Sun Transit 2021: ಅಕ್ಷಯ ತೃತಿಯಾ ದಿನ ಸೂರ್ಯನ ರಾಶಿ ಪರಿವರ್ತನೆಯಿಂದ ಮೂರು ಗ್ರಹಗಳ ಯೋಗ, ಯಾರಿಗೆ ಲಾಭ? ಯಾರಿಗೆ ನಷ್ಟ?

Akashay Tritiyaa 2021: ಜ್ಯೋತಿಷ್ಯ ಶಾಸ್ತ್ರದ (Astrology) ಪ್ರಕಾರ, ಸೂರ್ಯ ಮೇ 14 ರಂತೂ ಅಂದರೆ ಅಕ್ಷಯ ತೃತಿಯಾ (Akshaya Tritiya 2021 ) ದಿನ ತನ್ನ ರಾಶಿಯನ್ನು (Zodiac Sign) ಪರಿವರ್ತಿಸಲಿದ್ದಾನೆ ಎನ್ನಲಾಗಿದೆ. ಈ ದಿನ ಸೂರ್ಯ ಮೇಷರಾಶಿಯಿಂದ ವೃಷಭ ರಾಶಿಗೆ ಪ್ರವೆಶಿಸಲಿದ್ದಾನೆ

  • Akashay Tritiyaa 2021: ಜ್ಯೋತಿಷ್ಯ ಶಾಸ್ತ್ರದ (Astrology) ಪ್ರಕಾರ, ಸೂರ್ಯ ಮೇ 14 ರಂತೂ ಅಂದರೆ ಅಕ್ಷಯ ತೃತಿಯಾ (Akshaya Tritiya 2021 ) ದಿನ ತನ್ನ ರಾಶಿಯನ್ನು (Zodiac Sign) ಪರಿವರ್ತಿಸಲಿದ್ದಾನೆ ಎನ್ನಲಾಗಿದೆ. ಈ ದಿನ ಸೂರ್ಯ ಮೇಷರಾಶಿಯಿಂದ ವೃಷಭ ರಾಶಿಗೆ ಪ್ರವೆಶಿಸಲಿದ್ದಾನೆ.

Akashay Tritiyaa 2021: ಜ್ಯೋತಿಷ್ಯ ಶಾಸ್ತ್ರದ (Astrology) ಪ್ರಕಾರ, ಸೂರ್ಯ ಮೇ 14 ರಂತೂ ಅಂದರೆ ಅಕ್ಷಯ ತೃತಿಯಾ (Akshaya Tritiya 2021 ) ದಿನ ತನ್ನ ರಾಶಿಯನ್ನು (Zodiac Sign) ಪರಿವರ್ತಿಸಲಿದ್ದಾನೆ ಎನ್ನಲಾಗಿದೆ. ಈ ದಿನ ಸೂರ್ಯ ಮೇಷರಾಶಿಯಿಂದ ವೃಷಭ ರಾಶಿಗೆ ಪ್ರವೆಶಿಸಲಿದ್ದಾನೆ. ಈ ರಾಶಿಯಲ್ಲಿ ಸೂರ್ಯ (Sun Transit 2021) ಜೂನ್ 15ರವರೆಗೆ ಇರಲಿದ್ದಾನೆ. ಇದಕ್ಕೂ ಮೊದಲು ಬುಧ ಹಾಗೂ ಶುಕ್ರರು ಈಗಾಗಲೇ ವೃಷಭ ರಾಶಿಗೆ ಪ್ರವೇಶಿಸಿದ್ದಾರೆ. ಹೀಗಾಗಿ ಅಕ್ಷಯಾ ತೃತಿಯಾ ದಿನ ಸೂರ್ಯ ವೃಷಭರಾಶಿಗೆ ಪ್ರವೇಶಿಸುತ್ತಿದ್ದಂತೆ ಮೂರೂ ಗ್ರಹಗಳ ಯುತಿ ಸಂಭವಿಸಿ ತ್ರಿಗ್ರಹಿ ಯೋಗ (Trigrahi Yog) ನಿರ್ಮಾಣಗೊಳ್ಳಲಿದೆ. ಈ ಮೂರು ಗ್ರಹಗಳ ಯೋಗದಲ್ಲಿ ಅಕ್ಷಯ ತೃತಿಯಾ ವೃತ ಆಚರಿಸಲಾಗುತ್ತಿದೆ. ಈ ಮೂರೂ ಗ್ರಹಗಳಿಂದ ಉಂಟಾಗುವ ಯೋಗದ ಪ್ರಭಾವ ಎಲ್ಲಾ ರಾಶಿಗಳ (Sun Signs) ಮೇಲೆ ಬೀಳಲಿದೆ. ವಿಭಿನ್ನ ರಾಶಿಗಳ ಮೇಲೆ ಯಾವ ಯಾವ ಪ್ರಭಾವ ಉಂಟಾಗುತ್ತದೆ ಎಂಬುದನ್ನೊಮ್ಮೆ ತಿಳಿದುಕೊಳ್ಳೋಣ ಬನ್ನಿ.

ಮೇಷ:ಈ ರಾಶಿಯ ಜಾತಕದವರಿಗೆ ಈ ತ್ರಿಗ್ರಹಿ ಯೋಗ ಶುಭಫಲದಾಯಕವಾಗಿಲ್ಲ. ಧನ ಹಾನಿಯ ಯೋಗ ಇದೆ. ಆರೋಗ್ಯದ ಪ್ರತಿ ಎಚ್ಚರಿಕೆಯಿಂದ ಇರುವ ಅವಶ್ಯಕತೆ ಇದೆ. ಕೌಟುಂಬಿಕ ಸಮಸ್ಯೆಗಳು ಹೆಚ್ಚಾಗಲಿವೆ.

ವೃಷಭ:ಮಿಶ್ರ ಫಲ ಸಿಗಲಿದೆ. ಈ ರಾಸಿಯ ಜಾತಕದವರಿಗೆ ರಾಜಕೀಯ ಜೀವನದಲ್ಲಿ ಸಫಲತೆ ಸಿಗಲಿದ್ದರೆ, ಓಡಾಟ, ಒತ್ತಡಗಳು ಹೆಚ್ಚಾಗಲಿವೆ.

ಮಿಥುನ:ಧನ ಹಾನಿಯಾಗುವ ಸಾಧ್ಯತೆ ಇದೆ. ಹಣವನ್ನು ಎಚ್ಚರಿಕೆಯಿಂದ ಖರ್ಚು ಮಾಡಿ. ಕುಟುಂಬ ಸದಸ್ಯರ ಪ್ರತಿ ಚಿಂತೆ ಹೆಚ್ಚಾಗಲಿದೆ.

ಕರ್ಕ: ಕೆಲಸ ಕಾರ್ಯಗಳಲ್ಲಿ ಯಶಸ್ಸು ಲಭಿಸಲಿದೆ. ವ್ಯಾಪಾರದ ದೃಷ್ಟಿಯಿಂದ ಎಚ್ಚರಿಕೆ ವಹಿಸಿ. ಮಾನಸಿಕ ಒತ್ತಡ ಹೆಚ್ಚಾಗಲಿದೆ.

ಸಿಂಹ:ರಾಜಕೀಯ ಜೀವನಕ್ಕೆ ಸಂಬಂಧ ಪಟ್ಟ ಜನರಿಗೆ ಈ ಯೋಗ ಉತ್ತಮವಾಗಿದೆ. ಕೌಟುಂಬಿಕ ಸದಸ್ಯರ ಪ್ರತಿ ಪ್ರೇಮ ಹೆಚ್ಚಿಸಿ, ಇಲ್ಲದೆ ಹೋದಲ್ಲಿ ಸಮಸ್ಯೆಗಳು ಎದುರಾಗುವ ಸಾಧ್ಯತೆ ಇದೆ. ವ್ಯಾಪಾರಿಗಳು ಎಚ್ಚರಿಕೆಯಿಂದ ಇರಬೇಕು.

ಕನ್ಯಾ:ಈ ಜಾತಕ ಹೊಂದಿದ ಜನರು ಭೂ ಕುರಿತಾದ ವಿವಾದ ಎದುರಾಗುವ ಸಾಧತೆ ಇದೆ. ಕೋರ್ಟ್-ಕಚೇರಿ ಹೊರಗಡೆಯೇ ವಿವಾದ ಇತ್ಯರ್ಥಪಡಿಸುವುದು ಉತ್ತಮ

ತುಲಾ: ನಿಂತುಹೋದ ಹಣ ಸಿಗಲಿದೆ. ಆರೋಗ್ಯ ಹಾಳಾಗುವ ಸಾಧ್ಯತೆ ಇದೆ. ಗಾಯ ಉಂಟಾಗುವ ಸಾಧ್ಯತೆ ಇದೆ. ಹೀಗಾಗಿ ಎಚ್ಕಾರಿಕೆಯಿಂದಿರಿ.

ವೃಶ್ಚಿಕ: ಗ್ರಹಸ್ಥ ಜೀವನದಲ್ಲಿ ಸಮಸ್ಯೆಗಳು ಎದುರಾಗುವ ಸಾಧತೆ ಇದೆ. ಕುಟುಂಬದಲ್ಲಿ ಒತ್ತಡದ ಸ್ಥಿತಿ ನಿರ್ಮಾಣಗೊಳ್ಳಲಿದೆ. ಆರೋಗ್ಯದ ಪ್ರತಿ ಎಚ್ಚರದಿಂದ ಇರಿ. ನೌಕರಿಯಲ್ಲಿ ಸ್ಥಾನ ಪರಿವರ್ತನೆಯ ಯೋಗವಿದೆ.

ಧನು: ನಿಮಗೆ ಈ ಯೋಗ ಶುಭ ಫಲದಾಯಕವಾಗಿದೆ. ಶತ್ರುಗಳ ಮೇಲೆ ಜಯನ ಸಾಧಿಸುವಿರಿ. ಹಳೆ ಖಟ್ಲೆಯಿಂದ ಮುಕ್ತಿ ಸಿಗುವ ಸಾಧ್ಯತೆ ಇದೆ. ಗಂಭೀರವಾಗಿ ಕಾಯಿಲೆಯಿಂದ ಬಳಲುತ್ತಿರುವವರ ಆರೋಗ್ಯ ಸ್ಥಿತಿಯಲ್ಲಿ ಸುಧಾರಣೆಯಾಗಲಿದೆ. ಕೊಡುಗೆ ಅಥವಾ ಧನಪ್ರಾಪ್ತಿಯ ಸಂಕೇತ ಕೂಡ ಇದೆ.

ಮಕರ:ಸ್ನೇಹಿತರ ಜೊತೆಗೆ ಮತಭೇದ, ಆಕಸ್ಮಿಕವಾಗಿ ಬಂದ ಸಮಸ್ಯೆಯಿಂದ ಕಷ್ಟ ಉಂಟಾಗುವ ಸಾಧ್ಯತೆ ಇದೆ.

ಕುಂಭ:ರಾಜಕೀಯ ಶತ್ರುಗಳು ದೂರಾಗಲಿದ್ದಾರೆ. ವಾಹನ ಚಲಾಯಿಸುವಾಗ  ವಿಶೇಷ ಗಮನಹರಿಸಿ. ತಾಯಿಯ ಆರೋಗ್ಯದ ಕಡೆಗೆ ಗಮನಹರಿಸಿ.

ಮೀನ:ಸಹೋದರ-ಸಹೋದರಿಯರ ಮಧ್ಯೆ ಮತಭೇಧ ಉಂಟಾಗುವ ಸಾಧ್ಯತೆ ಇದೆ. ಕಾರ್ಯಕ್ಷೇತ್ರದಲ್ಲಿ ಸಮಯದ ಕಡೆಗೆ ವಿಶೇಷ ಗಮನಹರಿಸಿ. ನಿಮ್ಮ ಯಶಸ್ಸಿನ ಸಂಪೂರ್ಣ ಫಲ ನಿಮಗೆ ದೊರಕುವುದಿಲ್ಲ.ಒತ್ತಡದ ಸ್ಥಿತಿ ಉಂಟಾಗುವ ಸಾಧ್ಯತೆ ಇದೆ. ವಾಹನ ಚಲಿಸುವಾಗ ಗಮನವಿಟ್ಟು ವಾಹನ ಚಲಾಯಿಸಿ.

S S Benakanalli

Founder , Director Of KK NEWS KANNADA _ S S BENAKANAHALLI

Leave a Reply

Your email address will not be published. Required fields are marked *