ಚಿಂಚೋಳಿ : ಮೇರಾ ಬೂತ್ ಕೋರೊನಾ ಮುಕ್ತ
ಚಿಂಚೋಳಿ : ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಎನ್ ರವಿಕುಮಾರ್ ರವರ ಸೂಚನೆ ಮೇರೆಗೆ ಮಂಡಲದ ಎಲ್ಲಾ ಬೂತಗಳ ಪಕ್ಷದ ಅಧ್ಯಕ್ಷರುಗಳು ಕಾರ್ಯಕರ್ತ ಮಿತ್ರರು ಇಂದಿನಿಂದ ಮೇರಾ ಬೂತ್ ಕೋರೊನಾ ಮುಕ್ತ್ ಮಾಡುವ ಸಂಕಲ್ಪವಾಗಿದೆ ಎಂದು ಬಿಜೆಪಿ ಪಕ್ಷದ ತಾಲೂಕ ವಕ್ತಾರರಾದ ಶ್ರೀಮಂತ್ ಕಟ್ಟಿಮನಿ ಇಂದಿಲ್ಲಿ ಹೇಳಿದ್ದಾರೆ.
ಕ್ಷೇತ್ರದ ಶಾಸಕರಾದ ಡಾ ಅವಿನಾಶ್ ಉಮೇಶ್ ಜಾಧವ್ ಸಂಸದರಾದ ಡಾ ಉಮೇಶ್ ಜಾಧವ್ ಮತ್ತು ಭಗವಂತ ಖುಬಾ ಮತ್ತು ಜಿಲ್ಲಾ ಅಧ್ಯಕ್ಷರಾದ ಶಿವರಾಜ್ ರದ್ದೆವಾಡಗಿ, ಮಂಡಲದ ಅಧ್ಯಕ್ಷರಾದ ಸಂತೋಷ್ ಗಡಂತಿ ಯವರ ಮಾರ್ಗದರ್ಶನದಲ್ಲಿ ಈ ಅಭಿಯಾನವನ್ನು ಪ್ರಾರಂಭಿಸಬೆಕೆಂದು ತಾವು ಮನವಿ ಮಾಡುತ್ತೇನೆ ಎಂದರು.
ಇಂದು ದೇಶ ಕೋರೋನಾ ಮಹಾಮಾರಿಯಿಂದ ಗಂಡಾಂತರದಲ್ಲಿದೆ ಇದೊಂದು ಅಳೀಲು ಸೇವೆ ಎಂದು ಬಿಜೆಪಿ ಪಕ್ಷದ ತಾಲೂಕ ವಕ್ತಾರರಾದ ಶ್ರೀಮಂತ್ ಕಟ್ಟಿಮನಿ ಅವರು ಪತ್ರಿಕಾ ಪ್ರಕಟಣೆ ಮೂಲಕ ತಿಳಿಸಿದ್ದಾರೆ.
ಹಾಗೂ ಚಿಂಚೋಳಿಯ ಬಿಜೆಪಿ ಪಕ್ಷದ ವತಿಯಿಂದ ಎಲ್ಲಾ ಕಾರ್ಯಕರ್ತರು, ಕೋರೋನಾ ಮಹಾಮಾರಿಯಿಂದ ಜನರು ಬಳಲುತ್ತಿದ್ದಾರೆ. ಆದಷ್ಟು ಕೋರೋನಾ ಸೋಂಕಿತ ಜನರಿಗೆ ರಕ್ಷಣೆ ಮಾಡುವ ಕೆಲಸವನ್ನು ಚಿಂಚೋಳಿ ಬಿಜೆಪಿ ಘಟಕ ಮಾಡುತ್ತೇವೆ ಎಂದು ಅವರು ಹೇಳಿದರು.