ಇಲ್ಲಿ ಅಡ್ಮಿಟ್ ಆದರೆ ಹೆಣವಾಗಿಯೇ ಹೊರ ಬರುವ ಸ್ಥಿತಿ ಇದೆ.. ಜಿಮ್ಸ್ ಆಸ್ಪತ್ರೆ ವಿರುದ್ಧ ಸೋಂಕಿತ, ರೋಗಿಗಳ ಸಂಬಂಧಿಕರು ಕಿಡಿ.
ಆಸ್ಪತ್ರೆ ಒಳಗೆ ಸಂಬಂಧಿಗಳಿಗೆ ಬಿಡುತ್ತಿಲ್ಲ, ಒಳಗಡೆ ಬಿಟ್ಟರೆ ಒಳಗೆ ನಡೆಯುವ ಎಲ್ಲಾ ಅಂಶಗಳು ಹೊರ ಬರಬಹುದು ಎಂದು ನಗರದ ಗುಂಡಾ ಪಡೆಯನ್ನು ಬೌನ್ಸರ್ ಎಂದು ನೇಮಕ ಮಾಡಿ ಆಸ್ಪತ್ರೆ ಬಾಗಿಲಿಗೆ ಕಾವಲು ಹಾಕಲಾಗಿದೆ.
ಕಲಬುರಗಿ : ಜಿಮ್ಸ್ ಆಸ್ಪತ್ರೆಯಲ್ಲಿ ಕೋವಿಡ್ ಸೋಂಕಿತರನ್ನು ಕೇರ್ ಮಾಡುವವರೇ ಇಲ್ಲ. ಇಲ್ಲಿ ಅಡ್ಮಿಟ್ ಆದರೆ ಹೆಣವಾಗಿಯೇ ಹೊರಗಡೆ ಬರುವ ಪರಿಸ್ಥಿತಿ ಇದೆ ಎಂದು ಸೋಂಕಿತರ ಸಂಬಂಧಿಗಳು ಆಸ್ಪತ್ರೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಜಿಮ್ಸ್ ಆಸ್ಪತ್ರೆಯಲ್ಲಿ ಬೆಡ್ ಖಾಲಿ ಇವೆ. ಆದರೂ ಖಾಲಿ ಇಲ್ಲ ಎನ್ನುತ್ತಿದ್ದಾರೆ. ವೈದ್ಯರಾಗಲಿ ಅಥವಾ ನರ್ಸ್ ಆಗಲಿ ಯಾರೊಬ್ಬರೂ ಬಂದು ಆರೋಗ್ಯ ವಿಚಾರಿಸುವುದಿಲ್ಲ ಎಂದು ರೋಗಿಯೊಬ್ಬ ಆರೋಪಿಸಿದ್ದ.
ಈ ಬಗ್ಗೆ ಆಸ್ಪತ್ರೆ ಒಳಗಡೆಯಿಂದ ವಿಡಿಯೋ ಮಾಡಿ ಹಾಕಿದ್ದ. ಅದಾದ ಕೂಡಲೇ ರೊಚ್ಚಿಗೆದ್ದ ರೋಗಿಗಳ ಸಂಬಂಧಿಗಳು, ಆಸ್ಪತ್ರೆ ಪ್ರವೇಶಕ್ಕೆ ಮುಂದಾಗಿದ್ದಾರೆ. ಈ ವೇಳೆ ಬೌನ್ಸರ್ಗಳು ತಡೆದಿದ್ದಾರೆ.
ಜಿಮ್ಸ್ ಆಸ್ಪತ್ರೆ ವಿರುದ್ಧ ರೋಗಿಗಳ ಸಂಬಂಧಿಕರ ಆಕ್ರೋಶ..
ಕೊರೊನಾ ಪೀಡಿತರಾಗಿ ಆಸ್ಪತ್ರೆ ಸೇರುವ ರೋಗಿಗಳು ಹೆಣವಾಗಿ ಹೊರ ಬರುತ್ತಿದ್ದಾರೆ. ಇದಕ್ಕೆ ಇಲ್ಲಿನ ವೈದ್ಯರ ನಿರ್ಲಕ್ಷ್ಯವೇ ಕಾರಣ. ಯಾರೊಬ್ಬರೂ ಕೂಡ ಚಿಕಿತ್ಸೆ ನೀಡುತ್ತಿಲ್ಲ, ಸಹಾಯಕರು ದಿನಕ್ಕೆ ಒಂದು ಬಾರಿ ಗುಳಿಗೆ ನೀಡಿ ಹೋದರೆ ಮಾರನೆ ದಿನವೇ ಒಳಗೆ ಬರುತ್ತಿದ್ದಾರೆ.
ರೋಗಿ ನರಳಾಡಿ ಸತ್ತರೂ ವೈದ್ಯರು ತಿರುಗಿ ನೋಡುತ್ತಿಲ್ಲ. ಸತ್ತ ನಂತರವೂ ಮೃತದೇಹಗಳು ಒಂದೊಂದು ದಿನ ಬೆಡ್ ಮೇಲೆಯೇ ಇರುತ್ತಿವೆ
ಆಸ್ಪತ್ರೆ ಒಳಗೆ ಸಂಬಂಧಿಗಳಿಗೆ ಬಿಡುತ್ತಿಲ್ಲ, ಒಳಗಡೆ ಬಿಟ್ಟರೆ ಒಳಗೆ ನಡೆಯುವ ಎಲ್ಲಾ ಅಂಶಗಳು ಹೊರ ಬರಬಹುದು ಎಂದು ನಗರದ ಗುಂಡಾ ಪಡೆಯನ್ನು ಬೌನ್ಸರ್ ಎಂದು ನೇಮಕ ಮಾಡಿ ಆಸ್ಪತ್ರೆ ಬಾಗಿಲಿಗೆ ಕಾವಲು ಹಾಕಲಾಗಿದೆ.
ಪೊಲೀಸರನ್ನು ನೇಮಿಸುವ ಬದಲಾಗಿ ಬೌನ್ಸರ್ಗಳನ್ನು ನೇಮಿಸಿದ್ದು ಯಾಕೆ ಎಂದು ಸಾರ್ವಜನಿಕರು ಪ್ರಶ್ನಿಸಿದ್ದಾರೆ.