ಮೊನ್ನೆ ಹೋಗಿ ಸಾಯ್ರಿ! ಇಂದು ನಾನು ಮಾತ್ರ ಬದುಕಬೇಕು! ಉಮೇಶ್ ಕತ್ತಿ ವಿರುದ್ಧ ಕಾಂಗ್ರೆಸ್ ಕಿಡಿ
ಬೆಂಗಳೂರು: ಮತ್ತೊಂದು ವಿವಾದಾತ್ಮಕ ಹೇಳಿಕೆ ನೀಡಿರುವ ಸಚಿವ ಉಮೇಶ್ ಕತ್ತಿ ವಿರುದ್ಧ ಕಾಂಗ್ರೆಸ್ ಕಿಡಿಕಾರಿದೆ. ಈ ಕುರಿತಾಗಿ ಟ್ವೀಟ್ ಮಾಡಿರುವ ಕಾಂಗ್ರೆಸ್ ಮೊನ್ನೆ – ಹೋಗಿ ಸಾಯ್ರಿ ಇಂದು – ನೀವ್ ಬದುಕೋದು ನನಗೆ ಅನಗತ್ಯ, ನಾನು ಮಾತ್ರ ಬದುಕಬೇಕು! ಎಂದು ಕತ್ತಿ ಹೇಳಿಕೆಯನ್ನು ಉಲ್ಲೇಖಿಸಿ ಆಕ್ರೋಶ ವ್ಯಕ್ತಪಡಿಸಿದೆ
ಕೆಲ ದಿನಗಳ ಹಿಂದೆ ಪರಿತರ ಕಡಿತಕ್ಕೆ ಫೋನ್ ಮಾಡಿ ಪ್ರಶ್ನಿಸಿದ್ದ ರೈತ ಮುಖಂಡರೊಬ್ಬರಿಗೆ ಹೋಗಿ ಸಾಯಿರಿ ಎಂಬ ಮಾತನ್ನು ಉಮೇಶ್ ಕತ್ತಿ ಅಂದಿದ್ದರು. ಸಚಿವರ ಈ ಹೇಳಿಕೆಗೆ ಸ್ವತಃ ಸಿಎಂ ಬಿಎಸ್ ಯಡಿಯೂರಪ್ಪ ವಿಷಾದ ವ್ಯಕ್ತಪಡಿಸಿದ್ದರು.
ಇದೀಗ ಕೊರೊನಾ ಮೂರನೇ ಅಲೆ ಬರುತ್ತೆ.ನಾವು-ನೀವು ಎಲ್ಲರು ಉಳಿಯಬೇಕು. ನೀವು ಉಳಿಯುತ್ತೀರೋ ಇಲ್ಲವೂ ಗೊತ್ತಿಲ್ಲ. ನಾನಂತೂ ಉಳಿಯಬೇಕು ಎಂದು ಬಾಗಲಕೋಟೆಯ ಬನಹಟ್ಟಿಯಲ್ಲಿ ಸಚಿವ ಉಮೇಶ್ ಕತ್ತಿ ಹೇಳಿದ್ದಾರೆ.
ಬನಹಟ್ಟಿಯಲ್ಲಿ ಕೋವಿಡ್ ತಡೆಗಟ್ಟಲು ತಾಲೂಕು ಮಟ್ಟದಲ್ಲಿ ಸಭೆ ನಡೆಸಿದರು. ಈ ವೇಳೆ ಮಾತನಾಡುವಾಗ ಸಚಿವ ಉಮೇಶ್ ಕತ್ತಿ ಈ ರೀತಿ ಹಾಸ್ಯ ಚಟಾಕಿ ಹಾರಿಸಿದರು. ಸಚಿವರ ಈ ಹೇಳಿಕೆ ಹಾಸ್ಯವಾದರು ಇದೀಗ ಟೀಕೆಗೆ ಕಾರಣವಾಗಿದೆ.