಾಪೂರ ಎಂಬುವವರನ್ನು ಕೊಲೆ ಮಾಡಲಾಗಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿಸಲಾಗಿರುವ ಆರೋಪಿಗಳನ್ನು ಅಣ್ಣಪ್ಪಗೌಡ ಉರ್ಫ ಅಣ್ಣಾರಾಯ ಸಿದ್ದಲಿಂಗಪ್ಪಗೌಡ (58), ಸಂತೋಷ ಗೋವಿಂದ ರಾಠೋಡ (27), ಶ್ಯಾಮರಾಯ ಉರ್ಫ ಶ್ಯಾಮು ರಾಮು ರಾಠೋಡ (25), ವಿಲಾಸ ಪಾಂಡು ರಾಠೋಡ, ಸಂತೋಷ ವೆಂಕು ಚವ್ಹಾಣ ಎಂದು ಗುರುತಿಸಲಾಗಿದೆ.
ಈ ಕುರಿತು ಸುದ್ದಿಗೋಷ್ಠಿಯಲ್ಲಿ ವಿವರಣೆ ನೀಡಿದ ಜಿಲ್ಲಾ ಪೆÇಲೀಸ್ ಅಧೀಕ್ಷಕ ಅನುಪಮ ಅಗರವಾಲ್ ಅವರು,ಹಳೆಯ ದ್ವೇಷದ ಹಿನ್ನೆಲೆಯಲ್ಲಿ ಈ ಕೊಲೆ ಪ್ರಕರಣ ನಡೆದಿರುವುದು ತಿಳಿದು ಬಂದಿದೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಒಂದು ಚಾಕು, 2400 ರೂ. ನಗದು ಜಪ್ತು ಮಾಡಿಕೊಳ್ಳಲಾಗಿದ್ದು, ಆರೋಪಿಗಳಿಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.