ಅಫಜಲಪೂರ: ಕೊರೊನಾ ಸೋಂಕಿನ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು ಇದರ ಜೊತೆಗೆ ಸಾವಿನ ಸಂಖ್ಯೆಯೂ ಏರುತ್ತಿದೆ.
ಅಫಜಲಪೂರ: ಕೊರೊನಾ ಸೋಂಕಿನ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು ಇದರ ಜೊತೆಗೆ ಸಾವಿನ ಸಂಖ್ಯೆಯೂ ಏರುತ್ತಿದೆ
ಗ್ರಾಮೀಣ ಪ್ರದೇಶಗಳಲ್ಲಿ ಕೊವಿಡ ಪ್ರಕರಣಗಳ ದಿನದಿಂದ ದಿನಕ್ಕೆ ಹೆಚ್ಚಾಗುತ್ತಾ ಹೊಗುತ್ತಿರುವ ಹಿನ್ನಲೆ ಮುನ್ನೆಚ್ಚರಿಕೆಯಾಗಿ
ಅಫಜಲಪೂರ ತಾಲೂಕಿನ ಮಣ್ಣೂರ ಗ್ರಾಮದಲ್ಲಿ ಇಂದು ಮಣ್ಣೂರ ಗ್ರಾಮ ಪಂಚಾಯತಿ ವತಿಯಿಂದ ಕೊರೊನಾ ಎರಡನೆ ಅಲೆ ಹೆಚ್ಚಾಗುತ್ತಿರುವ ಹಿನ್ನೆಲೆ ಗ್ರಾಮದ ಜನತೆ ಸುರಕ್ಷಿತವಾಗಿ ಇರಬೇಕು ಎಂದು ಸ್ಯಾನಿಟೈಜರ ಮಾಡಲಾಯಿತು.
ಮಾಜಿ ಗ್ರಾ.ಪಂ ಅದ್ಯಕ್ಷ ರಮೇಶ ಬಾಕೆ ಹಾಗೂ ಹಿರಿಯರಾದ ಸಾ.ಸಿ.ಬೇನಕನಹಳ್ಳಿ, ಗ್ರಾ.ಪಂ.ಅಧ್ಯಕ್ಷೆ ರೇಷ್ಮಾ ಮಾಂಗ ಇವರ ನೇತೃತ್ವದಲ್ಲಿ ಕೊರೊನಾ ಮಹಾಮಾರಿ ಓಡಿಸಲು ಮಣ್ಣೂರ ಗ್ರಾಮದ ಎಲ್ಲಾ ಓಣಿಯಲ್ಲಿ ಸ್ಯಾನಿಟೈಜರ ಮಾಡಲಾಯಿತು.
4 ನೇ ವಾರ್ಡಿನ ಸದಸ್ಯರಾದ ಅನಿತಾ ಶರಣಪ್ಪ ತಾರಾಪೂರ ಇವರ ಪತಿ ಶರಣು ತಾರಾಪೂರ ಇವರು ಪ್ರತಿ ವಾರ್ಡನಲ್ಲಿ ಇರುವ ಎಲ್ಲಾ ರಸ್ತೆಗಳಿಗೆ ತಮ್ಮ ಸ್ವಂತ ಟ್ಯಾಕ್ಟರ ತಂದು ಟ್ಯಾಕ್ಟರ ಮುಖಾಂತರ ಸ್ಯಾನಿಟೈಜರ ಮಾಡಲಾಯಿತು.
ಕೊವಿಡ 19 ಬಗ್ಗೆ ಗ್ರಾಮ ಪಂಚಾಯತಿ ವತಿಯಿಂದ ದ್ವನಿ ವರ್ದಕ ಮೂಲಕ ಜಾಗೃತಿ ಮೂಡಿಸಲಾಯಿತು.
ಪಂಚಾಯತಿ ವತಿಯಿಂದ ಸ್ಯಾನಿಟೈಜರ ವ್ಯವಸ್ಥೆ ಮಾಡಿಕೊಡಲಾಯಿತು.
ಈ ಸಂದರ್ಭದಲ್ಲಿ ಗ್ರಾ.ಪಂ ಉಪಾದ್ಯಕ್ಷ ಬಿ.ರಾಜು ಬೇನಕನಹಳ್ಳಿ, ಬಸವರಾಜ ವಾಯಿ, ಅಪ್ಪಸಾಬ ಹೊಸೂರಕರ, ಶಿವುಗೌಡ ಕರೂಟಿ, ಮಲಕಣ್ಣಾ ಹೊಸೂರಕರ, ಮಶಾಕ ಗೌರ, ಮಹಾದೇವ ಪ್ಯಾಟಿ, ಚಂದು ದೈತನ, ಶಾವರಸಿದ್ದ ಕುಡಿಗನೂರ, ಸಿದ್ದಾರಾಮ ಬದನಿಕಾಯಿ, ಚಂದು ಹಿರೇಕುರಬರ ಇತರರಿದ್ದರು.