Vehicle Re-Registration : ಕೇಂದ್ರ ಸಾರಿಗೆ ಇಲಾಖೆಯಿಂದ ಸಿಹಿ ಸುದ್ದಿ : ವಾಹನ ಮಾಲೀಕತ್ವದ ವರ್ಗಾವಣೆಯಲ್ಲಿ ಮಹತ್ವದ ಬದಲಾವಣೆ!
ನವದೆಹಲಿ : ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯವು ನೋಂದಣಿ ಪ್ರಮಾಣಪತ್ರದಲ್ಲಿ ಒಬ್ಬ ವ್ಯಕ್ತಿಯನ್ನು ನಾಮನಿರ್ದೇಶನ ಮಾಡಲು ವಾಹನದ ಮಾಲೀಕರಿಗೆ ಅನುಕೂಲವಾಗುವಂತೆ ಕೇಂದ್ರ ಮೋಟಾರು ವಾಹನ ನಿಯಮಗಳು, 1989 ರಲ್ಲಿ ಕೆಲವು ಬದಲಾವಣೆಗಳನ್ನು ಮಾಡಿದೆ. ಮಾಲೀಕರ ಮರಣದ ಸಂದರ್ಭದಲ್ಲಿ ಮೋಟಾರು ವಾಹನವನ್ನು ನಾಮನಿರ್ದೇಶಿತ ವ್ಯಕ್ತಿಯ ಹೆಸರಿನಲ್ಲಿ ನೋಂದಾಯಿಸಲು ಅಥವಾ ವರ್ಗಾಯಿಸಲು ಇದು ಸಹಾಯ ಮಾಡುತ್ತದೆ.
ಮಾಲೀಕರು ವಾಹನಗಳ ನೋಂದಣಿ(Vehicle Re-Registration) ಸಮಯದಲ್ಲಿ ನಾಮನಿರ್ದೇಶಿತರ ಹೆಸರನ್ನು ಹಾಕಬಹುದು. ಈ ಪ್ರಕ್ರಿಯೆಯು ದೇಶಾದ್ಯಂತ ತೊಡಕಾಗಿದೆ ಮತ್ತು ಏಕರೂಪವಾಗಿಲ್ಲ. ಅಧಿಸೂಚಿತ ನಿಯಮಗಳ ಪ್ರಕಾರ, ನಾಮನಿರ್ದೇಶಿತರನ್ನು ಉಲ್ಲೇಖಿಸಿದಲ್ಲಿ, ವಾಹನದ ಮಾಲೀಕರು ನಾಮನಿರ್ದೇಶಿತನ ಗುರುತಿನ ಪುರಾವೆಯನ್ನು ಸಲ್ಲಿಸಬೇಕು.
ವಾಹನದ ಮಾಲೀಕರು ಸಾವಿಗೀಡಾದ ಸಂದರ್ಭದಲ್ಲಿ, ನೋಂದಣಿ ಪ್ರಮಾಣಪತ್ರದಲ್ಲಿ ವಾಹನ ಮಾಲೀಕರಿಂದ ನಾಮನಿರ್ದೇಶನಗೊಂಡ ವ್ಯಕ್ತಿಯ ಹೆಸರಿನಲ್ಲಿ ನೋಂದಣಿ(Registration) ಮಾಡಬಹುದು. ಮೋಟಾರು ವಾಹನದ ಮಾಲೀಕನ ಮರಣದಿಂದ ಮೂರು ತಿಂಗಳ ಅವಧಿಗೆ ವಾಹನವನ್ನು ನಾಮಿನಿಯು ಬಳಸಬಹುದು.ಬಳಿಕ ಸಾಮಾನ್ಯ ಪ್ರಕ್ರಿಯೆ ಮೂಲಕ ವಾಹನದ ಮಾಲೀಕತ್ವದ ವರ್ಗಾವಣೆಗೆ ನಾಮಿನಿ ಅರ್ಜಿ ಸಲ್ಲಿಸಬಹುದು ಎಂದು ಅಧಿಸೂಚನೆಯಲ್ಲಿ ತಿಳಿಸಲಾಗಿದೆ. ವಿಚ್ಛೇದನ, ಆಸ್ತಿಯಲ್ಲಿ ಪಾಲಾದ ಸಂದರ್ಬದಲ್ಲಿ ನಾಮಿನಿಯ ಹೆಸರಿನಲ್ಲಿ ಬದಲಾವಣೆ ಮಾಡಲು ಅವಕಾಶ ಇದೆ.
ನೋಂದಣಿ ಪ್ರಮಾಣಪತ್ರದಲ್ಲಿ ಒಬ್ಬ ವ್ಯಕ್ತಿಯನ್ನು ನಾಮನಿರ್ದೇಶನ ಮಾಡಲು ವಾಹನದ ಮಾಲೀಕರಿಗೆ ಅನುಕೂಲವಾಗುವಂತೆ ಕೇಂದ್ರ ಮೋಟಾರು ವಾಹನಗಳ ನಿಯಮ(Motor Vehicles Act)ಗಳು, 1989 ಕ್ಕೆ ತಿದ್ದುಪಡಿ ತರಲು ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯವು ನವೆಂಬರ್ 27, 2020 ರಂದು ಪ್ರಸ್ತಾಪಿಸಿತ್ತು.