ಚಿಂಚೋಳಿ : ದಿ.ವೈಜನಾಥ ಪಾಟೀಲ ಸಮಾಧಿಗೆ ಭೇಟಿ ನೀಡಿದ ಸಚಿವರು
ಚಿಂಚೋಳಿ : ಹಿಂದುಳಿದ ಕಲ್ಯಾಣ ಕರ್ನಾಟಕ ಭಾಗಕ್ಕೆ ಸಂವಿಧಾನದ ಕಲಂ 371 (ಜೆ)ತಿದ್ದುಪಡಿ ಸೌಲಭ್ಯ ಕೊಡಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ, ಮಾಜಿ ಸಚಿವರಾದ ದಿ. ವೈಜನಾಥ್ ಪಾಟೀಲ್ ಅವರ ಸಮಾಧಿಯ ಸ್ಥಳಕ್ಕೆ ಗಣಿ ಮತ್ತು ಭೂವಿಜ್ಞಾನ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಮುರುಗೇಶ್ .ಅರ್. ನಿರಾಣಿ ಅವರು ಭೇಟಿ ಕೊಟ್ಟು ನಮನ ಸಲ್ಲಿಸಿದರು.
ಈ ಸಂದರ್ಭದಲ್ಲಿ. ಲೋಕಸಭಾ ಸದಸ್ಯರಾದ ಡಾ. ಉಮೇಶ ಜಾಧವ್. ವಿಧಾನಪರಿಷತ್ ಸದಸ್ಯರಾದ ಶಶಿಲ್ ನಮೋಶಿ. ಜಿಲ್ಲಾ ಬಿಜೆಪಿ ಪಕ್ಷದ ಅಧ್ಯಕ್ಷರಾದ ಶಿವರಾಜ್ ಪಾಟೀಲ. ಅಮರನಾಥ ಪಾಟೀಲ್. ಡಾ. ವಿಕ್ರಮ್ ಪಾಟೀಲ್. ಗೌತಮ್ ಪಾಟೀಲ್. ಡಾ. ಬಸವೇಶ್ವರ ಪಾಟೀಲ್. ಬಿಜೆಪಿ ಪಕ್ಷ ತಾಲೂಕ ಅಧ್ಯಕ್ಷರಾದ ಸಂತೋಷ್ ಗಡಂತಿ. ಮತ್ತು ಅನೇಕ ಬಿಜೆಪಿ ಪಕ್ಷದ ಮುಖಂಡರು ಉಪಸ್ಥಿತರಿದ್ದರು.