ಕಲಬುರಗಿಯಲ್ಲಿ ಕೊರೊನಾ ಕರ್ಫ್ಯೂ ಪುಲ್ ಟೈಟ್ : ಕಟ್ಟಡ ಕಾರ್ಮಿಕರಿಗೂ ಇಲ್ಲ ಅನುಮತಿ

ರಾಜ್ಯ ಸರ್ಕಾರದ ಆದೇಶದಂತೆ ನಾಳೆಯಿಂದ ಕಠಿಣ ಕರ್ಫ್ಯೂ ನಿಯಮಗಳು ಜಾರಿಯಾಗಲಿವೆ. ಕಲಬುರಗಿಯಲ್ಲಿ ಈಗಾಗಲೇ ಸೆ. 144 ಜಾರಿಗೊಳಿಸಿ ನಿಷೇಧಾಜ್ಞೆ ಹೊರಡಿಸಲಾಗಿದೆ..

 

ಕಲಬುರಗಿ : ಕೋವಿಡ್ ಎರಡನೇ ಅಲೆ ಕಟ್ಟಿಹಾಕಲು ನಾಳೆ ಬೆಳಗ್ಗೆ 6 ಗಂಟೆಯಿಂದ ಕೋವಿಡ್‌ ಕರ್ಫ್ಯೂ ಹೇರಿರುವ ಪ್ರಯುಕ್ತ ಜಿಲ್ಲೆಯಲ್ಲಿ ಸೆಕ್ಷನ್‌ 144 ನಿಷೇಧಾಜ್ಞೆ ಜಾರಿಗೊಳಿಸಿ ಜಿಲ್ಲಾಧಿಕಾರಿ ವಿ.ವಿ.ಜ್ಯೋತ್ಸ್ನಾ ಆದೇಶಿಸಿಸಿದ್ದಾರೆ.

ಜಿಲ್ಲೆಯಾದ್ಯಂತ ಮೇ 10ರ ಬೆಳಗ್ಗೆ 6 ರಿಂದ ಮೇ-24ರ ಬೆಳಗ್ಗೆ 6 ಗಂಟೆವರೆಗೆ ಮಾರ್ಗಸೂಚಿಯಲ್ಲಿನ ಷರತ್ತಿಗೊಳಪಟ್ಟು ಜಿಲ್ಲೆಯಾದ್ಯಂತ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ.

* 14 ದಿನ ಖಾಸಗಿ ವಾಹನಗಳು ಅನಗತ್ಯ ಓಡಾಡುವಂತಿಲ್ಲ, ಓಡಾಡಿದ್ರೆ ಸೀಜ್

* ಸಿಟಿಯಲ್ಲಿ ಆಟೋ ಸಂಚಾರಕ್ಕೆ ಅನುಮತಿ ಇರುವುದಿಲ್ಲ

* ಅಗತ್ಯ ಸೇವೆಗಳಿಗೆ ಸಂಬಂಧಿಸಿದಂತೆ ಐಡಿ ಕಾರ್ಡ್ ಪಡೆದವರಿಗೆ ಮಾತ್ರ ಓಡಾಟಕ್ಕೆ ಅನುಮತಿ.

* ಮನೆಗೆ ಬೇಕಾಗುವ ಅಗತ್ಯ ವಸ್ತುಗಳನ್ನ ಸ್ಥಳೀಯವಾಗಿ ಖರೀದಿಸಬೇಕು. ಮಾರುಕಟ್ಟೆಗೆ, ಹೋಲ್‌ಸೇಲ್ ಖರೀದಿಗೆ ಅನುಮತಿ ಇರುವುದಿಲ್ಲ. ರಿಟೇಲರ್ ಮಾತ್ರ ಮಾರುಕಟ್ಟೆಗೆ ಹೋಗಬೇಕು.

* ಹಣ್ಣು, ತರಕಾರಿ ಮಾರಾಟಕ್ಕೆ ನಿತ್ಯ ಬೆಳಗ್ಗೆ 6 ರಿಂದ ಸಾಯಂಕಾಲ 6 ಗಂಟೆವರೆಗೆ ಅನುಮತಿ ಇದೆ.

* ನಗರದಲ್ಲಿ ಪೊಲೀಸ್ ಸಿಬ್ಬಂದಿ ಹಾಗೂ ಹೋಂ ಗಾರ್ಡ್ ಸೇರಿ 1000 ಸಿಬ್ಬಂದಿ ಬಂದೋಬಸ್ತ್​ ಕಾರ್ಯದಲ್ಲಿ ತೊಡಗಲಿದ್ದಾರೆ.

* ಜಿಲ್ಲೆಯ ಎಲ್ಲ ಗಡಿಭಾಗಗಳನ್ನು ಬಂದ್ ಮಾಡಲಾಗುತ್ತದೆ. ಅನಗತ್ಯವಾಗಿ ಜಿಲ್ಲೆ ಪ್ರವೇಶ ಮಾಡುವ ಎಲ್ಲ ವಾಹನ ಸೀಜ್ ಮಾಡಲಾಗುತ್ತೆ.

* ಕಟ್ಟಡ ಕಾರ್ಮಿಕರಿಗೆ ಅನುಮತಿ ನೀಡುವಂತೆ ಸರ್ಕಾರದಿಂದ ಯಾವುದೇ ಕ್ಲಿಯರ್ ಮಾಹಿತಿ ಲಭ್ಯವಾಗಿಲ್ಲ. ಹಾಗಾಗಿ, ಸರ್ಕಾರದಿಂದ ಸ್ಪಷ್ಟತೆ ಸಿಗುವವರೆಗೆ ಕಟ್ಟಡ ಕಾರ್ಮಿಕರಿಗೂ ನಿಷೇಧ ಹೇರಲಾಗಿದೆ ಎಂದು ಪೊಲೀಸ್ ಆಯುಕ್ತ ಎನ್ ಸತೀಶ್​ ಕುಮಾರ್​ ತಿಳಿಸಿದ್ದಾರೆ.

S S Benakanalli

Founder , Director Of KK NEWS KANNADA _ S S BENAKANAHALLI

Leave a Reply

Your email address will not be published. Required fields are marked *