Television Association : ಲಾಕ್ ಡೌನ್ ಹಿನ್ನೆಲೆ ಸಿನಿಮಾ, ಬಿಗ್ ಬಾಸ್, ಸೀರಿಯಲ್ ಶೂಟಿಂಗ್ ಬಂದ್..!
ಬೆಂಗಳೂರು : ಕರ್ನಾಟಕದಾದ್ಯಂತ ಮೇ 10ರಿಂದ 24ರವರೆಗೆ ಲಾಕ್ ಡೌನ್ ಮಾಡಬೇಕೆಂಬ ಆದೇಶಕ್ಕೆ ತಾವು ಸಿದ್ಧವಿರುವುದಾಗಿ ಟೆಲಿವಿಷನ್ ಅಸೋಸಿಯೇಷನ್ ತಿಳಿಸಿದೆ.
ಮೇ 10ರಿಂದ 14 ದಿನಗಳ ಕಾಲ ಲಾಕ್ ಡೌನ್(Lockdown) ಇರುವ ಹಿನ್ನೆಲೆಯಲ್ಲಿ ಧಾರಾವಾಹಿ, ಸಿನಿಮಾ ಮತ್ತು ರಿಯಾಲಿಟಿ ಷೋಗಳ ಚಿತ್ರೀಕರಣವನ್ನು ಸಂಪೂರ್ಣವಾಗಿ ನಿಲ್ಲಿಸುವಂತೆ ಸರ್ಕಾರ ಆದೇಶಿಸಿದೆ. ಈ ಆದೇಶಕ್ಕೆ ನಮ್ಮ ಬೆಂಬಲವಿದೆ.
ನಾವು ಚಿತ್ರೀಕರಣ ಮಾಡುವುದಿಲ್ಲ. ಕೊರೋನಾದಿಂದಾಗಿ ನಮ್ಮ ಉದ್ಯಮದ ಹಲವರನ್ನು ನಾವು ಕಳೆದುಕೊಂಡಿದ್ದೇವೆ. ಕಲಾವಿದರ ನಿಧನ ನಮಗೂ ನೋವು ತಂದಿದೆ. ಹಾಗಾಗಿ ಯಾವುದೇ ಶೂಟಿಂಗ್ ಗೆ ಅನುಮತಿ ನೀಡುವುದಿಲ್ಲ ಎಂದು ಅಸೋಸಿಯೇಷನ್(Karnataka Television Association) ತಿಳಿಸಿದೆ.
ಒಂದು ವೇಳೆ ಯಾರಾದರೂ ಕದ್ದು ಮುಚ್ಚಿ ಶೂಟಿಂಗ್(Shooting) ಮಾಡಿರುವುದು ತಿಳಿದುಬಂದರೆ ಅವರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳುತ್ತೇವೆ ಎಂದು ಟೆಲಿವಿಷನ್ ಅಸೋಸಿಯೇಷನ್ ಅಧ್ಯಕ್ಷ ಶಿವಕುಮಾರ್ ಎಸ್ ವಿ ಹೇಳಿದ್ದಾರೆ.