ಕಲಬುರಗಿ : ಅಕ್ರಮ ಮರಳು ಸಾಗಾಣಿಕೆಯಲ್ಲಿ ಅಧಿಕಾರಿಗಳು ಶಾಮಿಲು: ಕ್ರಮಕ್ಕೆ ಆಗ್ರಹ

ಕಲಬುರಗಿ : ಜಿಲ್ಲೆಯ ಫೀರೋಜಾಬಾದ ಹಾಗೂ ಜೇವರ್ಗಿ ತಾಲೂಕಿನ ಹುಲ್ಲೂರ ಗ್ರಾಮದ ಭೀಮಾ ನದಿಯಲ್ಲಿನ ಅಕ್ರಮ ಮರಳು ಸಾಗಾಣಿಕೆಗೆ ಕಾನೂನು ಬಾಹಿರ
ರಾಯಲೀಟಿ ಕೊಟ್ಟಂತಹ ಮೋಹನ ಕುಮಾರ
ಉಪನಿರ್ದೇಶಕರು ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಕಲಬುರಗಿ ರವರನ್ನು ಅಮಾನತ್ತು ಮಾಡಿ ಮತ್ತು ಕಲಬುರಗಿ ಜಿಲ್ಲಾಧಿಕಾರಿಗಳನ್ನು ತಕ್ಷಣವೆ ವರ್ಗಾವಣೆ ಮಾಡಬೇಕು ಮತ್ತು ಇಲ್ಲಿ 100 ಕೋಟಿಗೂ ಹೆಚ್ಚು ಮೊತ್ತದ ಅಕ್ರಮ ಮರಳು ಸಾಗಾಣಿಕೆ ಮಾಡಿದ ಬಗ್ಗೆ ಉನ್ನತ ಮಟ್ಟದ ತನಿಖೆಗೆ ಒಳಪಡಿಸುವಂತೆ ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ನಿಯೋಗ ಜಿಲ್ಲಾ ಉಸ್ತುವಾರಿ ಸಚಿವರಿಗೆ ಮನವಿ ಸಲ್ಲಿಸಿ ಒತ್ತಾಯಿಸಲಾಯಿತು.
ಕಲಬುರಗಿ ತಾಲೂಕಿನ ಫೀರೋಜಾಬಾದ ಹಾಗೂ ಜೇವರ್ಗಿ ತಾಲೂಕಿನ ಹುಲ್ಲೂರ್ ಗ್ರಾಮಗಳ ಭೀಮಾ ನದಿಯಲ್ಲಿ ಮರಳು ಸಾಗಾಣಿಕೆ ಹಗಲು ರಾತ್ರಿಯನ್ನದೇ ಸತತವಾಗಿ ಒಂದು ತಿಂಗಳಿಂದ ಕಾನೂನು ಬಾಹಿರವಾಗಿ ಅಕ್ರಮ ಮರಳು ಸಾಗಾಣಿಕೆಯಾಗುತ್ತಿದ್ದೆ. ಮತ್ತು ಸಂಬಂಧ ಪಟ್ಟ ಭೂ ಮತ್ತು ಗಣಿ ವಿಜ್ಞಾನ ಇಲಾಖೆಯ ಉಪ ನಿರ್ದೇಶಕರಿಗೆ ಕೇಳಿದ್ದರೆ ಜಿಲ್ಲಾಧಿಕಾರಿಗಳು ಪರವಾನಿಗೆ ಕೊಟ್ಟಿದ್ದಾರೆ
ಅಂತಾ ಮೌಖಿಕವಾಗಿ ಹೇಳುತ್ತಿದ್ದಾರೆ.
ಕಲಬುರಗಿ ಜಿಲ್ಲಾಧಿಕಾರಿಗಳಿಗೆ ಹಲವಾರು ಬಾರಿ ಮನವಿ ಪತ್ರ ಕೊಟ್ಟಿದರು ಸಹಿತ ಯಾವುದೇ ಕ್ರಮ ತೆಗೆದು ಕೊಂಡಿರುವುದಿಲ್ಲ, ನೆರೆಯ ಮಹರಾಷ್ಟ್ರದ ಸೋಲಾಪೂರ ಜಿಲ್ಲೆಯ 20 ಕ್ಕಿಂತ ಹೆಚ್ಚು ಸಮಾಜ ಘಾತಕ ಶಕ್ತಿಗಳು ಕೈಯಲ್ಲಿ ರೀವಾಲ್ವಾರ್ ಹಿಡಿದುಕೊಂಡು ರಾತ್ರಿ ಹಗಲು ಎನ್ನದೇ ಭೀಮಾ ನದಿಯಲ್ಲಿನ ಮರಳು ಅಕ್ರಮವಾಗಿ ಸಾಗಾಣಿಕೆ ಮಾಡುತ್ತಿದ್ದಾರೆ ಮತ್ತು ಕಲಬುರಗಿ ನಗರ ಪೆÇೀಲಿಸ್ ಆಯುಕ್ತರಿಗೆ, ಉಪ ಪೆÇೀಲಿಸ್ ಆಯುಕ್ತರಿಗೂ ದೂರು ಕೊಟ್ಟರು ಸಹಿತ ಯಾವುದೇ ಕ್ರಮ ತೆಗೆದುಕೊಂಡಿಲ್ಲಾ.
ಅರಿವಿಲ್ಲದ ರಾಜಕಾರಣಿಗಳು ಸೇರಿಕೊಂಡು ಫೀರೋಜಾಬಾದ ಹಾಗೂ ಹುಲ್ಲೂರ ಗ್ರಾಮಗಳ ಹತ್ತಿರ ಇದ್ದ ಭೀಮಾ ನದಿಯಲ್ಲಿ ಅಕ್ರಮ ಮರಳು ಸಾಗಾಣಿಕೆ ಮಾಡುತ್ತಿದಾರೆ. ಇವರಿಗೆ ಪರವಾನಿಗೆ ಕೊಟ್ಟವರು ಯಾರು? ಯಾವ ಮಾನದಂಡದ ಮೇಲೆ ಪರವಾನಿಗೆ ಕೊಟ್ಟಿದ್ದೀರಿ? ಎಂದು ಜಿಲ್ಲಾಧಿಕಾರಿಗಳು ಉತ್ತರ ನೀಡಬೇಕು ಎಂದು ಅವರು ಒತ್ತಾಯಿಸಿದರು.
ಫೀರೋಜಾಬಾದ ಭೀಮಾ ನದಿಯ ದಂಡೆ ಹತ್ತಿರ ಇದ್ದ ಖಾಲಿ ಹೊಲಗಳಲ್ಲಿ 50 ಕೋಟಿಗೂ ಹೆಚ್ಚಿನ ಅಧಿಕ ಮರಳನ್ನು ಸಂಗ್ರಹಿಸಿದ್ದಾರೆ ಮತ್ತು ಅಲ್ಲಿ 100 ಟಿಪ್ಪರಗಳು ಮತ್ತು 6 ಹಿತ್ಯಾಚ್ಚಿಗಳು ಹಗಲು ರಾತ್ರಿಯನ್ನದೇ ಕಾನೂನು ಬಾಹಿರವಾಗಿ ಮರಳು ಸಾಗಾಣಿಕೆ ನಡೆಯುತ್ತಿದ್ದೆ ಮತ್ತು ಸಂಬಂಧಿಸಿದ ಅಧಿಕಾರಿಗಳು ಪರವಾನಿಗೆ ಕೊಟ್ಟಿದ್ದರೆ? ಇಲ್ಲಿಯವರೆಗೆ ಸಿಸಿ ಕ್ಯಾಮರವನ್ನು ಅಳವಡಿಸಿಲ್ಲಾ ಮತ್ತು ಸಂಬಂಧಿಸಿದ ಯಾವುದೇ ಅಧಿಕಾರಿಗಳು ಸ್ಥಳದಲ್ಲಿ ಇರುವುದಿಲ್ಲ. ಅಲ್ಲಿ ಇರುವವರು ಸಮಾಜ ಘಾತಕ ಶಕ್ತಿಗಳೆ ಹೊರೆತು ಸಂಬಂಧ ಪಟ್ಟ ಅಧಿಕಾರಿಗಳು ಯಾರೂ ಇರುವುದಿಲ್ಲಾ.
ಕಲಬುರಗಿ ನಗರ ಪೆÇೀಲಿಸ್ ಆಯುಕ್ತರ ವಲಯದ ಉನ್ನತ ಮಟ್ಟದ ಪೆÇೀಲಿಸ್ ಅಧಿಕಾರಿಗಳು ಭೂ ಮತ್ತು ಗಣಿ ವಿಜ್ಞಾನ ಇಲಾಖೆಯ ಉಪ ನಿರ್ದೇಶಕರು ಮತ್ತು ಸಂಬಂಧ ಪಟ್ಟ ಅಧಿಕಾರಿಗಳು ಇದರಲ್ಲಿ ಶಾಮಿಲಾಗಿ ಅಕ್ರಮ ಮರಳುಗಾರಿಗೆ ನಡೆಯುತ್ತಿದ್ದೆ ಎಂದು ಮೇಲ್ನೋಟಕ್ಕೆ ಕಂಡು ಬರುತ್ತದೆ.
ಕಲಬುರಗಿ ತಾಲೂಕಿನ ಅವರಾದ (ಕೆ), ಹಸ್ತಿನಾಪೂರ ಗ್ರಾಮಗಳು ಭೀಮಾ ನದಿಯ ದಂಡೆಗೆ ಬರುವ ಗ್ರಾಮಗಳು ಆಗಿದ್ದು, ಕಳೆದ ಏ.19, 2021 ರಂದು ಕಲಬುರಗಿ ತಾಲೂಕಿನ ತಹಶೀಲ್ದಾರ ಸಾಹೇಬರಾದ ಪ್ರಕಾಶ ಕುದರಿ ರವರು ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿಯ ಜಿಲ್ಲಾ ಸಂ. ಸಂಚಾಲಕರಾದ ಭೀಮಶಾ ಖನ್ನಾ ವೀರಶೈವ ಸಮಾಜದ ಯುವ ಮುಖಂಡರಾದ, ಭೂಕಾಂತ
ಪಾಟೀಲ್, ಇವರ ಮಾಹಿತಿಯ ಮೇರೆಗೆ ಕಲಬುರಗಿ ತಹಶೀಲ್ದಾರವರು ಅಕ್ರಮ ಮರಳು ಸಾಗಾಣಿಕೆ
ಮಾಡುತ್ತಿದ್ದ ಮೂರು ಬೋಟಗಳು, ಮತ್ತು ಎರಡು ಹಿತ್ಯಾಚ್ಚಿಗಳು ಸೀಜಾ ಮಾಡಿ ಫರಹತಾಬಾದ
ಠಾಣೆಗೆ ಒಪ್ಪಿಸಿದರು ಸಹಿತ ಇಲ್ಲಿಯವರೆಗೆ ಉಪ ನಿರ್ದೇಶಕರು ಭೂ ಮತ್ತು ಗಣಿ ವಿಜ್ಞಾನ ಇಲಾಖೆ
ಅಧಿಕಾರಿಗಳು ಸೀಜ್ ಮಾಡಿದ ಮರಳು ತಮ್ಮ ಹತೋಟಿಗೆ ತೆಗೆದುಕೊಂಡಿಲ್ಲಾ ಮತ್ತು ಯಾವುದೇ ಇಲಾಖೆಗೆ ಒಪ್ಪಿಸಿರುವುದಿಲ್ಲಾ ಇದನ್ನು ನೋಡಿದ್ದರೆ ಮೋಹನ ಕುಮಾರ ಉಪ ನಿರ್ದೇಶಕರು ಭೂ ಮತ್ತು ಗಣಿ ಇಲಾಖೆ ಅಧಿಕಾರಿಗಳು ಸಂಪೂರ್ಣ ಅಕ್ರಮ ಮರಳು ಸಾಗಾಣಿಕೆಗೆ ಕುಮ್ಮಕ ನೀಡುತ್ತಿದ್ದಾರೆ ಎಂದು ಕಂಡು ಬರುತ್ತದೆ.
ಕಲಬರಗಿ ತಾಲೂಕಿನ ಫರಹತಾಬಾದ ಪೆÇೀಲಿಸ್ ಠಾಣೆ ಗುನ್ನೆ ನಂ: 18/2021 ದಿನಾಂಕ: 21-03-2021 ಅಕ್ರಮ ಮರಳು ಸಾಗಾಣಿಕೆ ಬಗ್ಗೆ ಕೆಸ್ಸು ದಾಖಲಾಗಿ ಒಂದು ತಿಂಗಳು ಗತ್ತಿಸಿದ್ದರು ಇಲ್ಲಿಯತನಕ ಫರಹತಾಬಾದ ಪೆÇೀಲಿಸ್ ಠಾಣೆಯ ಇನ್ಸಪೇಕ್ಟರವರು ಯಾವುದೇ ಆರೋಪಿಗಳನ್ನು ಬಂಧಿಸಿರುವುದಿಲ್ಲ, ಮತ್ತು ತಮ್ಮ ಪೆÇೀಲಿಸ್ ಠಾಣೆಯ ವ್ಯಾಪ್ತಿಯ ಫೀರೋಜಾಬಾದ ಗ್ರಾಮದ ಭೀಮಾ
ನದಿಯ ದಂಡೆಯ ಹತ್ತಿರ ರಾತ್ರಿ ಹಗಲು ಎನ್ನದೇ ಸಮಾಜ ಘಾತಕ ಶಕ್ತಿಗಳು ಇರುವುದನ್ನು ಮಾಹಿತಿ ಇದ್ದರು ಸಹಿತ ಇಲ್ಲಿಯತನಕ ಸಂಬಂಧ ಪಟ್ಟ ಪೆÇೀಲಿಸ್ ಅಧಿಕಾರಿಗಳು ಕಾನೂನು ಕ್ರಮ ತೆಗೆದುಕೊಂಡಿರುವುದಿಲ್ಲ.
ಸರಕಾರ ಕೋವಿಡ್ ಮಹಾಮಾರಿಯಿಂದ ಮುಕ್ತರಾಗ ಬೇಕು ಮತ್ತು ಸಮಾಜಿಕ ಅಂತರ ಕಾಪಾಡಬೇಕು, ಹೊರಗಡೆಗೆ ಯಾರು ಬರಬಾರದು ಎಂದು ಜಿಲ್ಲಾಧಿಕಾರಿಗಳು ಕಟ್ಟು ನಿಟ್ಟಿನ ಆದೇಶ ಮಾಡಿದ್ದರು, ಫೀರೋಜಾಬಾದ ಹಾಗೂ ಹುಲ್ಲೂರ ಗ್ರಾಮಗಳ ಭೀಮಾ ನದಿಯ ದಂಡೆಯ ಹತ್ತಿರ
ರಾತ್ರಿ ಸುಮಾರು 50-60 ಜನ ಇರುತ್ತಾರೆ. ಇವರಿಗೆ ಕೋವಿಡ್ ನಿಯಮವಳಿ ಅನ್ವಯಿಸುವುದಿಲ್ಲವೇ ಎಂದು ಸಂಘಟನೆಯ ಮುಖಂಡರಾದ ಭೀಮಶಾ ಖನ್ನಾ, ಮಹಾದೇವ ಕೊಳಕುರ, ಶ್ರೀಮಂತ ಸುಲೇಕರ್, ನಾಗಪ್ಪ ವಳಕೇರಿ, ಬಾಬು ಪರಸೋನ, ಧರ್ಮಣ್ಣ ಇಟಗಾ, ಭೀಮರಾವ ಪ್ಯಾಟಿ, ಭೂಕಾಂತ ಪಾಟೀಲಲ ಅವರು ಪ್ರಶ್ನಿಸಿದ್ದಾರೆ.

S S Benakanalli

Founder , Director Of KK NEWS KANNADA _ S S BENAKANAHALLI

Leave a Reply

Your email address will not be published. Required fields are marked *