ಕಣ್ಣಿ ಮಾರುಕಟ್ಟೆ ಪ್ರದೇಶದ ನಿರ್ಗತಿಕರಿಗೆ ಅನ್ನಸಂತರ್ಪಣೆ

ಕಲಬುರಗಿ:ಮೇ.11:ನಗರದ ಕಣ್ಣಿ ಮಾರುಕಟ್ಟೆ ಪ್ರದೇಶದ ಜೆಡಿಎ ಲೇಔಟ್ ಬಡಾವಣೆಯಲ್ಲಿನ ನಿರ್ಗತಿಕ ಬಡ ಕುಟುಂಬಗಳಿಗೆ ಪೃಥ್ವಿ ಹೈದ್ರಾಬಾದ್ ಕನಾಟಕ ಶೋಷಿತ ಮಹಿಳೆಯರ ಅಭಿವೃದ್ಧಿ ಸಂಸ್ಥೆ ಹಾಗೂ ದೇವಾನಾಂಪ್ರಿಯ ಕಲಾ ಪದವಿ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನಾ ಘಟಕದ ಆಶ್ರಯದಲ್ಲಿ ಕುಟುಂಬಗಳಿಗೆ ಅನ್ನ ಸಂತರ್ಪಣೆ ನೆರವೇರಿಸಲಾಯಿತು.
ಗುಲಬರ್ಗಾ ವಿಶ್ವವಿದ್ಯಾಲಯದ ರಾಷ್ಟ್ರೀಯ ಸೇವಾ ಯೋಜನೆ ಘಟಕದ ಸಂಯೋಜಕ ಡಾ. ರಮೇಶ್ ಲಂಡನಕರ್ ಅವರು ಕೂಲಿ ಕಾರ್ಮಿಕರಿಗೆ ಹಾಗೂ ಕೋವಿಡ್ ಸಂತ್ರಸ್ತರಿಗೆ ಅನ್ನಸಂತರ್ಪಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ, ಇಂದಿನ ಕೊರೋನಾ 2ನೇ ಅಲೆಯಲ್ಲಿ ಸಂಕಷ್ಟದ ವೇಳೆಯಲ್ಲಿ ಎಲ್ಲರೂ ಸುರಕ್ಷಿತರಾಗಿರಬೇಕು. ಇಂತಹ ಬಡ ಜನರಿಗೆ ಸಹಾಯಕರಾಗಿ ಮಾನವೀಯ ನೆಲೆಯಲ್ಲಿ ಸಹಾಯ ಹಸ್ತ ಚಾಚಬೇಕು ಎಂದು ಹೇಳಿದರು.
ಸಂಸ್ಥೆಯ ಗೌರವಧ್ಯಕ್ಷ ಡಾ ಸಂಜೀವ್ ನಿರ್ಮಲಕರ್ ಅವರು ಮಾತನಾಡಿ, ಕೊರೋನಾ ಅಲೆ ತಡೆಗಟ್ಟಲು ಸಾಮಾಜಿಕ ಅಂತರ ಕಾಪಾಡಿ ಸಕಾರದ ಮಾರ್ಗಸೂಚಿಗಳನ್ನು ಅನುಸರಿಸಬೇಕು. ಮನೆಯಿಂದ ಯಾರು ಹೊರ ಬರದೇ ಸುರಕ್ಷಿತವಾಗಿರಬೇಕಾಗಿದೆ ಎಂದು ಮನವಿ ಮಾಡಿದರು.
ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಕವಿತಾ ನಿರ್ಮಲಕರ್, ನ್ಯಾಯವಾದಿ ರಮೇಶ್ ದೊಡ್ಡಮನಿ, ಸೋಹನ್ ನಿರ್ಮಲಕರ್ ಮುಂತಾದವರು ಉಪಸ್ಥತರಿದ್ದರು. ಇದೇ ಸಂದರ್ಭದಲ್ಲಿ ಸುಮಾರು 30 ಕುಟುಂಬಗಳಿಗೆ ಅನ್ನ ಸಂತರ್ಪಣೆ ಮಾಡಲಾಯಿತು.

S S Benakanalli

Founder , Director Of KK NEWS KANNADA _ S S BENAKANAHALLI

Leave a Reply

Your email address will not be published. Required fields are marked *